Health Insurance ಹೆಚ್ಚು ಕುಟುಂಬ ಸದಸ್ಯರು ಇರುವ ಕುಟುಂಬಕ್ಕೆ ಇದು ಉತ್ತಮ ಆರೋಗ್ಯ ವಿಮಾ ಪಾಲಸಿ
Health Insurance - ಕರೋನಾ ಸಾಂಕ್ರಾಮಿಕದ ಕಾಲದಲ್ಲಿ, ಆರೋಗ್ಯ ವಿಮೆಯ ಮಹತ್ವ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚು ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ, ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಅವರಿಗೆ ತುಂಬಾ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ಮಾಹಿತಿ ಪಡೆದ ಬಳಿಕ ಮಾತ್ರ ನಂತರ ವಿಮೆಯನ್ನು ತೆಗೆದುಕೊಳ್ಳುವುದು ಉತ್ತಮ
ನವದೆಹಲಿ: Health Insurance - ಪ್ರಸ್ತುತ ಸಮಯದಲ್ಲಿ, ಆರೋಗ್ಯ ವಿಮೆಯ ಪ್ರಾಮುಖ್ಯತೆ ಗಣನೀಯವಾಗಿ ಹೆಚ್ಚಾಗಿದೆ, ವಿಶೇಷವಾಗಿ ಕರೋನಾ ಸಾಂಕ್ರಾಮಿಕದ ನಂತರ. ವಿಮಾ ಕಂಪನಿಗಳು ಸಹ ಇದರ ಲಾಭವನ್ನು ಪಡೆದುಕೊಂಡಿದ್ದು, ಆರೋಗ್ಯ ವಿಮೆಯ ಪ್ರೀಮಿಯಂ ಅನ್ನು ಸಹ ಮೊದಲಿಗಿಂತ ಹೆಚ್ಚಿಸಿವೆ. ಹೀಗಾಗಿ ದೊಡ್ಡ ಕುಟುಂಬ ಹೊಂದಿರುವ ಜನರಿಗೆ ಆರೋಗ್ಯ ವಿಮೆ ತುಂಬಾ ದುಬಾರಿಯಾಗಿದೆ. ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಹೆಚ್ಚು ಕುಟುಂಬ ಸದಸ್ಯರನ್ನು ಒಳಗೊಳ್ಳುವಂತಹ ಯೋಜನೆಗಳಿಗಾಗಿ ಜನರು ಹುಡುಕಾಟ ನಡೆಸುತ್ತಿದ್ದಾರೆ. ನೀವೂ ಕೂಡ ಒಂದು ವೇಳೆ ಕೈಗೆಟುಕುವ ದರದಲ್ಲಿ ಆರೋಗ್ಯ ವಿಮೆ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರಿಂದ ನಿಮಗೆ ಉತ್ತಮ ಆರೋಗ್ಯ ವಿಮೆ ಸಿಗುವುದರ ಜೊತೆಗೆ ನಿಮ್ಮಇಡೀ ಕುಟುಂಬ ಈ ಪಾಲಸಿ ಅಡಿ ಕವರೇಜ್ ಪಡೆಯಬಹುದು.
ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರು ಕವರ್
ಪ್ರಸ್ತುತ ಆರೋಗ್ಯ ವಿಮಾ (Health Insurance) ಕ್ಷೇತ್ರ ಕೂಡ ತುಂಬಾ ವಿಸ್ತಾರಗೊಂಡಿದೆ ಹಾಗೂ ನಿರಂತರ ಹೊಸ ಹೊಸ ಕೊಡುಗೆಗಳನ್ನು ನೀಡುತ್ತಲೇ ಇವೆ. ಇವೆಲ್ಲವುಗಳನ್ನು ಹೊರತುಪಡಿಸಿ ಉತ್ತಮ ಇನ್ಸೂರೆನ್ಸ್ ಪ್ಲಾನ್ ವೊಂದಿದ್ದು, ಇದು ನಿಮ್ಮ ಪಾಲಿಗೆ ಬೆಸ್ಟ್ ಆಗಿ ಸಾಬೀತಾಗುವ ಸಾಧ್ಯತೆ ಇದೆ. ಹಾಗಾದರೆ ಬನ್ನಿ ಈ ಪ್ಲಾನ್ ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಈ ಪ್ಲಾನ್ ನಲ್ಲಿ ಪ್ರೀಮಿಯಂ ಕೂಡ ತುಂಬಾ ಕಡಿಮೆಯಾಗಿದ್ದು, ಇದರ ಅಡಿ ನೀವು ಕುಟುಂಬದ ಒಟ್ಟು 15 ಸದಸ್ಯರಿಗೆ ಅರೋಗ್ಯ ವಿಮೆಯ ಕವರ್ ಪಡೆಯಬಹುದು. ಯಾವುದೇ ರೀತಿಯ ಎಮರ್ಜೆನ್ಸಿಯಲ್ಲಿ ಈ ಪ್ಲಾನ್ ಅಡಿ ಹಲವು ಸೌಕರ್ಯಗಳು ಸಿಗುತ್ತವೆ.
ಇದನ್ನೂ ಓದಿ-ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ
ಈ ಪ್ಲಾನ್ ಲಾಭಗಳೇನು?
ಸರಳ ಭಾಷೆಯಲ್ಲಿ ಹೇಳುವುದಾದರೆ, ಈ ಯೋಜನೆಯು ಇಡೀ ಕುಟುಂಬವನ್ನು ಇದು ಒಳಗೊಳ್ಳುತ್ತದೆ. ನಿಮ್ಮ ಕುಟುಂಬದಲ್ಲಿ ನೀವು 5 ಜನರನ್ನು ಹೊಂದಿದ್ದರೆ ಮತ್ತು ನೀವು 25 ಲಕ್ಷ ರೂ.ಗಳ ಫ್ಲೋಟರ್ ಯೋಜನೆಯನ್ನು ತೆಗೆದುಕೊಂಡರೆ, ಯಾವುದೇ ಸದಸ್ಯರ ಅನಾರೋಗ್ಯದ ಕುರಿತು ನೀವು 20-25 ಲಕ್ಷದವರೆಗೆ ಕವರ್ ಪಡೆಯಬಹುದು. ಈ ಯೋಜನೆಯನ್ನು ತೆಗೆದುಕೊಂಡ ನಂತರ, ನೀವು ಪ್ರತಿ ಸದಸ್ಯರಿಗೆ ಪ್ರತ್ಯೇಕ ವಿಮೆಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಕುಟುಂಬವನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಲು ಇದು ಉತ್ತಮ ಮಾರ್ಗವಾಗಿದೆ. ಈ ಯೋಜನೆಯ ವಿಶೇಷತೆಯೆಂದರೆ, ಎಷ್ಟು ಸದಸ್ಯರು ಇದ್ದರೂ, ಪ್ರೀಮಿಯಂ ಒಂದೇ ಆಗಿರುತ್ತದೆ. ಸದಸ್ಯ ಹೆಚ್ಚಾದಂತೆ ಪ್ರೀಮಿಯಂ ಹೆಚ್ಚಾಗುತ್ತದೆ. ಆದರೆ ಒಟ್ಟು ಪ್ರೀಮಿಯಂ ಪ್ರತ್ಯೇಕ ಪ್ರಿಮಿಯಂಗೆ ಹೋಲಿಸಿದೆ ತುಂಬಾ ಕಡಿಮೆಯಾಗಿದೆ.
ಇದನ್ನೂ ಓದಿ-NPS: ದಿನಕ್ಕೆ 180 ರೂ. ಹೂಡಿಕೆ ಮಾಡಿ, ನಿವೃತ್ತಿ ವೇಳೆ ಕೋಟ್ಯಾಧಿಪತಿಯಾಗಿ
ಪ್ರೀಮಿಯಂ ಲೆಕ್ಕಾಚಾರ ಇಲ್ಲಿದೆ
ನೀವು 35 ವರ್ಷ ವಯಸ್ಸಿನವರಾಗಿದ್ದು, ನೀವು ಆರೋಗ್ಯ ವಿಮೆ ಪಾಲಸಿ ಹೊಂದಿದ್ದರೆ ಅದರ ಪ್ರೀಮಿಯಂ ಸಾಮಾನ್ಯವಾಗಿ 12-15 ಸಾವಿರ ರೂಪಾಯಿಗಳು ಇರುತ್ತದೆ. ಇನ್ನೊಂದೆಡೆ ಫ್ಲೋಟರ್ ಯೋಜನೆಯಲ್ಲಿ ಪ್ರೀಮಿಯಂ ಮೊತ್ತವು ಸುಮಾರು 10-11 ಸಾವಿರ ಇರುತ್ತದೆ. ವಿಶೇಷ ಸಂಗತಿ ಎಂದರೆ, ಹೆಂಡತಿ, ಮಕ್ಕಳು, ಪೋಷಕರು ಮತ್ತು ಅಳಿಯಂದಿರನ್ನೂ ಸಹ ಇದು ಒಳಗೊಂಡಿದೆ. ಎಲ್ಲಾ ಕಂಪನಿಗಳು ವಿಭಿನ್ನ ನಿಯಮಗಳನ್ನು ಹೊಂದಿವೆ, ಆದ್ದರಿಂದ ವಿಮೆ ತೆಗೆದುಕೊಳ್ಳುವ ಮೊದಲು ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
ಇದನ್ನೂ ಓದಿ-FD Account: ಈ ಬ್ಯಾಂಕಿನ ಖಾತೆದಾರರು ಮನೆಯಲ್ಲೇ ಕುಳಿತು ಎಫ್‌ಡಿ ಖಾತೆ ತೆರೆಯಲು ಇಲ್ಲಿದೆ ಸುಲಭ ಮಾರ್ಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ