Egg : ಪ್ರತಿದಿನ ಮೊಟ್ಟೆ ತಿನ್ನುವುದು ಈ ಗಂಭೀರ ಕಾಯಿಲೆಗೆ ಆಹ್ವಾನ ನೀಡಿದಂತೆ!
ದಿನಕ್ಕೆ ಒಂದು ಅಥವಾ ಹೆಚ್ಚಿಗೆ ಮೊಟ್ಟೆಗಳನ್ನು ತಿನ್ನುವುದರಿಂದ ಟೈಪ್ 2 ಮಧುಮೇಹದ ಅಪಾಯವು ಶೇ.60 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಮಾಹಿತಿ ತಿಳಿದು ಬಂದಿದೆ.
ನವದೆಹಲಿ : 'ಭಾನುವಾರ ಅಥವಾ ಸೋಮವಾರ, ಪ್ರತಿದಿನ ಮೊಟ್ಟೆ ತಿನ್ನಿ' ಎಂಬ ಹಳೆಯ ಸ್ಲೋಗನ್ ಇದೆ, ಅಂದರೆ ಸಾಮಾನ್ಯವಾಗಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಇರಲಿ ಪ್ರೋಟೀನ್ ಅಧಿಕವಾಗಿರುತ್ತದೆ. ತಜ್ಞರು ಇದನ್ನು ಎಲ್ಲಾ ಸೀಸನ್ ಗಳಲ್ಲಿ ಪ್ರತಿದಿನ ತಿನ್ನಲು ಸಲಹೆ ನೀಡುತ್ತಾರೆ. ದಿನಕ್ಕೆ ಒಂದು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಟೈಪ್ 2 ಮಧುಮೇಹದ ಅಪಾಯವು ಶೇ.60 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಮಾಹಿತಿ ತಿಳಿದು ಬಂದಿದೆ.
ಸಂಶೋಧನೆಯಿಂದ ತಿಳಿದು ಬಂದಿದೆ ಗಂಭೀರ ಮಾಹಿತಿ
ಚೀನಾ ಆರೋಗ್ಯ ಮತ್ತು ಪೋಷಣೆಯ ಸಮೀಕ್ಷೆಯಲ್ಲಿ 8,000 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಇವರಲ್ಲಿ ಹೆಚ್ಚು ಮೊಟ್ಟೆಗಳನ್ನು(Eggs) ಸೇವಿಸಿದವರು ಕಡಿಮೆ ದೈಹಿಕ ಚಟುವಟಿಕೆಯನ್ನು ಹೊಂದಿದ್ದಾರೆ, ಹೆಚ್ಚಿನ ಸೀರಮ್ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿದ್ದರು ಮತ್ತು ಇವರು ಹೆಚ್ಚಿನ ಕೊಬ್ಬು ಮತ್ತು ಪ್ರಾಣಿ ಪ್ರೋಟೀನ್ ಅನ್ನು ಸೇವಿಸಿದ್ದಾರೆ ಎಂದು ಸಂಶೋಧಕರು ಹೇಳುತ್ತಾರೆ.
ಇದನ್ನೂ ಓದಿ : Eyes Secrets: ನಿಮ್ಮ ಕಣ್ಣುಗಳು ಕೂಡ ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತವೆ ಗೊತ್ತಾ? ಈ ಲಕ್ಷಣಗಳನ್ನು ಇಗ್ನೋರ್ ಮಾಡ್ಬೇಡಿ
ಮೊಟ್ಟೆ ತಿನ್ನುವವರು ಎಚ್ಚರದಿಂದಿರಿ!
ಮೊಟ್ಟೆಯ ಹಳದಿ ಭಾಗಗಳಲ್ಲಿ(Egg Yellow) ಕಂಡುಬರುವ ಕೋಲೀನ್ ಆಕ್ಸಿಡೀಕರಣ ಮತ್ತು ಉರಿಯೂತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ಇದು ಮೊಟ್ಟೆಯ ಬಿಳಿಭಾಗದಲ್ಲಿರುವ ರಾಸಾಯನಿಕಗಳಿಂದ ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಮೊಟ್ಟೆ ಪ್ರಪಂಚದ ಅನೇಕ ಮನೆಗಳಲ್ಲಿ ಬೆಳಗಿನ ಉಪಾಹಾರದ ಪ್ರಮುಖ ಆಹಾರವಗಳಲ್ಲಿ ಒಂದಾಗಿದೆ, ಇದರಲ್ಲಿ ಪ್ರೋಟೀನ್‌ನ ಸಮೃದ್ಧವಾಗಿರುತ್ತದೆ.
ಮೊಟ್ಟೆ ತಿನ್ನಲು ಉತ್ತಮ ಮಾರ್ಗ
ಮೊಟ್ಟೆಗಳನ್ನು ಸೇವಿಸಲು ಉತ್ತಮ ಮಾರ್ಗವೆಂದರೆ ಕುದಿಸಿ ಅದಕ್ಕೆ ಉಪ್ಪು(Salt), ಕಾರ ಹಾಕಿ ತಿನ್ನುವುದು ಅಥವಾ ನೀವು ಎರಡು ಮೊಟ್ಟೆಗಳನ್ನು ಬಳಸಿ ತರಕಾರಿ ಆಮ್ಲೆಟ್ ಮಾಡಿ ಸೇವಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.