Benefits Of Priyala With Milk - ಸಾಮಾನ್ಯವಾಗಿ ಹಾಲನ್ನು ಒಂದು ಪರಿಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಏಕೆಂದರೆ ಹಾಲು ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಹಾಲಿನ ಸೇವನೆ ನಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ. ನಾವು ಚರೋಲಿ ಅಥವಾ ಚಿರೋಂಜಿ ಬೀಜಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ, ಹಾಲಿನ ಪೌಷ್ಟಿಕಾಂಶದ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಪಾಯಸ ಅಥವಾ ಸಿಹಿತಿಂಡಿಗಳಲ್ಲಿ ರುಚಿಯನ್ನು ಹೆಚ್ಚಿಸಲು ಪ್ರಿಯಾಲಾವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಚರೋಲಿ ಬೀಜಗಳನ್ನು ರುಬ್ಬಿ ಹಾಲಿನೊಂದಿಗೆ ಬೆರೆಸಿದರೆ ಅದು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹೇಳಿದ್ದಾರೆ.
ಚಾರ್ಪೋಪ್ಪನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳು
1. ದೇಹದ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ
ಚಾರ್ಪೋಪ್ಪು ಬೀಜಗಳು ನೋಡಲು ಚಿಕ್ಕದಾಗಿರಬಹುದು, ಆದರೆ ಅವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಈ ಡ್ರೈಫ್ರೂಟ್ ಹಾಗೂ ಹಾಲನ್ನು ಬೆರೆಸಿ ಸೇವಿಸುವುದರಿಂದ, ದೇಹದ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ, ಇದರಿಂದಾಗಿ ದೇಹ ಶುದ್ಧವಾಗುತ್ತದೆ.
2. ಅತಿಸಾರದಲ್ಲಿ ಸಹಾಯಕ
ನೀವು ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದರೆ, ಚರೋಲಿ ಬೀಜಗಳು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಹಾಗೆ ನೋಡಿದರೆ, ನೀವು ಅದನ್ನು ಖೀರ್ ನಲ್ಲಿಯೂ ಕೂಡ ಬೆರೆಸಿ ಕುಡಿಯಬಹುದು. ಹಾಲು ಮತ್ತು ಚಿರೋಂಜಿ ಪುಡಿಯನ್ನು ಒಟ್ಟಿಗೆ ಸೇವಿಸಿದರೆ ನಿಮಗೆ ಅತಿಸಾರದ ಸಮಸ್ಯೆಯಿಂದ ಉಪಶಮನ ಸಿಗುತ್ತದೆ.
3. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಕರೋನಾ ವೈರಸ್ ಸಾಂಕ್ರಾಮಿಕದ ನಂತರ, ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ಹಾಲು ಮತ್ತು ಚಾರ್ಪೋಪ್ಪು ಮಿಶ್ರಣ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಸಹಾಯಕ ಸಾಬೀತಾಗುತ್ತದೆ.
ಇದನ್ನೂ ಓದಿ-ನೀವೂ ಈ ತಪ್ಪು ಮಾಡುತ್ತಿಲ್ಲವಲ್ಲ! ಮಾಡುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ.. ಇಲ್ಡಿದ್ರೆ!
4. ಮಧುಮೇಹದಲ್ಲಿ ಪ್ರಯೋಜನಕಾರಿ
ಮಧುಮೇಹದಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಬಗ್ಗೆ ಚಿಂತಿತರಾಗಿರುತ್ತಾರೆ. ಚಾರ್ಪೋಪ್ಪು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ, ಇದು ಮಧುಮೇಹ ರೋಗಿಗಳಿಗೆ ಒಂದು ಪರಿಣಾಮಕಾರಿ ಮನೆಮದ್ದಾಗಿದೆ.
ಇದನ್ನೂ ಓದಿ-Cancer ಕಾಯಿಲೆಯಿಂದ ಹಿಡಿದು ಮಧುಮೇಹದವರೆಗೆ ಹಲವು ಕಾಯಿಲೆ ನಿವಾರಣೆಗೆ ವರದಾನ 'ಸಿಹಿ ತುಳಸಿ'!
(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ