Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ

Health benefits of capsicum: ಆರೋಗ್ಯಕ್ಕೆ ಕ್ಯಾಪ್ಸಿಕಂ ಬಹಳಷ್ಟು ಹಿತಕಾರಿ. ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಕೆರೊಟಿನಾಯ್ಡ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.  ಕ್ಯಾಪ್ಸಿಕಂನಲ್ಲಿ ಕ್ಯಾಲರಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

Written by - Ranjitha R K | Last Updated : Jun 6, 2021, 02:08 PM IST
  • ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಕೆರೊಟಿನಾಯ್ಡ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.
  • ಕ್ಯಾಪ್ಸಿಕಂನಲ್ಲಿ ಕ್ಯಾಲರಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
  • ಹಸಿರು ಕ್ಯಾಪ್ಸಿಕಂ ಆಂಟಿ ಆಕ್ಸಿಡೆಂಟ್ ಗುಣದ ಬಹುದೊಡ್ಡ ಮೂಲ ಎನ್ನಲಾಗಿದೆ.
Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ title=
ಹಸಿರು ಕ್ಯಾಪ್ಸಿಕಂ ಆಂಟಿ ಆಕ್ಸಿಡೆಂಟ್ ಗುಣದ ಬಹುದೊಡ್ಡ ಮೂಲ (photo zee news)

ನವದೆಹಲಿ : ಕ್ಯಾಪ್ಸಿಕಂ, ಇದನ್ನು ದೊಣ್ಣೆ ಮೆಣಸಿನಕಾಯಿ ಅಥವಾ ಶಿಮ್ಲಾ ಮಿರ್ಚಿ ಅಂತಲೂ ಕರೆಯುತ್ತಾರೆ. ಕ್ಯಾಪ್ಸಿಕಂ (Capsicum) ಪ್ರಯೋಜನದ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ವಿಶ್ವಾದ್ಯಂತ ಬಹಳಷ್ಟು ಖಾದ್ಯಗಳಲ್ಲಿ ಕ್ಯಾಪ್ಸಿಕಂ ಬಳಸುತ್ತಾರೆ. ಆರೋಗ್ಯಕ್ಕೆ ಕ್ಯಾಪ್ಸಿಕಂ ಬಹಳಷ್ಟು ಹಿತಕಾರಿ. ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಕೆರೊಟಿನಾಯ್ಡ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.  ಕ್ಯಾಪ್ಸಿಕಂನಲ್ಲಿ ಕ್ಯಾಲರಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇದರಿಂದ ಕೊಲೆಸ್ಟಾರಲ್ ಕಂಟ್ರೋಲ್ ಆಗುತ್ತದೆ. ಹಸಿರು ಕ್ಯಾಪ್ಸಿಕಂ ಆಂಟಿ ಆಕ್ಸಿಡೆಂಟ್ ಗುಣದ ಬಹುದೊಡ್ಡ ಮೂಲ ಎನ್ನಲಾಗಿದೆ. ಹಾರ್ಟ್‍ನ ಆರೋಗ್ಯಕ್ಕೂ ಕ್ಯಾಪ್ಸಿಕಂ (Benefits of Capsicum) ಬಹಳ ಪ್ರಯೋಜನಕಾರಿ. 

ಕ್ಯಾಪ್ಸಿಕಂ ತಿಂದರೆ ಆರೋಗ್ಯಕ್ಕೇನು ಲಾಭ..ತಿಳಿಯೋಣ

1. ರಕ್ತ ಹೀನತೆ: 
ಕ್ಯಾಪ್ಸಿಕಂನಲ್ಲಿ (Capsicum) ಕಬ್ಬಿಣದಾಂಶ ಮತ್ತು ವಿಟಮಿನ್ ಯಥೇಚ್ಛ ಪ್ರಮಾಣದಲ್ಲಿರುತ್ತದೆ. ಕ್ಯಾಪ್ಸಿಕಂ ತಿಂದರೆ ದೇಹದಲ್ಲಿ ಕಬ್ಬಿಣದಾಂಶದ ಕೊರತೆ ಉಂಟಾಗುವುದಿಲ್ಲ. ಹಾಗಾಗಿ, ರಕ್ತ ಹೀನತೆ ಅಥವಾ ಅನಿಮೀಯಾ  (anemia) ಉಂಟಾಗುವ ಸಾಧ್ಯತೆಯೇ ಇಲ್ಲ

ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯುವು ಸೇವಿಸಬೇಡಿ ಈ ಮಸಾಲೆ ಪದಾರ್ಥಗಳನ್ನು!

2. ತೂಕ ಇಳಿಸಲು:
ತೂಕ ಇಳಿಸಲು (Weight loss) ಕ್ಯಾಪ್ಸಿಕಂ ಬಹಳ ಪ್ರಯೋಜನಕಾರಿ. ಬೊಜ್ಜು (Fat)  ಕರಗಿಸಬಲ್ಲ ಸಾಕಷ್ಟು ಪೋಷಕಾಂಶಗಳು ಕ್ಯಾಪ್ಸಿಕಂನಲ್ಲಿ ಇದೆ.

3. ಕಣ್ಣುಗಳಿಗೆ:
ಕ್ಯಾಪ್ಸಿಕಂನಲ್ಲಿ ಲ್ಯೂಟಿನ್ ಮತ್ತು ಜೆಕ್ಸಾಥಿನ್ ಎಂಬ ಪೋಷಕಾಂಶಗಳಿವೆ. ಇವು ಕಣ್ಣಿನ ಆರೋಗ್ಯಕ್ಕೆ (Eye care benefits) ಸಾಕಷ್ಟು ಹಿತಕಾರಿ. ಹಾಗಾಗಿ, ಕಣ್ಣಿನ ಆರೋಗ್ಯಕ್ಕೆ ಕ್ಯಾಪ್ಸಿಕಂ ತಿನ್ನಲೇಬೇಕು. 

ಇದನ್ನೂ ಓದಿ : Mango Hair Pack: ಕೂದಲ ಆರೈಕೆಗೆ ಬಳಸಿ ಮಾವಿನ ಹೇರ್ ಪ್ಯಾಕ್

4. ತ್ವಚೆ;
ಕ್ಯಾಪ್ಸಿಕಂನಲ್ಲಿ ಕೆಪ್ಸಾಯಿಸಿನ್ ಎಂಬ ಹೆಸರಿನ ಪೋಷಕಾಂಶ ಸಿಗುತ್ತದೆ. ಇದು ಚರ್ಮವನ್ನು ಹಲವಾರು ಸಮಸ್ಯೆಗಳಿಂದ ರಕ್ಷಿಸುತ್ತದೆ. ಕ್ಯಾಪ್ಸಿಕಂ ತಿಂದರೆ ಸ್ಕಿನ್ ಹೆಲ್ತಿ (Skin health)ಇರುತ್ತದೆ. 

ಮೇಲಿರುವ ಎಲ್ಲಾ ಮಾಹಿತಿಗಳು ತಜ್ಞರು ಹೇಳಿರುವಂತದ್ದು. ಇದನ್ನು ಅನ್ವಯಿಸಿಕೊಳ್ಳುವ ಮೊದಲು ನಿಮ್ಮ ವೈದ್ಯರ ಸಲಹೆಯನ್ನೂ ಒಮ್ಮೆ ಪಡೆದುಕೊಳ್ಳಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News