ನವದೆಹಲಿ : ಹೃದಯ ನಮ್ಮ ಶರೀರದ ಮಹತ್ವಪೂರ್ಣ ಅಂಗ. ಹೆಲ್ತಿ ಹೃದಯ (Healthy heart) ಅತ್ಯಂತ ಮುಖ್ಯ. ಹೃದಯ ಹೆಲ್ತೀ ಆಗಿದ್ದರೆ ಶರೀರವೇ ಹೆಲ್ತಿ ಆಗಿರುತ್ತದೆ. ಹಾಗಾಗಿ ಹೃದಯದ ಆರೋಗ್ಯ ಕಾಪಾಡುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ನಮ್ಮ  ಲೈಫ್‍ಸ್ಟೈಲ್ (Lifestyle) ಕಾರಣದಿಂದ ಹೃದಯದ ಆರೋಗ್ಯ ಬಿಗಡಾಯಿಸುತ್ತದೆ. ಹೆಲ್ತಿ ಹೃದಯಕ್ಕಾಗಿ ನಾವು ಖಂಡಿತವಾಗಿ ನಮ್ಮ ಊಟೋಪಚಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಮ್ಮ ಹೃದಯ ಆರೋಗ್ಯವಾಗಿರಬೇಕಾದರೆ ನಾವು ಈ ಕೆಲವು ವಸ್ತುಗಳನ್ನು ತಿನ್ನಲೇ ಬಾರದು. ಅಥವಾ ಕಡಿಮೆ  ತಿನ್ನಬೇಕು.


COMMERCIAL BREAK
SCROLL TO CONTINUE READING

1. ಉಪ್ಪು
ಆಹಾರದ ರುಚಿಗೆ ಉಪ್ಪು (Salt) ಅತ್ಯಂತ ಮುಖ್ಯ. ಉಪ್ಪು ಹಿತಮಿತವಾಗಿ ತಿಂದರೆ ಹಿತ. ಅಧಿಕ ಉಪ್ಪು ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ.  ಹೆಚ್ಚು ಉಪ್ಪು ತಿಂದರೆ ಬಿಪಿ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ರೋಗಗಳು (Heart disease) ಆವರಿಸಿಕೊಳ್ಳಬಹುದು.


ಇದನ್ನೂ ಓದಿ : Side Effects : ಮೊಟ್ಟೆಯ ಜೊತೆಗೆ ಈ ಆಹಾರಗಳನ್ನ ಅಪ್ಪಿತಪ್ಪಿಯೂ ಸೇವಿಸಬೇಡಿ! ಯಾಕೆ ಇಲ್ಲಿ ಓದಿ


2. ಮೈದಾ
ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ (Side effects of Maida). ಹೃದ್ರೋಗಿಗಳಿಗಂತೂ ಮೈದಾ ಖಂಡಿತಾ ಒಳ್ಳೆಯದಲ್ಲ.  ಇದರಿಂದ ಕೊಲೆಸ್ಟೆರಾಲ್ ಹೆಚ್ಚಾಗುತ್ತದೆ. ಮೈದಾ ಜಾಸ್ತಿ ತಿಂದರೆ ಹೃದ್ರೋಗಕ್ಕೆ ಕಾರಣವಾಗಬಹುದು. 


3. ಸಿಹಿ ವಸ್ತು
ಅಧಿಕ ಸಿಹಿ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಏರುಪೇರಾಗುತ್ತದೆ. ಮುಖ್ಯವಾಗಿ ಡಯಾಬಿಟೀಸ್ ಇರುವವರು ಸಿಹಿ ಕಡಿಮೆ ತಿನ್ನಬೇಕು. ಹೃದ್ರೋಗ ಇರುವವರೂ ಸಿಹಿ ತಿನಿಸಿನಿಂದ ದೂರ (Avoid sweets) ಇರಬೇಕು.


ಇದನ್ನೂ ಓದಿ : Green Tea : ಕೊರೋನಾ ವಿರುದ್ಧ ಹೋರಾಡಲು ಗ್ರೀನ್‌ ಟೀ : ಸಂಶೋಧನೆಯಿಂದ ಮಾಹಿತಿ ಬಹಿರಂಗ!


4. ಮೊಟ್ಟೆಯ ಹಳದಿ ಭಾಗ
ಮೊಟ್ಟೆಯ ಹಳದಿ ಭಾಗದಲ್ಲಿ (egg yolk) ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ. ಜೊತೆಗೆ ಇದರಲ್ಲಿ ಭರ್ಜರಿ ವಿಟಮಿನ್ ಕೂಡಾ ಇರುತ್ತದೆ. ಹಾಗಾಗಿ, ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದನ್ನು ಏಕಾಏಕಿ ನಿಲ್ಲಿಸುವುದು ಕೂಡಾ ಸರಿಯಲ್ಲ. ಆದರೆ, ಅದನ್ನು ಒಂದು ಮಿತಿಯಲ್ಲಿ ತಿನ್ನಬೇಕು. ಅತಿ ಮಾಡುವುದು ಹೃದಯಕ್ಕೆ ಒಳ್ಳೆಯದಲ್ಲ.


ಇವು ಹೆಲ್ತಿ ಹೃದಯಕ್ಕಾಗಿ ತಜ್ಞರು ಕೊಟ್ಟಿರುವ ಸಲಹೆ. ಆದರೆ, ಇದನ್ನು ಅನ್ವಯಿಸಿಕೊಳ್ಳುವ ಮೊದಲು ನೀವು ಪರಿಣಿತರೊಂದಿಗೆ ಸಮಾಲೊಚನೆ ಮಾಡಿಕೊಳ್ಳಿ.


ಇದನ್ನೂ ಓದಿ : Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ