Weight Loss Remedy: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿ ದೇಹದಿಂದ ಕೆಟ್ಟ ಕೊಲೆಸ್ಟರಾಲ್ ಹೊರಹಾಕುತ್ತೆ ಈ ಜ್ಯೂಸ್!

Weight Loss Home Remedy: ವಿಟಮಿನ್ಗಳು, ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ತೂಕವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತವೆ. ಆದರೆ, ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸರಿಯಾದ ಪದಾರ್ಥಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. (Lifestyle News In Kannada)  

Written by - Nitin Tabib | Last Updated : Mar 16, 2024, 01:14 PM IST
  • ಬೀಟ್ರೂಟ್ ತೂಕವನ್ನು ಇಳಿಕೆ ಮಾಡಲು ಮತ್ತು ನಿರ್ವಿಶೀಕರಣಕ್ಕೆ ಸಹಕಾರಿಯಾಗಿದೆ.
  • ಇದರಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ಆಹಾರದ ಫೈಬರ್ ಅಧಿಕವಾಗಿರುತ್ತದೆ.
  • ಇದು ಕೊಲೆಸ್ಟ್ರಾಲ್ ಮಟ್ಟವನ್ನು (taming cholesterol and weight loss) ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.
Weight Loss Remedy: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿ ದೇಹದಿಂದ ಕೆಟ್ಟ ಕೊಲೆಸ್ಟರಾಲ್ ಹೊರಹಾಕುತ್ತೆ ಈ ಜ್ಯೂಸ್! title=

Weight Loss Tips: ನಮ್ಮಲ್ಲಿ ಹಲವು ಜನರು 2023 ರಲ್ಲಿ ತೂಕ ಇಳಿಸಿಕೊಳ್ಳಲು ಸಂಕಲ್ಪ ಮಾಡಿರುತ್ತಾರೆ. ಆದರೆ, ಹೆಚ್ಚಿನವರು ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳಲು ಪ್ರತಿ ವರ್ಷ ಇಂತಹ ಸಂಕಲ್ಪ ತೆಗೆದುಕೊಳ್ಳುತ್ತಾರೆ. ತೂಕ ಇಳಿಸುವ ಆಹಾರದಿಂದ ಪ್ರೋಟೀನ್ ಶೇಕ್ಗಳು, ಸ್ಮೂಥಿಗಳು, ಜ್ಯೂಸ್ ಮತ್ತು ಚಹಾಗಳವರೆಗೆ, ತೂಕ ಇಳಿಕೆಯ ಕೆಲಸ ಮಾಡುವ ಆಹಾರಗಳು ಮತ್ತು ಉತ್ಪನ್ನಗಳ ಕೊರತೆಯಿಲ್ಲ. ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ದೇಹದಿಂದ ಕೆಲವು ಹೆಚ್ಚುವರಿ ಕ್ಯಾಲೊರಿಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ (miracle weight loss drink recipe,). ಆದರೆ, ಆರೋಗ್ಯಕರ ರೀತಿಯಲ್ಲಿ ತೂಕವನ್ನು ಇಳಿಕೆ ಮಾಡಿಕೊಳ್ಳಲು ಸರಿಯಾದ ಸಂಯೋಜನೆ ಮತ್ತು ಪದಾರ್ಥಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. (Lifestyle News In Kannada)

ನೀವೂ ಕೂಡ ಹಣ್ಣು ಮತ್ತು ತರಕಾರಿ ಜ್ಯೂಸ್ಗಳನ್ನು ಕುಡಿಯಲು ಇಷ್ಟಪಡುತ್ತಿದ್ದರೆ, ಈ ಆರೋಗ್ಯಕರ ಮತ್ತು ರುಚಿಕರವಾದ ಜ್ಯೂಸ್ ನಿಮ್ಮ ಫಿಟ್ನೆಸ್ ಗುರಿಗಳನ್ನು ಸಾಧಿಸಲು ಮತ್ತು ಅದರತ್ತ ಸಮರ್ಪಿತವಾಗಲು ಸಹಾಯ ಮಾಡುತ್ತದೆ. ಈ ಅದ್ಭುತ ಜ್ಯೂಸ್ ಅನ್ನು ನೀವು 1 ಮಧ್ಯಮ ಗಾತ್ರದ ಕ್ಯಾರೆಟ್, ಅರ್ಧ ಸಿಪ್ಪೆ ಸುಲಿದ ಸೇಬು, 1 ಬೀಟ್ರೂಟ್, 1 ಟೀಚಮಚ ಜೇನುತುಪ್ಪ ಮತ್ತು ಅರ್ಧ ಕಪ್ ನೀರಿನಿಂದ ತಯಾರಿಸಬಹುದು. ಜ್ಯೂಸ್ ಮಾಡಲು, ಈ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಈ ಜ್ಯೂಸ್ ಅನ್ನು ಫ್ರಿಜ್ ನಲ್ಲಿ ಸ್ವಲ್ಪ ಸಮಯ ಇಟ್ಟುಕೊಳ್ಳಬಹುದು ಅಥವಾ ತಕ್ಷಣ ಕುಡಿಯಬಹುದು. (drinks that help you lose weight in a week)

ಇದನ್ನೂ ಓದಿ-Dandruff Home Remedy: ತಲೆಹೊಟ್ಟನ್ನು ಬುಡಸಮೇತ ನಿವಾರಿಸಬೇಕೆ? ಇಲ್ಲಿವೆ ಕೆಲ ಬೆಸ್ಟ್ ಉಪಾಯಗಳು!

ಈ ಜ್ಯೂಸ್ ಸೇವನೆಯಿಂದ ಆಗುವ ಲಾಭಗಳು (what to drink to lose belly fat in 1 week)
ಬೀಟ್ರೂಟ್ ತೂಕವನ್ನು ಇಳಿಕೆ ಮಾಡಲು ಮತ್ತು ನಿರ್ವಿಶೀಕರಣಕ್ಕೆ ಸಹಕಾರಿಯಾಗಿದೆ. ಇದರಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ಆಹಾರದ ಫೈಬರ್ ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು (taming cholesterol and weight loss) ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಸೇಬಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು, ಫೈಬರ್, ನೀರು ಮತ್ತು ಪೋಷಕಾಂಶಗಳು ತೂಕ ಇಳಿಕೆ ಮಾಡಲು ಸಹಾಯ ಮಾಡುತ್ತವೆ. ಕ್ಯಾರೆಟ್ಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಕರಗಬಲ್ಲ ಮತ್ತು ಕರಗದ ನಾರಿನಂಶವನ್ನು ಹೊಂದಿರುತ್ತವೆ, ಅದು ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದರಿಂದ ತಡೆಯುತ್ತದೆ. ಜೇನುತುಪ್ಪವು ಉತ್ತಮ ಪೋಷಕಾಂಶಗಳನ್ನು ಹೊಂದಿದ್ದು ಅದು ಅಧಿಕ ಕೊಬ್ಬನ್ನು ಕರಗಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Weight Loss Tips: ತೂಕ ಇಳಿಕೆಗೆ ನಿಮ್ಮ ನಿಯಮಿತ ಆಹಾರದಲ್ಲಿರಲ್ಲಿ ಈ ಬೇಳೆ, ಸೇವಿಸುವ ವಿಧಾನ ಇಲ್ಲಿದೆ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News