Healthy Cooking Technique : ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ನಾವು ಸೇವಿಸುವ ಆಹಾರ ಬಹಳ ಮುಖ್ಯ. ಆರೋಗ್ಯಕರ ಆಹಾರದ ಮೂಲಕ ದೇಹದ ಆರೋಗ್ಯವನ್ನು ಕಾಪಾಡುವುದು ಸಾಧ್ಯವಾಗುತ್ತದೆ. ಮಧುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ದೂರವಿಡಲು ಆರೋಗ್ಯಕರ ಆಹಾರವನ್ನು ತಯಾರಿಸುವುದು ಮತ್ತು ಸೇವಿಸುವುದು ಬಹಳ ಅವಶ್ಯಕ. ಸರಿಯಾದ ಅಡುಗೆ  ವಿಧಾನಗಳನ್ನು ಅನುಸರಿಸುವ ಆರೋಗ್ಯವನ್ನು ಕಾಪಾಡಬಹುದು. 8 ಆರೋಗ್ಯಕರ ಅಡುಗೆ ವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಇದು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

1. ಆಹಾರವನ್ನು ಎಣ್ಣೆಯಲ್ಲಿ ಹುರಿಯುವ ಬದಲು ಬೇಕ್ ಮಾಡುವುದು, ರೋಸ್ಟ್ ಮಾಡುವುದು ಅಥವಾ ಗ್ರಿಲ್ ಮಾಡುವುದು. ಹೀಗೆ ಮಾಡುವುದರಿಂದ  ಹೆಚ್ಚು ಎಣ್ಣೆಯನ್ನು ಸೇವಿಸುವುದನ್ನು ತಡೆಯಬಹುದು. ಮಾತ್ರವಲ್ಲ ಆಹಾರದ ರುಚಿಯನ್ನು ಕೂಡಾ ಕಾಪಾಡಿಕೊಳ್ಳಬಹುದು. 


2. ಒಂದು ವೇಳೆ ಯಾವುದಾದರೂ ಆಹಾರವನ್ನು ಕರಿದು ಅಥವಾ ಹುರಿದೆ ತಿನ್ನಬೇಕು ಎನಿಸಿದರೆ ಹುರಿಯುವ ಮೊದಲು ಆಹಾರವನ್ನು ತೆಳುಗೊಳಿಸಿ. ಹೀಗೆ ಮಾಡುವುದರಿಂದ ಆಹಾರದ ಕೊಬ್ಬನ್ನು ಕಡಿಮೆ ಮಾಡಬಹುದು.   ಆಹಾರ ಪದ್ದತಿಯೂ  ಆರೋಗ್ಯಕರವಾಗಿರುತ್ತದೆ.


ಇದನ್ನೂ ಓದಿ : ಬಿಯರ್ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಮೂತ್ರದ ಮೂಲಕ ಹೊರ ಹೋಗುತ್ತದೆಯೇ? ಏನೆನ್ನುತ್ತಾರೆ ತಜ್ಞರು


3. ನಿಮ್ಮ ಆಹಾರದಲ್ಲಿ ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ. ಇದರಿಂದ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಮಾತ್ರವಲ್ಲ, ನೀವು ಹೆಚ್ಚು ಪೌಷ್ಟಿಕಾಂಶದ ಆಹಾರವನ್ನು ಸೇವಿಸಿದಂತಾಗುತ್ತದೆ. 


4. ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸೇರಿಸಿ. ಇದು ನಿಮ್ಮ ಆಹಾರವನ್ನು ಆರೋಗ್ಯಕರವಾಗಿಸುತ್ತದೆ. ಹೆಚ್ಚು ನೀರು ಕುಡಿಯುವುದರಿಂದ  ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ಕಡಿಮೆ ಮಾಡುತ್ತದೆ.


5. ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ಬೇಯಿಸುವುದನ್ನು ತಪ್ಪಿಸಿ. ಇದು ನಿಮ್ಮ ಆಹಾರದಲ್ಲಿರುವ ಪೌಷ್ಟಿಕಾಂಶದ ಅಂಶಗಳ ನಷ್ಟಕ್ಕೆ ಕಾರಣವಾಗಬಹುದು.


ಇದನ್ನೂ ಓದಿ :  Diabetes Control: ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುತ್ತವೆ ಅಡುಗೆ ಮನೆಯ ಈ ಸಾಂಬಾರ ಪದಾರ್ಥಗಳು


6. ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿ ಮತ್ತು  ಅಗತ್ಯಕ್ಕೆ ಅನುಗುಣವಾಗಿ ಇತರ ಮಸಾಲೆಗಳನ್ನು ಬಳಸಿ. ಉಪ್ಪಿನ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.


7. ಆಹಾರವನ್ನು ಹೆಚ್ಚು ಆರೋಗ್ಯಕರವಾಗಿಸಲು ಗ್ರೀನ್ ಟೀ, ಅರಿಶಿನ ಮತ್ತು ಇತರ ಗಿಡಮೂಲಿಕೆಗಳನ್ನು ಬಳಸಿ. ಇವುಗಳಲ್ಲಿ ಕಂಡುಬರುವ ಗುಣಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. 


8. ನಿಮ್ಮ ಆಹಾರದಲ್ಲಿ ಹೆಚ್ಚಿನ ಫೈಬರ್ ಅನ್ನು ಸೇರಿಸಿ. ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.