Green Tea : ಕೊರೋನಾ ವಿರುದ್ಧ ಹೋರಾಡಲು ಗ್ರೀನ್‌ ಟೀ : ಸಂಶೋಧನೆಯಿಂದ ಮಾಹಿತಿ ಬಹಿರಂಗ!

ಗ್ಯಾಲೋಕಾಟೆಚಿನ್ ಎಂಬ ಅಂಶ ಗ್ರೀನ್‌ ಟೀಯಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ

Last Updated : Jun 6, 2021, 02:18 PM IST
  • ಗ್ರೀನ್‌ ಟೀ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ
  • ಗ್ರೀನ್‌ ಟೀ ಕೋವಿಡ್-19 ಅನ್ನು ನಿಭಾಯಿಸಲು ಸಹಾಯ
  • ಗ್ರೀನ್‌ ಟೀಯಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಎದುರಿಸುವ ಔಷಧ
Green Tea : ಕೊರೋನಾ ವಿರುದ್ಧ ಹೋರಾಡಲು ಗ್ರೀನ್‌ ಟೀ : ಸಂಶೋಧನೆಯಿಂದ ಮಾಹಿತಿ ಬಹಿರಂಗ! title=

ಗ್ರೀನ್‌ ಟೀ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ತೂಕ ಇಳಿಕೆಗೆ ಸಹಾಯದಿಂದ ಹಿಡಿದು ಹೃದಯ ಅಪಾಯವನ್ನು ಕಡಿಮೆ ಮಾಡುವವರೆಗೆ, ಗ್ರೀನ್‌ ಟೀ ಯೋಗಕ್ಷೇಮಕ್ಕಾಗಿ ಅಮೃತ ಎಂದು ಕರೆಯಲಾಗುತ್ತದೆ. ಆದ್ದರಿಂದ, ಕೊರೋನಾ ವಿರುದ್ಧ ಹೋರಾಡಲು ಒಂದು ಕಪ್ ಗ್ರೀನ್‌ ಟೀ ಸಹಾಯ ಮಾಡಬಹುದೇ? ಅಂತ ನಡೆಸಿದ ಅಧ್ಯಯನದಲ್ಲಿ ಹೊಸ ಮಾಹಿತಿಯೊಂದು ಹೊರಬಿದಿದ್ದೆ.

ಆರ್‌ಎಸ್‌ಸಿ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗ್ರೀನ್‌ ಟೀ(Green Tea) ಕೋವಿಡ್-19 ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಅಂತ ತಿಳಿದು ಬಂದಿದೆ. ಗ್ಯಾಲೋಕಾಟೆಚಿನ್ ಎಂಬ ಅಂಶ ಗ್ರೀನ್‌ ಟೀಯಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ : Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ

ಸ್ವಾನ್ಸೀ ವಿಶ್ವವಿದ್ಯಾಲಯ(Swansea University)ದ ಅಕಾಡೆಮಿಕ್ ಒಬ್ಬರು ಗ್ರೀನ್‌ ಟೀ ಮಾರಕ ರೋಗವನ್ನು ನಿಭಾಯಿಸುವ ಸಾಮರ್ಥ್ಯವಿರುವ ಔಷಧಕ್ಕೆ ಹೇಗೆ ಕಾರಣವಾಗಬಹುದು ಎಂದು ಸಂಶೋಧನೆ ನಡೆಸುತ್ತಿದೆ. ಡಾ. ಸುರೇಶ್ ಮೋಹನ್ ಕುಮಾರ್ ಅವರು ಸ್ವಾನ್ಸೀ ವಿಶ್ವವಿದ್ಯಾಲಯ ವೈದ್ಯಕೀಯ ಶಾಲೆಯಲ್ಲಿ ತಮ್ಮ ಪ್ರಸ್ತುತ ಕೆಲಸವನ್ನು ವಹಿಸಿಕೊಳ್ಳುವ ಮುನ್ನ ಅವರು ಊಟಿಯ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ, ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನಲ್ಲಿ ದ್ದಾಗ ಭಾರತದ ಸಹೋದ್ಯೋಗಿಗಳೊಂದಿಗೆ ಸಂಶೋಧನೆ ನಡೆಸಿದರು. ಗ್ರೀನ್‌ ಟೀಯಲ್ಲಿನ ಸಂಯುಕ್ತಗಳಲ್ಲಿ ಒಂದು ಕೋವಿಡ್-19 ರ ಹಿಂದಿನ ಕೊರೋನಾವನ್ನು ಎದುರಿಸಬಹುದು ಎಂದು ನಮ್ಮ ಸಂಶೋಧನೆಗಳು ಸೂಚಿಸಿವೆ' ಎಂದು ಡಾ. ಮೋಹನ್ ಕುಮಾರ್ ಹೇಳಿದರು.

ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯುವು ಸೇವಿಸಬೇಡಿ ಈ ಮಸಾಲೆ ಪದಾರ್ಥಗಳನ್ನು!

ಕೋವಿಡ್-19(COVID-19) ಅನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ವೈದ್ಯಕೀಯವಾಗಿ ಪರಿಣಾಮಕಾರಿ ಮತ್ತು ಸುರಕ್ಷಿತಎಂದು ಸಾಬೀತುಪಡಿಸಬಹುದೇ ಎಂದು ತೋರಿಸಲು ಈಗ ಹೆಚ್ಚಿನ ತನಿಖೆಯ ಅಗತ್ಯವಿದೆ' ಎಂದು ಡಾ. ಮೋಹನ್ ಕುಮಾರ್ ಹೇಳಿದ್ದಾರೆ. ಇದು ಇನ್ನೂ ಪ್ರಾಥಮಿಕ ಹೆಜ್ಜೆಯಾಗಿದೆ, ಆದರೆ ಇದು ವಿನಾಶಕಾರಿ ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸಲು ಸಂಭಾವ್ಯ ಕಾರಣವಾಗಬಹುದು' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Mango Hair Pack: ಕೂದಲ ಆರೈಕೆಗೆ ಬಳಸಿ ಮಾವಿನ ಹೇರ್ ಪ್ಯಾಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News