Relation Tips: ಪ್ರೀತಿಯಲ್ಲಿ ಜಗಳ, ಎಷ್ಟು ಕರೆಕ್ಟ್? ಸಂಬಂಧಗಳಲ್ಲಿ ಅತ್ಯುತ್ತಮ ಹೊಂದಾಣಿಕೆ ತರುತ್ತವೆ ಈ ನಾಲ್ಕು ಸಂಗತಿಗಳು!

Relationship Tips: ಪ್ರತಿಯೋಬ್ಬರು ತಮ್ಮ ಸಂಬಂಧ ಸಾಕಷ್ಟು ಪ್ರೀತಿ ಮತ್ತು ಖುಷಿಗಳಿಂದ ತುಂಬಿರಬೇಕು ಎಂದು ಬಯುತ್ತಾರೆ, ಆದರೆ ಕೆಲವೊಮ್ಮೆ ಸ್ವಲ್ಪ ಜಗಳ, ಭಿನ್ನಾಭಿಪ್ರಾಯ ಸಂಬಂಧಗಳನ್ನು ಬಲಪಡಿಸುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. (Lifestyle News In Kannada)  

Written by - Nitin Tabib | Last Updated : Mar 16, 2024, 07:23 PM IST
  • ಘರ್ಷಣೆಗಳು ಸಾಮಾನ್ಯವಾಗಿ ಉತ್ತಮ ಸಂವಹನದ ಆರಂಭವಾಗಿದೆ. ಕೋಪ ಅಥವಾ ಅಸಮಾಧಾನವನ್ನು ನಿಗ್ರಹಿಸುವುದು ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ.
  • ಆರೋಗ್ಯಕರ ಜಗಳದ ಸಮಯದಲ್ಲಿ, ನಾವು ನಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತೇವೆ.
  • ನಾವು ಹೇಗೆ ಭಾವಿಸುತ್ತೇವೆ ಮತ್ತು ನಮಗೆ ಏನನ್ನು ಬಯಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮ್ಮ ಸಂಗಾತಿಗೆ ಸಹಾಯ ಮಾಡುತ್ತದೆ.
Relation Tips: ಪ್ರೀತಿಯಲ್ಲಿ ಜಗಳ, ಎಷ್ಟು ಕರೆಕ್ಟ್? ಸಂಬಂಧಗಳಲ್ಲಿ ಅತ್ಯುತ್ತಮ ಹೊಂದಾಣಿಕೆ ತರುತ್ತವೆ ಈ ನಾಲ್ಕು ಸಂಗತಿಗಳು! title=

Relationship Tips: ಸಂಬಂಧ, ಪ್ರೀತಿ ಮತ್ತು ಸಿಹಿ ಮಾತು ಈ ಪದಗಳು ಸಾಮಾನ್ಯವಾಗಿ ಏಕಕಾಲಕ್ಕೆ ಸಾಗುವ ಪದಗಳಾಗಿವೆ. ಆದರೆ ಕೆಲವೊಮ್ಮೆ ಸ್ವಲ್ಪ, ಭಿನ್ನಾಭಿಪ್ರಾಯ ಕೂಡ ಸಂಬಂಧವನ್ನು ಬಲಪಡಿಸುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಹೌದು, ಯಾವಾಗಲೂ ಶಾಂತವಾಗಿರುವುದು ಮತ್ತು ಯಾವುದೇ ರೀತಿಯ ಜಗಳ ಇಲ್ಲದೆ ಇರುವುದಕ್ಕೆ ಪ್ರಯತ್ನಿಸುವುದು ಅನಿವಾರ್ಯವಲ್ಲ. ಬನ್ನಿ ಇಂದು ನಾವು ಈ ವಿಷಯದ ಕುರಿತು ಸ್ವಲ್ಪ ಚರ್ಚೆ ನಡೆಸೋಣ ಮತ್ತು ಸಂಬಂಧದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಹೇಗೆ ಪ್ರಯೋಜನಕಾರಿಯಾಗಿವೆ ತಿಳಿದುಕೊಳ್ಳೋಣ,  (Lifestyle News In Kannada)

ಉತ್ತಮ ತಿಳುವಳಿಕೆ ಉಂಟುಮಾಡುತ್ತವೆ
ಪ್ರೀತಿಯ ಸಂಬಂಧದಲ್ಲಿ, ಕೆಲ ವಿಷಯಗಳಲ್ಲಿ ಕೆಅವೊಮ್ಮೆ ಭಿನ್ನಾಭಿಪ್ರಾಯ ಮೂಡುವುದು ಸಹಜ. ಸಂಭಾಷಣೆಯ ಸಮಯದಲ್ಲಿ ಮಾತ್ರ ನಾವು ನಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ತಿಳುವಳಿಕೆಯು ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಪ್ರತಿಯೊಬ್ಬರ ಯೋಚಿಸುವ ವಿಧಾನ ಭಿನ್ನವಾಗಿರುತ್ತದೆ ಎಂಬುದನ್ನು ನಾವು ಕೆಲವೊಮ್ಮೆ ಮರೆಯುತ್ತೇವೆ. ಸಣ್ಣ ಪುಟ್ಟ ಜಗಳದ ಮೂಲಕ ನಾವು ಪರಸ್ಪರರ ದೃಷ್ಟಿಕೋನವನ್ನು ಒಪ್ಪಿಕೊಳ್ಳಲು ಕಲಿಯುತ್ತೇವೆ. (How to deal with conflicts in relationships)

ಸಂಬಂಧಗಳು ಬಲಗೊಳ್ಳುತ್ತವೆ
ನಾವು ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದೇವೆ ಮತ್ತು ನಂತರ ಪರಿಹಾರವನ್ನು ಕಂಡುಕೊಂಡಾಗ, ಅದು ಸಂಬಂಧದ ಬಲದ ಸಂಕೇತವಾಗಿ ಹೊರಹೊಮ್ಮುತ್ತದೆ. ಆರೋಗ್ಯಕರ ಘರ್ಷಣೆಗಳು ನಾವು ಸಂಬಂಧಕ್ಕಾಗಿ ನಿಲ್ಲುತ್ತೇವೆ ಮತ್ತು ಕಾಳಜಿ ವಹಿಸುತ್ತೇವೆ ಎಂಬುದನ್ನು ತೋರಿಸುತ್ತವೆ.  ಸಮಸ್ಯೆಗಳನ್ನು ನಿಗ್ರಹಿಸುವುದು ಸಂಬಂಧಗಳಲ್ಲಿ ಅಂತರವನ್ನು ಸೃಷ್ಟಿಸುತ್ತದೆ. ವಿವಾದಗಳನ್ನು ಪರಿಹರಿಸುವುದು ಸಂಬಂಧಗಳಲ್ಲಿ ನಂಬಿಕೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ. (Healthy Conflicts In Relationship)

ಉತ್ತಮ ಸಂವಹನ ಸಾಧನಗಳು
ಘರ್ಷಣೆಗಳು ಸಾಮಾನ್ಯವಾಗಿ ಉತ್ತಮ ಸಂವಹನದ ಆರಂಭವಾಗಿದೆ. ಕೋಪ ಅಥವಾ ಅಸಮಾಧಾನವನ್ನು ನಿಗ್ರಹಿಸುವುದು ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಆರೋಗ್ಯಕರ ಜಗಳದ ಸಮಯದಲ್ಲಿ, ನಾವು ನಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತೇವೆ. ನಾವು ಹೇಗೆ ಭಾವಿಸುತ್ತೇವೆ ಮತ್ತು ನಮಗೆ ಏನನ್ನು ಬಯಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮ್ಮ ಸಂಗಾತಿಗೆ ಸಹಾಯ ಮಾಡುತ್ತದೆ. ಉತ್ತಮ ಸಂವಹನವು ಸಂಬಂಧದ ಅಡಿಪಾಯವನ್ನು ಬಲಪಡಿಸುತ್ತದೆ. (Conflicts in relationships psychology)

ಇದನ್ನೂ ಓದಿ-Green Tea Side Effects: ಅತಿಯಾದ ಗ್ರೀನ್ ಟೀ ಸೇವನೆಯಿಂದಲೂ ದೇಹಕ್ಕೆ ಈ ಹಾನಿ ತಲುಪುತ್ತದೆ!

ಸಂಬಂಧದಲ್ಲಿ ಹೊಸ ಜೀವನ ಬರುತ್ತದೆ
ಸಂಬಂಧಗಳು ದೀರ್ಘಾವಧಿಯವರೆಗೆ ಜಗಳ ಇಲ್ಲದೆ ಹೋದರೆ, ನೀರಸವಾಗಬಹುದು. ಕೆಲವೊಮ್ಮೆ ವಿವಾದಗಳು ಸಂಬಂಧಕ್ಕೆ ಹೊಸ ಜೀವನವನ್ನು ನೀಡುತ್ತವೆ. ಇದು ಸಂಗತಿಗೆಪರಸ್ಪರ ಹೊಸದನ್ನು ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸುತ್ತವೆ . ಅಷ್ಟೇ ಅಲ್ಲ, ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗಿ ಪ್ರಯತ್ನಗಳನ್ನು ಮಾಡುವುದು ಸಂಬಂಧದಲ್ಲಿ ಉತ್ಸಾಹ ಮತ್ತು ಚೈತನ್ನವನ್ನು ಕಾಪಾಡಿಕೊಳ್ಳುತ್ತದೆ.

ಇದನ್ನೂ ಓದಿ-Weight Loss Remedy: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿ ದೇಹದಿಂದ ಕೆಟ್ಟ ಕೊಲೆಸ್ಟರಾಲ್ ಹೊರಹಾಕುತ್ತೆ ಈ ಜ್ಯೂಸ್!

ಆರೋಗ್ಯಕರ ವಿವಾದಗಳು ಮತ್ತು ನಕಾರಾತ್ಮಕ ಜಗಳಗಳ ನಡುವೆ ಸಾಕಷ್ಟು ಅಂತರವಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಆರೋಗ್ಯಕರ ವಿವಾದಗಳಲ್ಲಿ, ಗೌರವವನ್ನು ಕಾಪಾಡಿಕೊಳ್ಳಲಾಗುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಇದೇ ವೇಳೆ ನಕಾರಾತ್ಮಕ ಜಗಳಗಳಲ್ಲಿ, ಪರಸ್ಪರ ಅವಮಾನಿಸುವ ನಡೆಯುತ್ತದೆ ಮತ್ತು  ಇದು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News