ಆರೋಗ್ಯ ಸಲಹೆಗಳು: ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆ ನೋವು, ಮಂಡಿ ನೋವು, ಬೆನ್ನು ನೋವು, ಮೈ ಕೈ ನೋವು ಹೀಗೆ ಯಾವುದೇ ನೋವಿಗೆ ಕೆಲವರು ತಕ್ಷಣ ನೋವು ನಿವಾರಕಗಳನ್ನು ಅಂದರೆ ಪೈನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ನೋವು ನಿವಾರಕಗಳು ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು ಎಂದು ನಿಮಗೆ ತಿಳಿದಿದೆಯೇ...?
ಹೌದು, ನೀವು ಸಹ ಅಗತ್ಯಕ್ಕಿಂತ ಹೆಚ್ಚು ನೋವು ನಿವಾರಕವನ್ನು ಬಳಸುತ್ತಿದ್ದರೆ ಜಾಗರೂಕರಾಗಿರಿ, ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಆದ್ದರಿಂದ ಯಾವ ಪರಿಸ್ಥಿತಿಯಲ್ಲಿ ನೋವು ನಿವಾರಕಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ತಿಳಿದಿರುವುದು ಬಹಳ ಮುಖ್ಯ.
ಅತಿಯಾದ ನೋವು ನಿವಾರಕಗಳಿಂದ ಉಂಟಾಗಬಹುದಾದ ಸಮಸ್ಯೆಗಳಿವು:-
>> ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸುವ ಇಂತಹವರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಕಿಡ್ನಿ ಮತ್ತು ಲಿವರ್ ಗೆ ಹಾನಿಯಾಗುತ್ತದೆ.
>> ಇದಲ್ಲದೆ, ಹೊಟ್ಟೆಯಲ್ಲಿ ರಕ್ತಸ್ರಾವವಾಗಬಹುದು.
>> ರಕ್ತದೊತ್ತಡದಲ್ಲಿ ಹಠಾತ್ ಇಳಿಕೆ, ಆಯಾಸ ಮತ್ತು ಮಲಬದ್ಧತೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಅಗತ್ಯವಿಲ್ಲದಿದ್ದರೆ ಪೈನ್ ಕಿಲ್ಲರ್ ಮಾತ್ರೆಗಳನು ಸೇವಿಸದಿರಲು ಪ್ರಯತ್ನಿಸಿ. ಇದಲ್ಲದೆ, ವೈದ್ಯರ ಸಲಹೆಯಿಲ್ಲದೆ ಯಾವುದೇ ಕಾರಣಕ್ಕೂ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
ಇದನ್ನೂ ಓದಿ- Diabetes: ಅಡುಗೆಮನೆಯಲ್ಲಿರುವ ಈ ವಸ್ತುವಿನಿಂದ ಬ್ಲಡ್ ಶುಗರ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು
ಈ ಸಂದರ್ಭಗಳಲ್ಲಿ, ನೋವು ನಿವಾರಕಗಳ ಅತಿಯಾದ ಬಳಕೆಯು ಮಾರಕವಾಗಬಹುದು:
* ಪದೇ ಪದೇ ನೋವು ನಿವಾರಕ ಮಾತ್ರೆಗಳ ಸೇವನೆಯು ಮಾರಕವಾಗಬಹುದು. ಹಾಗಾಗಿ, ಸಣ್ಣ-ಪುಟ್ಟ ನೋವುಗಳಿಗೆ ಅಥವಾ ವೈದ್ಯರ ಸಲಹೆ ಇಲ್ಲದಿದ್ದರೆ ಪೈನ್ ಕಿಲ್ಲರ್ ಸೇವಿಸಬೇಡಿ.
* ನೋವು ನಿವಾರಕವನ್ನು ಸೇವಿಸಿದ ನಂತರ ಅನೇಕ ಬಾರಿ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ, ಅದನ್ನು ಬಳಸಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
* ಅದೇ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ನೋವು ನಿವಾರಕಗಳ ಬಳಕೆಯು ಇನ್ನಷ್ಟು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ಇದನ್ನೂ ಓದಿ- Weight Loss Mistakes: ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲವೇ? ನೀವೂ ಈ ತಪ್ಪು ಮಾಡುತ್ತೀದ್ದೀರಾ!
* ಯಾವುದೇ ರೀತಿಯ ಹೃದಯ ಸಂಬಂಧಿ ಸಮಸ್ಯೆ ಇರುವವರು ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಮೊದಲು ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು.
* ಅಲ್ಲದೆ, ಬಿಪಿ, ಮಧುಮೇಹ ಮತ್ತು ಮೂತ್ರಪಿಂಡದ ರೋಗಿಗಳು ಸಹ ವೈದ್ಯರ ಸಲಹೆಯಿಲ್ಲದೆ ಪೈನ್ ಕಿಲ್ಲರ್ ಟ್ಯಾಬ್ಲೆಟ್ ಗಳನ್ನು ಬಳಸಬಾರದು.
* ಇನ್ನೊಂದು ಪ್ರಮುಖ ವಿಷಯವೆಂದರೆ ನೋವು ನಿವಾರಕವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಹಾಗೆ ಮಾಡುವುದರಿಂದ ನಿಮ್ಮ ಮೂತ್ರಪಿಂಡಗಳು, ಯಕೃತ್ತು ಮತ್ತು ಹೊಟ್ಟೆಗೆ ಹಾನಿಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.