Hair Fall Causing Food: ಈ ಪದಾರ್ಥಗಳ ಸೇವನೆ ಬೋಳು ತಲೆ ಸಮಸ್ಯೆಗೆ ಕಾರಣ, ತಕ್ಷಣ ನಿಲ್ಲಿಸಿ!
Hair Fall Tips: ಸಾಕಷ್ಟು ಬದಲಾವಣೆಗೆ ಒಳಗಾದ ಜೀವನಶೈಲಿಯ ಇಂದಿನ ಕಾಲದಲ್ಲಿ, ಹಲವು ಜನರು ಕೂದಲು ಉದುರುವಿಕೆಯಿಂದ ತೊಂದರೆಗೆ ಒಳಗಾಗುತ್ತಿದ್ದಾರೆ (foods that cause baldness ), ಇದರಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಬೊಕ್ಕ ತಲೆ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಆಹಾರದಿಂದ ಯಾವ ವಸ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ. (Health News In Kannada)
Food That Cause Hair Fall: ಇತ್ತೀಚಿನ ದಿನಗಳಲ್ಲಿ ಜನರು ಕೂದಲು ಉದುರುವಿಕೆಯ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ, ಆದರೆ ಇದು ಕೆಲವೊಮ್ಮೆ ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು, ಅದನ್ನು ಹೊರತುಪಡಿಸಿದರೆ ಇದು ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣವೂ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ಸಮಯ ಇರುವಾಗಲೇ ಎಚ್ಚೆತ್ತುಕೊಳ್ಳಿ (foods that cause baldness), ಇಲ್ಲದಿದ್ದರೆ ನೀವು ಚಿಕ್ಕ ವಯಸ್ಸಿನಲ್ಲಿಯೇ ಬೊಕ್ಕತಲೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕೂದಲಿನ ಉತ್ತಮ ಆರೋಗ್ಯಕ್ಕಾಗಿ, ನೀವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು, ಇದರ ಜೊತೆಗೆ ನೀವು ಕೆಲವು ಅನಾರೋಗ್ಯಕರ ಸಂಗತಿಗಳಿಂದ ದೂರವಿರಬೇಕು. ಅಂತಹ ಪರಿಸ್ಥಿತಿಯಲ್ಲಿ, ನೀವು ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕಬೇಕಾದ ಆ ಸಂಗತಿಗಳು ಯಾವುವು ತಿಲ್ಲಿದುಕೊಳ್ಳೋಣ ಬನ್ನಿ, (Health News In Kannada)
ಈ ವಸ್ತುಗಳು ಕೂದಲಿಗೆ ಹಾನಿಕಾರಕ
ಡಯಟ್ ಸೋಡಾ
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಡಯಟ್ ಸೋಡಾ ಕುಡಿಯುವ ಟ್ರೆಂಡ್ ಹೆಚ್ಚಾಗಿ ಕಂಡು ಬರುತ್ತಿದ್ದು, ಅದರಿಂದ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೂ ಕೂಡ ಬೊಕ್ಕತಲೆ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಡಯಟ್ ಸೋಡಾವು ಕೃತಕ ಸಿಹಿಕಾರಕವನ್ನು ಹೊಂದಿರುತ್ತದೆ ಅದು ನೆತ್ತಿಯನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ಬೊಕ್ಕತಲೆ ಸಮಸ್ಯೆಯನ್ನು ತಡೆಗಟ್ಟಲು, ಡೈಯಟ್ ಸೋಡಾ ಸೇವನೆಯನ್ನು ನಿಲ್ಲಿಸಿ. (, foods that cause hair loss in females)
ಸಿಹಿ ಆಹಾರ
ಸಕ್ಕರೆಯನ್ನು ಸಾಮಾನ್ಯವಾಗಿ ಮಧುಮೇಹದ ಶತ್ರು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಆದರೆ ಇದು ನಮ್ಮ ಕೂದಲಿಗೂ ಕೂಡ ಅಷ್ಟೇ ದೊಡ್ಡ ಶತ್ರುವಾಗಿದೆ. ಕೂದಲಿನ ರಚನೆಗೆ ಪ್ರೋಟೀನ್ ಅಗತ್ಯವಿರುತ್ತದೆ, ಆದರೆ ಸಕ್ಕರೆ ಅದರ ಹೀರಿಕೊಳ್ಳುವಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ ಸಕ್ಕರೆಯಿಂದ ತಯಾರಿಸಿದ ವಸ್ತುಗಳನ್ನು ಸಾಧ್ಯವಾದಷ್ಟು ತಪ್ಪಿಸಿ.(foods that cause hair loss in males)
ಮದ್ಯ ಸೇವನೆ
ಆಲ್ಕೋಹಾಲ್ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ಹೇಳಬೇಕಾಗಿಲ್ಲ, ಇದು ಯಕೃತ್ತು ಸೇರಿದಂತೆ ಅನೇಕ ಅಂಗಗಳನ್ನು ಹಾನಿಗೊಳಿಸುತ್ತದೆ, ಆದರೆ ಕೆಲವೇ ಜನರಿಗೆ ಮದ್ಯವು ಕೂದಲಿಗೆ ಹಾನಿಕಾರಕವಾಗಿದೆ ಎಂದು ತಿಳಿದರೆ ನೀವೂ ಆಶ್ಚರ್ಯಪಡುವಿರಿ. ಆಲ್ಕೋಹಾಲ್ ಸೇವಿಸಿದರೆ, ನೀವು ಕೂದಲು ಉದುರುವಿಕೆ ಸಮಸ್ಯೆ ಎದುರಿಸಬೇಕಾಗಬಹುದು. (does salty food cause hair loss)
ಇದನ್ನೂ ಓದಿ-Green Tea Side Effects: ಅತಿಯಾದ ಗ್ರೀನ್ ಟೀ ಸೇವನೆಯಿಂದಲೂ ದೇಹಕ್ಕೆ ಈ ಹಾನಿ ತಲುಪುತ್ತದೆ!
(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI