Happiness Mantra:ದುಃಖಗಳ ನಡುವೆಯೇ ನಗುಮೊಗದಿಂದ ಮುಂದುವರೆಯಲು ಪ್ರೇರಣೆ ನೀಡುವ ಮಾತುಗಳು

ಜೀವನದಲ್ಲಿ ತೊಂದರೆಗಳು ಸಾಮಾನ್ಯ. ಈ ಜಗತ್ತಿನಲ್ಲಿ ದುಃಖಗಳೇ ಇಲ್ಲದ ವ್ಯಕ್ತಿ ಇಲ್ಲ.

Last Updated : Sep 13, 2020, 05:58 PM IST
Happiness Mantra:ದುಃಖಗಳ ನಡುವೆಯೇ ನಗುಮೊಗದಿಂದ ಮುಂದುವರೆಯಲು ಪ್ರೇರಣೆ ನೀಡುವ ಮಾತುಗಳು title=

ನವದೆಹಲಿ: ಜೀವನ(Life)ದಲ್ಲಿ ತೊಂದರೆಗಳು ಸಾಮಾನ್ಯ. ಈ ಜಗತ್ತಿನಲ್ಲಿ ದುಃಖಗಳೇ ಇಲ್ಲದ ವ್ಯಕ್ತಿ ಇಲ್ಲ. ಕೆಟ್ಟ ದಿನಗಳನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದು ಬಹಳ ಮುಖ್ಯ. ಯಾವುದೇ ಪರಿಸ್ಥಿತಿ ಶಾಶ್ವತವಲ್ಲ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವುದೇ ಸಮಸ್ಯೆಯನ್ನು ಎದುರಿಸಿದರೆ, ನೀವು ಈ ಬಗ್ಗೆ ಯೋಚಿಸಿ ಮುಂದುವರಿಯಬೇಕು. ಬನ್ನಿ, ಸಂತೋಷದಿಂದ ನೀವು ಸಂದರ್ಭಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಯೋಣ.

ಪರಿವರ್ತನೆ ಸೃಷ್ಟಿಯ ನಿಯಮ
ಗೀತಾ ಉಪದೇಶದಲ್ಲಿ ಶ್ರೀಕೃಷ್ಣ ಹೇಳುವ ಹಾಗೆ ಯುಗ, ವ್ಯಕ್ತಿ, ಸ್ವಭಾವ, ಜೀವನ, ಭಾವ ಎಲ್ಲವು ಪರಿವರ್ತನಶೀಲವಾಗಿದೆ. ಹೀಗಾಗಿ ದುಃಖದ ದಿನಗಳು ಹಾಗೂ ಒತ್ತಡದ ದಿನಗಳು ಕೂಡ ಒಂದು ದಿನ ಅಂತ್ಯವಾಗಲಿವೆ.

ಖುಷಿಯಾಗಿರುವುದರಿಂದ ಯೋಚಿಸುವ ಕ್ಷಮತೆ ಹೆಚ್ಚಾಗುತ್ತದೆ.
ಯಾವುದೇ ಒಂದು ಘಟನೆಯಿಂದ ನೀವು ಯಾವಾಗಲು ದುಃಖಿತರಾಗಿದ್ದರೆ, ಇದರಿಂದ ನಿಮ್ಮ ಕ್ರಿಯಾಶೀಲತೆ ಕಡಿಮೆಯಾಗುವುದಲ್ಲದೆ, ನಿಮ್ಮ ತಾರ್ಕಿಕ ಕ್ಷಮತೆಯ ಮೇಲೂ ಕೂಡ ಪ್ರಭಾವ ಉಂಟಾಗುತ್ತದೆ. ಹೀಗಾಗಿ ಖುಷಿಯಾಗಿರುವುದರಿಂದ ಉಪಾಯ ಬೇಗ ಸಿಗುತ್ತದೆ ಎಂಬುದನ್ನು ನಿಮ್ಮಷ್ಟಕ್ಕೆ ನೀವೇ ಹೇಳಿ.

ಖುಷಿ ಹಂಚಿಕೊಳ್ಳುವುದರಿಂದ ಹೆಚ್ಚಾಗುತ್ತದೆ, ದುಃಖ ಹಂಚಿಕೊಳ್ಳುವುದರಿಂದ ಕಡಿಮೆಯಾಗುತ್ತದೆ
ಶುಭಚಿಂತಕರ ಜೊತೆಗೆ ಖುಷಿ ಹಂಚಿಕೊಳ್ಳುವುದರಿಂದ ಹೆಚ್ಚಾಗುತ್ತದೆಯೋ, ಅದೇ ರೀತಿ ದುಃಖ ವಿಶ್ವಾಸಪಾತ್ರರ ಜೊತೆಗೆ ಹಂಚಿಕೊಳ್ಳುವುದರಿಂದ ಕಡಿಮೆಯಾಗುತ್ತದೆ.  ಹೀಗಾಗಿ ನಿಮ್ಮ ಮನಸ್ಸಿನ ಮಾತು ತಪ್ಪದೆ ಕೇಳಿ.

ನಿಮ್ಮ ಅವಸರಗಳನ್ನು ಗುರುತಿಸಿ
ಕೆಟ್ಟ ಕಾಲದಲ್ಲಿ ನಮ್ಮವರ ಹಾಗೂ ಪರರ ಗುರುತು ಪತ್ತೆಯಾಗುತ್ತದೆಯೋ, ಅದೇ ರೀತಿ ಕೆಟ್ಟ ಕಾಲದಲ್ಲಿ ನಮ್ಮ ಸ್ವಂತ ಪ್ರತಿಭೆ ಹಾಗೂ ಅವಸರಗಳನ್ನು ಕೂಡ ಪ್ರಮಾಣಿಸಿ ನೋಡಬಹುದು. ಹೀಗಾಗಿ ಕೆಟ್ಟ ಪರಿಸ್ಥಿತಿಯಲ್ಲಿ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕು.

Trending News