Happy ನಿಮ್ಮದಾಗಿಸಲು ಅತ್ಯಾವಶ್ಯಕ ಏನು? `ಹಣ` ಅಥವಾ `ಸಮಯ`?
ನಿಮ್ಮ ಜೀವನವನ್ನು Dear Zindagiಯನ್ನಾಗಿ ಪರಿವರ್ತಿಸಬಲ್ಲ ಅತ್ಯಂತ ಸುಂದರವಾದ ಭಾವನೆ ಅಂದರೆ ಖುಷಿ ಕುರಿತು ಇಂದು ವಿಶ್ಲೇಷಿಸೋಣ.
ನವದೆಹಲಿ: ನಿಮ್ಮ ಜೀವನವನ್ನು Dear Zindagiಯನ್ನಾಗಿ ಪರಿವರ್ತಿಸಬಲ್ಲ ಅತ್ಯಂತ ಸುಂದರವಾದ ಭಾವನೆ ಅಂದರೆ ಖುಷಿ (Happiness) ಕುರಿತು ಇಂದು ವಿಶ್ಲೇಷಿಸೋಣ. ಖುಷಿಯಾಗಿರಲು ಕೇವಲ ಹಣ ಅಷ್ಟೇ ಸಾಲದು ಸಮಯ ಕೂಡ ಮುಖ್ಯ ಎಂಬುದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಯಾವುದೇ ಓರ್ವ ಸಾಮಾನ್ಯ ವ್ಯಕ್ತಿಯಂತೆ, ದೀಪಿಕಾ ಅವರ ಜೀವನದಲ್ಲಿಯೂ ಹಣವು ಅತ್ಯಂತ ಮುಖ್ಯವಾಗಿತ್ತು, ಆದರೆ ಕಳೆದ ಕೆಲವು ವರ್ಷಗಳಲ್ಲಿ, ಸಂತೋಷವು ಹಣದ ಮೂಲಕ ಸಿಗುವುದಿಲ್ಲ ತನ್ನ ಹಾಗೂ ತನ್ನ ಪ್ರೀಯಪಾತ್ರರ ಜೊತೆಗೆ ಸಮಯ ಕಳೆಯುವುದರಿಂದ ಸಂತೋಷ ಸಿಗುತ್ತದೆ ಎಂಬುದು ಅವಳಿಗೆ ತಿಳಿದಿದೆ.
ಇದನ್ನು ಓದಿ- Happiness Mantra:ದುಃಖಗಳ ನಡುವೆಯೇ ನಗುಮೊಗದಿಂದ ಮುಂದುವರೆಯಲು ಪ್ರೇರಣೆ ನೀಡುವ ಮಾತುಗಳು
ಹಣ ಮತ್ತು ಸಮಯ ಎರಡರಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ
ಇತ್ತೀಚಿಗೆ ಯೂನಿವರ್ಸಿಟಿ ಆಫ್ ಬ್ರಿಟಿಶ್ ಕೊಲಂಬಿಯಾ ಅಧ್ಯಯನವೊಂದನ್ನು ನಡೆಸಿದ್ದು, ಅಧ್ಯಯನದ ಅಂಶಗಳು ಆಶ್ಚರ್ಯ ಹುಟ್ಟಿಸುವಂತಿವೆ. ಈ ಅಧ್ಯಯನದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡ ಒಟ್ಟು 1000 ವಿದ್ಯಾರ್ಥಿಗಳಿಗೆ ಹಣ ಮತ್ತು ಸಮಯ ಎರಡರಲ್ಲಿಯೂ ಕೂಡ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಿರಿ ಎಂದು ಕೇಳಲಾಗಿದೆ. ಶೇ.60 ವಿದ್ಯಾರ್ಥಿಗಳು ತಾವು ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ ಎಂದರೆ ಶೇ.40 ರಷ್ಟು ವಿದ್ಯಾರ್ಥಿಗಳು ಹಣಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ.
ಇದನ್ನು ಓದಿ- ಅಂತಾರಾಷ್ಟ್ರೀಯ ಸಂತೋಷ ದಿನ: ಸದಾ ಸಂತೋಷವಾಗಿರಲು 5 ಮಾರ್ಗಗಳು
ಗ್ರ್ಯಾಜುಯೆಶನ್ ಬಳಿಕ ಬದಲಾಗಿದೆ ಉತ್ತರ
ಹ್ಯಾಪಿನೆಸ್ ಸ್ಕೇಲ್ ಮೇಲೆ ಈ ವಿದ್ಯಾರ್ಥಿಗಳು ಪದವಿ ಓದುತ್ತಿದ್ದಾಗ ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಪದವಿ ಮುಗಿದ ಒಂದು ವರ್ಷದ ಬಳಿಕ ಪುನಃ ಅದೇ ಪ್ರಶ್ನೆಯನ್ನು ಕೇಳಲಾಗಿದೆ. ಈ ವೇಳೆ ಒಂದು ವರ್ಷದ ಹಿಂದೆ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ವಿದ್ಯಾರ್ಥಿಗಳ ಜೀವನದಲ್ಲಿ ಖುಷಿಯ ಕೊರತೆ ಕಾಣಿಸಿಕೊಂಡಿದೆ. ಒಂದು ವೇಳೆ ನೀವು ಜೀವನದಲ್ಲಿ ಹಣದ ಬೆನ್ನು ಬಿದ್ದರೆ ನಿಮ್ಮ ಮೆಂಟಲ್ ಹೆಲ್ತ್ ಅಂದರೆ ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ನಿಮ್ಮ ಅವಶ್ಯಕತೆ ಪೂರ್ತಿಯಾಗುವಷ್ಟು ಹಣ ನಿಮ್ಮ ಬಳಿ ಇದ್ದರೆ ನೀವು ಖುಷಿಯಾಗಿರಬಹುದು ಎಂದು ವಿಶ್ವದಲ್ಲಿ ನಡೆದ ಹಲವು ಅಧ್ಯಯನಗಳು ಸಾರಿ ಹೇಳುತ್ತವೆ. ಆದರೆ, ನಿಮ್ಮ ಬಳಿ ಅತಿ ಹೆಚ್ಚು ಹಣವಿದೆ ಎಂದರೆ ಇದರ ಅರ್ಥ ನಿಮ್ಮ ಜೀವನ ಸಂಪೂರ್ಣವಾಗಿ ಖುಷಿಯಾಗಿದೆ ಎಂದಲ್ಲ.
ಕ್ಯಾನ್ಸರ್ ಗಳಂತಹ ಕಾಯಿಲೆಗೆ ಕಾರಣವಾಗಬಹುದು ದುಃಖ
ಮನೋವೈಜ್ಯಾನಿಕ ಡಾ.ಭಾವನಾ ವರ್ಮಾ ಹೇಳುವ ಪ್ರಕಾರ ನಾವು ನಮಗಾಗಿ ಹಾಗೂ ನಮ್ಮವರ ಜೊತೆಗೆ ಹೆಚ್ಚಿನ ಸಮಯ ಕಳೆದರೆ ನಾವು ಹೆಚ್ಚು ಖುಶಿಯಾಗಿರಬಹುದು. ಇದಕ್ಕೆ ಪೂರಕ ಎಂಬಂತೆ ನಮ್ಮ ಶರೀರ ಕೂಡ ಹಾರ್ಮೋನ್ ಗಳನ್ನು ಬಿಡುಗಡೆಗೊಳಿಸುತ್ತದೆ. ಈ ಹಾರ್ಮೋನುಗಳು ತಮ್ಮ ಶರೀರವನ್ನು ನಿರೋಗಿಯನ್ನಾಗಿಡುತ್ತವೆ. ಇನ್ನೊಂದೆಡೆ ನೀವು ಹೆಚ್ಚು ದುಃಖಿತರಾಗಿದ್ದರೆ ನೀವು ಹೃದಯ ಕಾಯಿಲೆಯಿಂದ ಕ್ಯಾನ್ಸರ್ ಕಾಯಿಲೆವರೆಗೆ ಕಾಯಿಲೆಗೆ ಶರೀರ ಗುರಿಯಾಗಲಿದೆ.
ಇದನ್ನು ಓದಿ- ಜಿಡಿಪಿ ಅಷ್ಟೇ ಅಲ್ಲ, ಸಂತೋಷವೂ ಮುಖ್ಯ: ಪ್ರಣಬ್ ಮುಖರ್ಜಿ
ಇಂತಹ ಸಮಯದಲ್ಲಿ ಜನರು ಹೆಚ್ಚು ಖುಷಿಯಾಗಿರುತ್ತಾರೆ
ಅಧ್ಯಯನದ ವೇಳೆ ಅಮೆರಿಕಾದ ಒಟ್ಟು 12 ಸಾವಿರ ಜನರ ಮಧ್ಯೆ ಒಂದು ಸರ್ವೇ ನಡೆಸಲಾಗಿದ್ದು, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರಿಂದ ಹೆಚ್ಚಿನ ಅಂತರ ಬೀಳುವುದಿಲ್ಲ. ಆದರೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ಕೈಯಲ್ಲಿ ಹಣವಿದ್ದು, ಅವುಗಳಿಂದ ನೀವು ನಿಮ್ಮ ಅವಶ್ಯಕತೆಗೆ ತಕ್ಕಂತೆ ಖರೀದಿ ನಡೆಸುತ್ತಿದ್ದರೆ ನಿಮ್ಮ ಜೀವನ ಹೆಚ್ಚು ಸಂತುಷ್ಟಿಯಿಂದ ಕೂಡಿರುತ್ತದೆ ಮತ್ತು ನೀವು ಹೆಚ್ಚು ಖುಷಿಯಾಗಿರುತ್ತಿರಿ.
ಸಂತೋಷದ ಮಾನದಂಡದ ಪ್ರಕಾರ ನೀವು ಎಲ್ಲಿರುವಿರಿ
ನಿಮ್ಮ ಬಳಿ ಇರುವ ಹಣವನ್ನು ನೀವು ಹೇಗೆ ಖರ್ಚು ಮಾಡುತ್ತಿರಿ ಎಂಬುದು ಪ್ರಮುಖವಾಗಿದೆ. ನೀವು ನಿಮ್ಮ ಹಣವನ್ನು ಸಾಧನ ಸೌಕರ್ಯಗಳ ಮೇಲೆ ಹೆಚ್ಚಿಗೆ ಖರ್ಚು ಮಾಡುತ್ತಿದ್ದರೆ, ಹ್ಯಾಪಿನೆಸ್ ಸ್ಕೇಲ್ ನಲ್ಲಿ ನಿಮ್ಮ ಸ್ಥಾನ ತುಂಬಾ ಕೆಳಮಟ್ಟಕ್ಕೆ ಇರಲಿದೆ. ಆದರೆ ಒಂದು ವೇಳೆ ನೀವು ನಿಮ್ಮ ಹಣವನ್ನು ಸ್ನೇಹಿತರ ಜೊತೆಗೆ ಟ್ರ್ಯಾಕ್ ಮೇಲೆ ಹೋಗಲು, ಕುಟುಂಬ ಸದಸ್ಯರ ಜೊತೆಗೆ ಒಳ್ಳೆಯ ತಾಣಕ್ಕೆ ಭೇಟಿ ನೀಡಲು ಇತ್ಯಾದಿಗಳ ಮೇಲೆ ಖರ್ಚು ಮಾಡಿದರೆ ನಿಮ್ಮ ಖುಷಿಯ ರೇಟಿಂಗ್ ಹೆಚ್ಚಾಗಿರಲಿದೆ.
ಸಂತೋಷ ಅಥವಾ ಖುಷಿ ಹಂಚಿಕೊಳ್ಳುವುದರಿಂದ ಹೆಚ್ಚಾಗುತ್ತದೆ
70 ವರ್ಷ ವಯಸ್ಸಿನ ಬೌದ್ಧ ಧರ್ಮ ಗುರು ಮ್ಯಾಥ್ಯೂ ರಿಚರ್ಡ್ ಅವರನ್ನು ವಿಶ್ವದ ಅತ್ಯಂತ ಖುಷಿಯಾಗಿರುವ ವ್ಯಕ್ತಿ ಎಂದು ಹೇಳಲಾಗುತ್ತದೆ. 1991 ರಲ್ಲಿಕೊನೆಯ ಬಾರಿಗೆ ದುಃಖಿತರಾಗಿದ್ದರೆಂದು ಹೇಳಲಾಗುತ್ತದೆ. ಮ್ಯಾಥ್ಯೂ ಅವರ ಖುಷಿಯಾಗಿರುವಿಕೆಯಿಂದ ಪ್ರಭಾವಿತರಾಗಿ ಅಮೇರಿಕಾ ವಿಸ್ಕಾನ್ಸಿನ್ ವಿವಿ ಅವರ ಮೇಲೆ 12 ವರ್ಷಗಳ ಅಧ್ಯಯನ ಕೂಡ ನಡೆಸಿದೆ. ಮ್ಯಾಥ್ಯೂ ಅವರು ಹೇಳುವ ಪ್ರಕಾರ ಖುಷಿ ಹಂಚಿಕೊಳ್ಳುವುದರಿಂದ ಹೆಚ್ಚಾಗುತ್ತದೆ.
ಈ ಸಂಶೋಧನೆಯ ಸಮಯದಲ್ಲಿ, 256 ಸಂವೇದಕಗಳನ್ನು ಅವರ ತಲೆಯ ಮೇಲೆ ಇರಿಸಲಾಗಿತ್ತು. ಮ್ಯಾಥ್ಯೂ ಕರುಣೆಯ ಆಧಾರದ ಮೇಲೆ ಧ್ಯಾನ ಮಾಡಿದಾಗ, ಗಾಮಾ ಅಲೆಗಳು ಅವನ ಮೆದುಳಿನಲ್ಲಿ ಉದ್ಭವಿಸುತ್ತವೆ. ಮ್ಯಾಥ್ಯೂ ಅವರ ಮೆದುಳಿನ ಸ್ಕ್ಯಾನ್ ಸಮಯದಲ್ಲಿ ಗೈನ್ ಅಲೆಗಳನ್ನು ದಾಖಲಿಸಲಾಗಿದೆ. ಈ ಅಲೆಗಳು ಪ್ರಜ್ಞೆ, ಧ್ಯಾನ ಮತ್ತು ಸ್ಮರಣೆಯೊಂದಿಗೆ ಸಂಬಂಧ ಹೊಂದಿವೆ. ವಿಜ್ಞಾನಿಗಳು ಮೊದಲು ಮನುಷ್ಯನ ಮೆದುಳಿನಲ್ಲಿ ಇಂತಹ ಅಲೆಗಳನ್ನು ದಾಖಲಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.