ಅಂತಾರಾಷ್ಟ್ರೀಯ ಸಂತೋಷ ದಿನ: ಸದಾ ಸಂತೋಷವಾಗಿರಲು 5 ಮಾರ್ಗಗಳು

ಪತ್ರಿ ವರ್ಷ ಮಾರ್ಚ್ 20ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಸಂತೋಷ ದಿನ ಆಚರಿಸಲಾಗುತ್ತದೆ.

Last Updated : Mar 20, 2018, 06:21 PM IST
ಅಂತಾರಾಷ್ಟ್ರೀಯ ಸಂತೋಷ ದಿನ: ಸದಾ ಸಂತೋಷವಾಗಿರಲು 5 ಮಾರ್ಗಗಳು title=

ದೈನಂದಿನ ಜೀವನದಲ್ಲಿ ಸಂತೋಷದ ಮಹತ್ವವನ್ನು ಸಾರಿ ಹೇಳಲು ಪತ್ರಿ ವರ್ಷ ಮಾರ್ಚ್ 20ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಸಂತೋಷ ದಿನ ಆಚರಿಸಲಾಗುತ್ತದೆ. ಡೇ ಆಫ್ ಹ್ಯಾಪಿನೆಸ್ ವೆಬ್ ಸೈಟ್ ಪ್ರಕಾರ, ಸಂಬಂಧಗಳ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸಲು, ದಯೆ ಮತ್ತು ಪರಸ್ಪರ ಸಹಾಯದೊಂದಿಗೆ ಸಂತೋಷವನ್ನು ಹಂಚಿರಿ" ಎಂಬುದು ಈ ವರ್ಷದ ಧ್ಯೇಯವಾಕ್ಯ. 

ಈ ದಿನದಂದು ಸದಾ ಸಂತೋಷದಿಂದಿರಲು ಅಗತ್ಯವಾದ 5 ಮಾರ್ಗಗಳ ಬಗ್ಗೆ ತಿಳಿಯೋಣ 

ಸಿಗದಿದ್ದರ ಹಿಂದೆ ಓಡಬೇಡಿ, ಇರುವುದರಲ್ಲಿ ಬದುಕಿ 
ಬಹಳಷ್ಟು ಜನ ಸಂತೋಷವಾಗಿರಲು ಹೆಚ್ಚು ಹಣ, ಹೊಸ ಬಟ್ಟೆಗಳು, ಉತ್ತಮ ಸಂಬಂಧಗಳಿಗಾಗಿ ಹಾತೊರೆಯುತ್ತಾರೆ. ಆದರೆ ಅವೆಲ್ಲವನ್ನೂ ಪಡೆದುಕೊಂಡಾಗಲೂ ಕೆಲವೊಮ್ಮೆ ಸಂತೋಷ ದೊರೆಯುವುದಿಲ್ಲ. ಜೀವನದಲ್ಲಿ ಬಹಳಷ್ಟು ಏರಿಳಿತಗಳು ಉಂಟಾಗುತ್ತವೆ. ಹಾಗಾಗಿ ಸಿಗದಿದ್ದರ ಬಗ್ಗೆ ಚಿಂತಿಸದೆ, ಇರುವುದರಲ್ಲಿ ಉತ್ತಮ ಬದುಕು ಕಂಡುಕೊಳ್ಳಲು ಆರಂಭಿಸಿ. ಅತಿಯಾಗಿ ಬಯಸುವುದು ಒಳ್ಳೆಯದೇ, ಆದರೆ ಜೀವನದಲ್ಲಿ ನೆಮ್ಮದಿ, ವಿಶ್ರಾಂತಿಯನ್ನು ಆನಂದಿಸಲು ಮರೆಯಬೇಡಿ. 

ನಿಮ್ಮ ಜವಾಬ್ದಾರಿಗಳ ಬಗ್ಗೆ ಗಮನ ಕೊಡಿ
ಸಾಮಾನ್ಯವಾಗಿ ನಾವು ನಮ್ಮ ಸಮಸ್ಯೆಗಳಿಗೆ ಇತರ ವ್ಯಕ್ತಿಗಳನ್ನು, ಸಂದರ್ಭಗಳನ್ನು ಮತ್ತು ಕೆಲವೊಮ್ಮೆ ವಸ್ತುಗಳನ್ನೂ ದೂಷಿಸುತ್ತೇವೆ. ಅದಕ್ಕೆ ಬದಲಾಗಿ, ನಿಮ್ಮ ಜೀವನದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಉತ್ತಮ ಬದುಕು ಸಾಗಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಿ.

ಉತ್ತೇಜನಕ್ಕಾಗಿ ಹುಡುಕಬೇಡಿ
ನಾವು ಅಂತ್ಯವಿಲ್ಲದ ಪ್ರಚೋದನೆಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಸಿನೆಮಾ, ವಿಡಿಯೋ ಗೇಮ್'ಗಳು ಮತ್ತು ಅಂತರ್ಜಾಲಗಳಲ್ಲಿ ಪ್ರಚೋದನಕಾರಿ ಅಂಶಗಳು ಸಾಮಾನ್ಯವಾಗಿರುತ್ತವೆ. ಆದರೆ ಕೆಲವೊಮ್ಮೆ ಇವು ಬೇಸರ ಎನಿಸುತ್ತವೆ. ಹಾಗಾಗಿ ನೀವು ಪ್ರತಿದಿನ ಮಾಡುವ ಕೆಲಸಗಳನ್ನು ನೀವೇ ಪ್ರಶಂಸಿಸಿಕೊಳ್ಳಿ. ನಿಮಗೆ ಸಂತೋಷ ನೀಡುವ ನೀವು ಪ್ರೀತಿಸುವ ಜನರೊಂದಿಗೆ ಕೆಲವು ಕ್ಷಣಗಳನ್ನು ಕಳೆಯುವುದನ್ನು ಮರೆಯಬೇಡಿ.

ನಿರ್ಧಾರ ತೆಗೆದುಕೊಳ್ಳಿ
ನಿಮ್ಮ ಜೀವನದ ಜವಾಬ್ದಾರಿಯನ್ನು ಎತ್ತಿಹಿಡಿಯುವಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಆಲೋಚನೆಯಲ್ಲಿ ಅಲ್ಪ ಬದಲಾವಣೆ ತಂದು ನಿಮಗೆ ಸಂತೋಷ ನೀಡಬಲ್ಲಂತಹ ಕಾಯಗಳಲ್ಲಿ ತೊಡಗಿ. ಸಾಕಷ್ಟು ಶ್ರಮ ಮತ್ತು ದೃಢ ನಿರ್ಧಾರದಿಂದಾಗಿ ನೀವು ಬಯಸುವ ಬದುಕನ್ನು ಸುಂದರವಾಗಿಸಿಕೊಳ್ಳಿ.

ಏನನ್ನೂ ನಿರೀಕ್ಷಿಸಬೇಡಿ
ನಾವು ಇತರರನ್ನು ನೋಡಿಕೊಳ್ಳುವುದಕ್ಕಿಂತಲೂ ಇತರರು ನಮ್ಮನ್ನು ನೋಡಿಕೊಳ್ಳಬೇಕು ಎಂದು ನಿರೀಕ್ಷಿಸುತ್ತೇವೆ. ಮಾಡೆಲ್ ಗಳಂತೆ ಕಾಣಬೇಕೆಂದು ಹೆಚ್ಚು ಶ್ರಮ ಹಾಕಿದರೂ, ನಾವು ಅವರಂತಾಗಲು ಸಾಧ್ಯವಿಲ್ಲ. ಹಾಗಾಗಿ ಇಂತಹ ಅಸಮಂಜಸವಾದ ನಿರೀಕ್ಷೆಗಳನ್ನು ಹೊಂದುವುದು ಸರಿಯಲ್ಲ. ಬದುಕನ್ನು ಇರುವ ಹಾಗೆಯೇ ಸ್ವೀಕರಿಸಿ; ಯಾವುದು ಇರಬೇಕೆಂಬುದರ ಬಗ್ಗೆ ಚಿಂತನೆ ಮಾಡುವುದನ್ನು ನಿಲ್ಲಿಸಿ ಮತ್ತು ಏನಿದೆಯೋ ಅದನ್ನು ಸ್ವೀಕರಿಸಿ. ಯಾವುದೇ ಕಟ್ಟುಪಾಡುಗಳಿಲ್ಲದೆ, ನಿರೀಕ್ಷೆಗಳಿಲ್ಲದೆ ಬದುಕಿದಾಗ, ಪ್ರತಿಯೊಂದು ಒಳ್ಳೆಯ ವಿಷಯವೂ ನಿಮಗೆ ಸರ್ಪ್ರೈಸ್ ಆಗಿ ಕಾಣುತ್ತದೆ. 

Trending News