ಬೆಂಗಳೂರು : ಎಲ್ಲಾ ಹಣ್ಣುಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿಯೇ ಇರಬೇಕೆಂದಿಲ್ಲ. ಡಯಾಬಿಟೀಸ್ ರೋಗಿಗಳು ಕೆಲವು ಹಣ್ಣುಗಳಿಂದ ದೂರವಿರಬೇಕು. ಇಲ್ಲವಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಹಾಗಾಗಿ ಡಯಾಬಿಟೀಸ್ ರೋಗಿಗಳು ಹಣ್ಣು ಸೇವನೆಗೆ ಮುನ್ನ ವೈದ್ಯರ ಸಲಹೆ ಪಡೆದು ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಯಾಕೆಂದರೆ ಕೆಲವೊಂದು ಹಣ್ಣುಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚಾಗುತ್ತದೆ. ಹೀಗಾದಾಗ ಮಧುಮೇಹಿಗಳ ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು.


COMMERCIAL BREAK
SCROLL TO CONTINUE READING

ದ್ರಾಕ್ಷಿ
ಮಧುಮೇಹ ರೋಗಿಗಳ ಆರೋಗ್ಯಕ್ಕೆ ದ್ರಾಕ್ಷಿಯು ಹಾನಿಕಾರಕವಾಗಿದೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದರೂ, ಇದು ಮಧುಮೇಹ ರೋಗಿಗಳು ಈ ಹಣ್ಣಿನಿಂದ ದೂರ ಇರಬೇಕು. ಯಾಕೆಂದರೆ ದ್ರಾಕ್ಷಿಯಲ್ಲಿರುವ ಸಕ್ಕರೆಯ ಪ್ರಮಾಣವು ಮಧುಮೇಹ ರೋಗಿಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಡಯಾಬಿಟೀಸ್ ರೋಗಿಗಳು ಈ ಹಣ್ಣಿನಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.


ಇದನ್ನೂ ಓದಿ : Side effects of milk : ಈ ಆರೋಗ್ಯ ಸಮಸ್ಯೆಗಳಿದ್ದರೆ ಹಾಲನ್ನು ಮುಟ್ಟಿಯೂ ನೋಡಬಾರದು


ಬಾಳೆಹಣ್ಣು : 
ಮಧುಮೇಹವಿದ್ದಾಗ ಬಾಳೆಹಣ್ಣನ್ನು ತಿನ್ನಬಾರದು. ಈ ಹಣ್ಣಿನಲ್ಲಿಯೂ ಕಾರ್ಬೋಹೈಡ್ರೇಟ್  ಮತ್ತು ಸಕ್ಕರೆಯ ಪ್ರಮಾಣವು ಅಧಿಕವಾಗಿರುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವ ಅಪಾಯವಿದೆ. ಹೀಗಿರುವಾಗ ಡಯಾಬಿಟೀಸ್ ರೋಗಿಗಳು ಬಾಳೆ ಹಣ್ಣಿನಿಂದ ದೂರವಿರಬೇಕು. ಇಲ್ಲದಿದ್ದರೆ  ಸಮಸ್ಯೆ ಹೆಚ್ಚಾಗಬಹುದು. 


ಅಂಜೂರ  :
ಇದಲ್ಲದೆ, ಅಂಜೂರದ ಸೇವನೆಯು ಮಧುಮೇಹ ರೋಗಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಅದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯ ಪ್ರಮಾಣವು ತುಂಬಾ ಅಧಿಕವಾಗಿರುತ್ತದೆ. ಹೀಗಿರುವಾಗ ಅಂಜೂರವನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕೂಡಾ ಹೆಚ್ಚಾಗುತ್ತದೆ. ಹಾಗಾಗಿ ಡಯಾಬಿಟೀಸ್ ರೋಗಿಗಳು ಈ ಹಣ್ಣುಗಳನ್ನು ತಿನ್ನುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಇಲ್ಲವಾದರೆ ಅನಾಹುತ ತಪ್ಪಿದ್ದಲ್ಲ. ಸಾಧ್ಯವಾದರೆ, ಡಯಾಬಿಟೀಸ್ ರೋಗಿಗಳು ಯಾವ ಹಣ್ಣುಗಳನ್ನು  ಸೇವಿಸಬಹುದು  ಎನ್ನುವುದರ ಬಗ್ಗೆ ವೈದ್ಯರ  ಸಲಹೆ ಪಡೆಯುವುದು  ಒಳ್ಳೆಯದು. 


ಇದನ್ನೂ ಓದಿ Health Tips: ಹೆಚ್ಚು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತೀರಾ... ಹುಷಾರ್!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.