ನವದೆಹಲಿ: Is Hoarse Voice Corona Symptom? - ಕೊರೊನಾ ವೈರಸ್ ನ ಎರಡನೇ ಅಲೆ  (Coronavirus second wave) ದೇಶಾದ್ಯಂತ ಎಷ್ಟೊಂದು ವೇಗವಾಗಿ ಹರಡುತ್ತಿದೆಯೋ ಅಷ್ಟೇ ವೇಗವಾಗಿ ಈ ರೋಗದ ಕುರಿತಾದ ಹೊಸ ಹೊಸ ಲಕ್ಷಣಗಳು ಹಾಗೂ ಜಟಿಲತೆಗಳು (Symptoms and complications) ನೋಡಲು ಸಿಗುತ್ತಿವೆ. ಮೊದಲು ಜ್ವರ, ಸೀತ, ತಲೆನೋವು. ವಾಸನೆ ಅಥವಾ ನಾಲಗೆ ರುಚಿ ಕಳೆದುಕೊಳ್ಳುವಿಕೆ ಈ ರೋಗದ ಸ್ಪಷ್ಟ ಲಕ್ಷಣಗಳಾಗಿವೆ ಎನ್ನಲಾಗಿತ್ತು. ಆದರೆ, ಇದೀಗ ಹೊಟ್ಟೆನೋವು, ಡಯೋರಿಯಾ, ಸ್ಕಿನ್ ರಾಶಿಸ್, ಕೊವಿಡ್ ಟಂಗ್, ಕೊವಿಡ್ ಟೋ  ಲಕ್ಷಣಗಳು ಕೂಡ ಕೊರೊನಾ ಸಂಕೇತವಾಗಿ ಹೊರಹೊಮ್ಮುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಯುವಕರು ಕೊವಿಡ್ ಸೋಂಕಿಗೆ (Coronavirus Infection) ಹೆಚ್ಚು ಗುರಿಯಾಗುತ್ತಿದ್ದಾರೆ (Young people getting infected) . ಇಂದು ನಾವು ನಿಮಗೆ ಕೊರೋನಾದ ಒಂದು ಹೊಸ ಲಕ್ಷಣದ ಕುರಿತು ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಕರ್ಕಶ ಧ್ವನಿ ಕೂಡ ಕೊರೋನಾದ ಒಂದು ಲಕ್ಷಣವಾಗಿದೆ
ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕರಗೊಂಡ ವರದಿಯೊಂದರ ಪ್ರಕಾರ ಕೊವಿಡ್ ಸಿಂಪ್ಟಮ್ ಆಪ್ ಮೂಲಕ ದೊರೆತ ಅಂಕಿ-ಅಂಶಗಳ ಪ್ರಕಾರ, ಕೊರೊನಾ ವೈರಸ್ ಕಾರಣ ಜನರು ತಮ್ಮ ಧ್ವನಿಯಲ್ಲಿ ಬದಲಾವಣೆಯನ್ನು (Change in voice) ಗಮನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆಪ್ ಗೆ ಸಂಬಂಧಿಸಿದ ಲಕ್ಷಾಂತರ ಜನರ ಅಂಕಿ-ಅಂಶಗಳು ಗಂಟಲು ಹಿಡಿಯುವುದು ಅಥವಾ ಕರ್ಕಶ ಧ್ವನಿ (Hoarse voice)  ಹೊರಬರುವುದು ಕೂಡ ಕೊವಿಡ್-19 ಒಂದು ಲಕ್ಷಣವಾಗಿರುವ ಸಾಧ್ಯತೆ ಇದೆ ಎನ್ನುತ್ತವೆ. ಈ ಆಪ್ ಗೆ ಸಂಬಂಧಿಸಿದ ಸಂಶೋಧಕರ ಹೇಳಿಕೆಗಳನ್ನು ನಂಬುವುದಾದರೆ, ಗಡಸು ಧ್ವನಿ ಅಥವಾ ಗಂಟಲು ಹಿಡಿತ ಕೊವಿಡ್ -19ನ (Covid-19 Infection)ಒಂದು ಅಸಾಮಾನ್ಯ ಲಕ್ಷಣವಾಗಿದೆ ಆದರೆ, ಅದನ್ನು ನಿರ್ಲಕ್ಷಿಸಬಾರದು (Do Not Ignore Symptoms) ಎಂದಿದ್ದಾರೆ.


(Voice box) ಅನ್ನೂ ಕೂಡ ಪ್ರಭಾವಿತಗೊಳಿಸುತ್ತದೆ ವೈರಸ್
ಇಂಗ್ಲೆಂಡ್ ನಲ್ಲಿ ಹಲವು ಜನ ವೈದ್ಯಕೀಯ ಸಿಬ್ಬಂದಿಗಳು ಕೊವಿಡ್-19 ರೋಗ ಆರಂಭಗೊಂಡ ಬಳಿಕ ಗಂಟಲು ಹಿಡಿತ ಅಥವಾ ಗಡಸು ಧ್ವನಿಯನ್ನು ಅನುಭವಿಸಿದ್ದಾರೆ ಎನ್ನಲಾಗಿದೆ. ಈ ಅಧ್ಯಯನದ ಪ್ರಕಾರ ಕೆಲ ರೋಗಿಗಳಿಗೆ ಅವರ ಧ್ವನಿ ಕಪ್ಪೆಯ ರೀತಿ ಅಥವಾ ಕರ್ಕಶ ಎಂದೆನಿಸಿದೆ. ಕೊರೊನಾ ವೈರಸ್ ರೆಸ್ಪಿರೆಟರಿ ಸಿಸ್ಟಂ ಅಂದರೆ ಶ್ವಾಸ ತಂತ್ರವನ್ನು  ಪ್ರಭಾವಿತಗೊಳಿಸುತ್ತದೆ. ಹೀಗಾಗಿ ವೈಸ್ ಬಾಕ್ಸ್ ಕೂಡ ಇದರದೇ ಒಂದು ಭಾಗವಾಗಿದ್ದು, ವೈರಸ್ ಪ್ರಭಾವ ಅದರ ಮೇಲೂ ಬೀಳುತ್ತದೆ.


ಇದನ್ನೂ ಓದಿ- Coronavirus: Covishield ಬಳಿಕ ಇದೀಗ Covaxin ದರದಲ್ಲಿಯೂ ಇಳಿಕೆಯ ಘೋಷಣೆ ಮಾಡಿದ ಭಾರತ್ ಬಯೋಟೆಕ್


ಟೆಸ್ಟ್ ಮಾಡಿಸಲು ತಡಮಾಡಬೇಡಿ 
ಕೇವಲ ಧ್ವನಿ (Voice Related Symptoms) ಹಿಡಿಯುವುದು ಕೊವಿಡ್-19ನ ಸಂಕೇತವಲ್ಲ. ಆದರೆ, ಒಂದು ವೇಳೆ ಯಾವುದೇ ಕೆಮ್ಮು ಅಥವಾ ಇತರ ಯಾವುದೇ ಸಮಸ್ಯೆ ಇಲ್ಲದೆ ಆಕಸ್ಮಿಕವಾಗಿ ನಿಮ್ಮ ಗಂಟಲು ಹಾಳಾದರೆ ಮತ್ತು ಜೊತೆಗೆ ಯಾವುದೇ ಲಕ್ಷಣಗಳು ಕಂಡು ಬರುತ್ತಿದ್ದರೆ, ನೀವು ಕೊವಿಡ್ ಟೆಸ್ಟ್ (Get a covid test done) ಮಾಡಿಸಲೇಬೇಕು ಎಂಬುದು ತಜ್ಞರ ಅಭಿಮತ. ಎಲ್ಲಿಯವರೆಗೆ ಟೆಸ್ಟ್ ವರದಿ ಬರುವದಿಲ್ಲವೋ ಅಲ್ಲಿಯವರೆಗೆ ನಿಮ್ಮನ್ನು ನೀವು ಇತರರಿಂದ ಪ್ರತ್ಯೇಕಿಸುವುದು ಉತ್ತಮ.. ಮಾಸ್ಕ್ ಧರಿಸಿ, ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುತ್ತಾ ಇರಬೇಕು. ತಂಪಾದ ಪದಾರ್ಥ ಸೇವನೆಯಿಂದ ದೂರ ಇರಿ.


ಇದನ್ನೂ ಓದಿ- ಆಕ್ಸಿಮೀಟರ್ ಖರೀದಿಸುವ ಮುನ್ನ ಈ 8 ವಿಚಾರಗಳನ್ನು ತಿಳಿದುಕೊಳ್ಳಿ


(ಸೂಚನೆ - ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ತಜ್ಞರ ಅಥವಾ  ವೈದ್ಯರ ಸಲಹೆ ಪಡೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಯಾವುದೇ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ)


ಇದನ್ನೂ ಓದಿ-Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ ಈ ಆಯುರ್ವೇದ ಔಷಧಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.