ಮಧುಮೇಹ ರೋಗಿಗಳಿಗೆ ಅರಿಶಿನ: ಮಧುಮೇಹಿಗಳಿಗೆ ಮಾರುಕಟ್ಟೆಯಲ್ಲಿ ಹಲವಾರು ಔಷಧಗಳು ಲಭ್ಯವಿದ್ದರೂ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮನೆಯಲ್ಲಿರುವ ಕೆಲವು ಪದಾರ್ಥಗಳು ಕೂಡ ಸಹಕಾರಿ ಆಗಲಿವೆ.
ಈ ಲೇಖನದಲ್ಲಿ ಅಂತಹ ಒಂದು ಪರಿಹಾರವನ್ನು ನಾವು ನಿಮಗಾಗಿ ತಂದಿದ್ದೇವೆ. ಇದು ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಅರಿಶಿನವು ಮಧುಮೇಹಿಗಳಿಗೆ ಬ್ಲೋದ್ದ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಸಹಕಾರಿ ಆಗಿದೆ.
ಹೌದು, ಹಲವು ರೋಗಗಳಿಗೆ ರಾಮಬಾಣದಂತಿರುವ ಅರಿಶಿನದಿಂದ ರಕ್ತದಲ್ಲಿನ ಸಕ್ಕರೆಯನ್ನು ಸಹ ಸುಲಭವಾಗಿ ನಿಯಂತ್ರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಾದರೆ ಮಧುಮೇಹ ರೋಗಿಗಳು ಇದನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ.
ಬಹಳ ಹಿಂದಿನಿಂದಲೂ ಭಾರತೀಯ ಪಾಕ ಪದ್ಧತಿಯಲ್ಲಿ ಅರಿಶಿನವು ಪ್ರಮುಖ ಮಸಾಲೆ ಪದಾರ್ಥವಾಗಿದೆ. ಅರಿಶಿನದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ನಿಮಗೆ ತಿಳಿದಿರಬಹುದು. ಕೆಲವು ಸಂಶೋಧನೆಗಳ ಪ್ರಕಾರ, ಅರಿಶಿನದಲ್ಲಿರುವ ಕರ್ಕ್ಯುಮಿನ್ ಹಲವಾರು ರೋಗಗಳ ವಿರುದ್ಧ ಹೋರಾಡಲು ಹೆಚ್ಚು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಮಧುಮೇಹ ಇರುವವರಿಗೆ ಅರಿಶಿನವು ವರದಾನವಾಗಿದೆ ಎಂದು ಸಾಬೀತುಪಡಿಸುತ್ತದೆ.
ಇದನ್ನೂ ಓದಿ- Weight Loss Mistakes: ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲವೇ? ನೀವೂ ಈ ತಪ್ಪು ಮಾಡುತ್ತೀದ್ದೀರಾ!
ಅರಿಶಿನವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ :
ಅರಿಶಿನವು ನಿಮ್ಮ ಗಾಯಗಳನ್ನು ಗುಣಪಡಿಸಲು ಮಾತ್ರವಲ್ಲ, ಮಧುಮೇಹ ರೋಗಿಗಳಿಗೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಇದರಲ್ಲಿರುವ ಕೆಲವು ಗುಣಲಕ್ಷಣಗಳು ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಮಧುಮೇಹದ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುವ ಸರಳ ವಿಧಾನವೆಂದರೆ ಅರಿಶಿನ ಹಾಲು. ಇದನ್ನು ತಯಾರಿಸಲು ಮೊದಲು ಹಾಲನ್ನು ಕುದಿಸಿ ನಂತರ ಅದಕ್ಕೆ ಅರಿಶಿನ ಹಾಕಿ. ಇದನ್ನು ಕುದಿಯಲು ಬಿಡಿ. ನಂತರ ಅದನ್ನು ಸೇವಿಸಿ. ಕೆಲವು ಅಧ್ಯಯನಗಳ ಪ್ರಕಾರ, ಈ ಹಾಲು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ನೆನಪಿಡಿ ಕೆನೆರಹಿತ ಹಾಲನ್ನು ಮಾತ್ರ ಬಳಸಿ.
ಇದನ್ನೂ ಓದಿ- Cholesterol Control Drink: ಈ ಡ್ರಿಂಕ್ಸ್ ಸಹಾಯದಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು
ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಅರಿಶಿನವನ್ನು ಈ ವಿಧಾನಗಳಲ್ಲಿಯೂ ಬಳಸಬಹುದು:
ಅರಿಶಿನದ ಹಾಲನ್ನು ಹೊರತುಪಡಿಸಿ ಇನ್ನೂ ಹಲವು ವಿಧದಲ್ಲಿ ಅರಿಶಿನವನ್ನು ಬಳಸಬಹುದು. ನೀವು ಕೆಲವು ಖಾದ್ಯಗಳನ್ನು ತಯಾರಿಸುವಾಗ ಅರಿಶಿನವನ್ನು ಬಳಸಬಹುದು. ಇದಲ್ಲದೆ, ನೀವು ಅರಿಶಿನದ ನೀರನ್ನು ಸಹ ಕುಡಿಯಬಹುದು. ಆದರೆ, ನಿಮಗೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ನೀವು ವೈದ್ಯರ ಸಲಹೆ ಪಡೆಯದೇ ಅರಿಶಿನವನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.