Green Tea Side Effects: ಅತಿಯಾದ ಗ್ರೀನ್ ಟೀ ಸೇವನೆಯಿಂದಲೂ ದೇಹಕ್ಕೆ ಈ ಹಾನಿ ತಲುಪುತ್ತದೆ!

Side Effects Of Green Tea: ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಚಹಾ ಸೇವನೆಯ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ, ಆದರೆ ಅದರ ಸೇವನೆ ಮಿತಿ ಮೀರಬಾರದು, ಇಲ್ಲದಿದ್ದರೆ ಅದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. (Lifestyle News In Kannada)  

Written by - Nitin Tabib | Last Updated : Mar 16, 2024, 02:32 PM IST
  • ಹಸಿರು ಚಹಾದಲ್ಲಿ ಕೆಫೀನ್ ಇರುವ ಕಾರಣ, ಅದರ ಅತಿಯಾದ ಸೇವನೆಯು ಆತಂಕ ಮತ್ತು ಒತ್ತಡದ ಸಮಸ್ಯೆಗಳನ್ನು ಉಂಟುಮಾಡಬಹುದು.
  • ಇದು ನಿಮ್ಮನ್ನು ಅಸ್ಥಿರಗೊಳಿಸಬಹುದು ಮತ್ತು ಆತಂಕಕ್ಕೊಳಗಾಗಿಸಬಹುದು
  • ಮತ್ತು ಇದು ನಂತರ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
Green Tea Side Effects: ಅತಿಯಾದ ಗ್ರೀನ್ ಟೀ ಸೇವನೆಯಿಂದಲೂ ದೇಹಕ್ಕೆ ಈ ಹಾನಿ ತಲುಪುತ್ತದೆ! title=

Green Tea Side Effects: ಸಾಮಾನ್ಯವಾಗಿ ಹಸಿರು ಚಹಾ ಸೇವನೆ ಆರೋಗ್ಯಕ್ಕೆ ಹಿತಕಾರಿ (green tea benefits) ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಬಯಸುವವರಿಗೆ, ಇದು ನೆಚ್ಚಿನ ಪಾನೀಯವಾಗಿದೆ, ಆದರೆ ಅದರ ಸೇವನೆಯಲ್ಲಿ ಅಜಾಗರೂಕತೆ ವಹಿಸಬಾರದು. ಕೆಲ ಜನರು, ಬೇಗ ತೂಕವನ್ನು ಇಳಿಸಿಕೊಳ್ಳಲು ಮಿತಿಮೀರಿ ಹಸಿರು ಚಹಾ ಸೇವನೆಯನ್ನು ಮಾಡುತ್ತಾರೆ. ಭಾರತದ ಖ್ಯಾತ ಆಹಾರ ತಜ್ಞೆ ಆಯುಷಿ ಯಾದವ್ ಅವರು ಪ್ರತಿದಿನ 2 ಕಪ್ ಗ್ರೀನ್ ಟೀ ಮಾತ್ರ ಸೇವಿಸಬೇಕು (how to drink green tea without the side effects) ಎನ್ನುತ್ತಾರೆ, ಆದರೆ ನೀವು ಇದಕ್ಕಿಂತ ಜಾಸ್ತಿ ಗ್ರೀನ್ ಟೀ ಸೇವಿಸಿದರೆ ಅದು ಆರೋಗ್ಯಕ್ಕೆ ಲಾಭವನ್ನುಂಟು ಮಾಡದೆ ಹಾನಿ ತಲುಪಿಸುತ್ತದೆ ಎನ್ನುತ್ತಾರೆ. (Lifestyle News In Kannada)

1. ಹೆಚ್ಚುವರಿ ಕೆಫೀನ್
ಹಸಿರು ಚಹಾದಲ್ಲಿಯೂ ಕೂಡ ಕೆಫೀನ್ ಇರುತ್ತದೆ, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದೂ ಕೂಡ ಹಾನಿ ಉಂಟು ಮಾಡಬಹುದು. ಕೆಫೆನ್ ಮಟ್ಟದಲ್ಲಿ ಹೆಚ್ಚಳ ನಿದ್ರೆಯ ಕೊರತೆ, ನರವೈಜ್ಞಾನಿಕ ಸಮಸ್ಯೆಗಳು ಮತ್ತು ಆತಂಕ ಹೆಚ್ಚಳದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು(excess green te consumption harmful to health).

2. ಅಧಿಕ ರಕ್ತದೊತ್ತಡ (green tea side effects blood pressure)
ಹಸಿರು ಚಹಾದಲ್ಲಿರುವ ತಾಜಾತನ ಮತ್ತು ಕೆಫೀನ್ ಒತ್ತಡ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ದೀರ್ಘಾವಧಿಯಲ್ಲಿ ಹೃದಯಾಘಾತ ಮತ್ತು ಇತರ ಹೃದ್ರೋಗಗಳಿಗೆ ಕಾರಣವಾಗಬಹುದು, ಆದ್ದರಿಂದ ಇದರ ಸೇವನೆಯಲ್ಲಿ ಜಾಗರೂಕತೆ ವಹಿಸುವುದು ತುಂಬಾ ಮುಖ್ಯ..

3. ಗ್ಯಾಸ್ ಮತ್ತು ಹೊಟ್ಟೆಯ ಸಮಸ್ಯೆಗಳು
ಗ್ರೀನ್ ಟೀಯಲ್ಲಿರುವ ತಾಜಾತನ ಮತ್ತು ಕೆಫೀನ್ ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆ ನೋವಿನಂತಹ ಉದರ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು, ಸೇವಿಸುವ ಹಸಿರು ಚಹಾದ ಪ್ರಮಾಣವ ಸಮತೋಲನದಲ್ಲಿ ಇಡುವುದು ಅವಶ್ಯಕ (green tea side effects for females).

4. ಆತಂಕ ಮತ್ತು ಒತ್ತಡ
ಹಸಿರು ಚಹಾದಲ್ಲಿ ಕೆಫೀನ್ ಇರುವ ಕಾರಣ, ಅದರ ಅತಿಯಾದ ಸೇವನೆಯು ಆತಂಕ ಮತ್ತು ಒತ್ತಡದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ನಿಮ್ಮನ್ನು ಅಸ್ಥಿರಗೊಳಿಸಬಹುದು ಮತ್ತು ಆತಂಕಕ್ಕೊಳಗಾಗಿಸಬಹುದು ಮತ್ತು ಇದು ನ್ತಂತರ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ-Diabetes-Cholesterol Control Tips: ಮಧುಮೇಹ-ಕೊಲೆಸ್ಟರಾಲ್ ಸೇರಿದಂತೆ ಹಲವು ಕಾಯಿಲೆಗಳಿಗೆ ಪರಿಣಾಮಕಾರಿ ಮನೆಮದ್ದು ಈ ಹಣ್ಣು!

5. ಕಿಡ್ನಿ ಸಮಸ್ಯೆಗಳು
ಹಸಿರು ಚಹಾದಲ್ಲಿರುವ ಕೆಫೀನ್‌ನ ಅತಿಯಾದ ಸೇವನೆಯು ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡಬಹುದು. ಅತಿಯಾದ ಕೆಫೀನ್ ಸೇವನೆಯು ಹೆಚ್ಚುವರಿ ಯೂರಿಕ್ ಆಮ್ಲಕ್ಕೆ ಕಾರಣವಾಗುತ್ತದೆ (green tea side effects for male), ಇದು ಮೂತ್ರಪಿಂಡದ ಕಲ್ಲುಗಳ ರೂಪದಲ್ಲಿ ನಂತರ ಪರಿವರ್ತನೆಯಾಗಬಹುದು.

ಇದನ್ನೂ ಓದಿ-Hyperthyroidism: ಹೈಪರ್ ಥೈರಾಯಿಡಿಸಮ್ ನಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ಇಗ್ನೋರ್ ಮಾಡಬೇಡಿ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News