Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ ಈ ಆಯುರ್ವೇದ ಔಷಧಿ!

Ayurvedic Medicine To Cure Corona: ಕೊರೊನಾ ವೈರಸ್ ನ ಸಾಮಾನ್ಯ ಹಾಗೂ ಮಧ್ಯಮ ಲಕ್ಷಣಗಳಿರುವ ರೋಗಿಗಳಿಗೆ ಆಯುರ್ವೇದ ಔಷಧಿಯಾಗಿರುವ (Ayurvedic Medicine For Covid-19) 'ಆಯುಶ್-64'  (Ayush-64) ಪರಿಣಾಮಕಾರಿಯಾಗಿದೆ ಎನ್ನಲಾಗುತ್ತಿದೆ. ಅಧ್ಯಯನದ ಅವಧಿಯಲ್ಲಿ ಈ ಔಷಧಿ ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಪರಿಣಾಮಕಾರಿ ಸಾಬೀತಾಗಿದೆ ಎನ್ನಲಾಗಿದೆ.

Written by - Nitin Tabib | Last Updated : Apr 29, 2021, 08:23 PM IST
  • ಕೊರೊನಾ ಚಿಕಿತ್ಸೆಗೆ ಶೀಘ್ರ ಬರಲಿದೆ ಈ ಆಯುರ್ವೇದ ಔಷಧ,
  • ಕೊರೊನಾ ಚಿಕಿತ್ಸೆಗೆ ಪರಿಣಾಮಕಾರಿ ಆಯುಶ್ 64.
  • ಈ ಔಷಧಿಯ ಕುರಿತು ಹೇಳಿಕೆ ನೀಡಿದೆ ಕೇಂದ್ರ ಆಯುಶ್ ಸಚಿವಾಲಯ.
Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ  ಈ ಆಯುರ್ವೇದ ಔಷಧಿ! title=
Ayurveda Medicine For Covid-19 (File Photo)

ನವದೆಹಲಿ: Ayurvedic Medicine To Cure Corona - ಕೊರೊನಾ ವೈರಸ್ ನ ಸಾಮಾನ್ಯ ಹಾಗೂ ಮಧ್ಯಮ ಶ್ರೇಣಿಯ ಲಕ್ಷಣಗಳಿರುವ ರೋಗಿಗಳಿಗೆ ಆಯುಶ್ - 64 ಆಯುರ್ವೇದ ಔಷಧಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ. ಆಯುಶ್ ಸಚಿವಾಲಯದ ಪ್ರಕಾರ ಈ ಔಷಧಿ ಕೊರೊನಾ ರೋಗಿಗಳ ಚಿಕಿತ್ಸೆಗೆ ತುಂಬಾ ಲಾಭಕಾರಿಯಾಗಿದೆ ಎಂದು ಹೇಳಿದೆ. ಇದಲ್ಲದೆ ಲಕ್ಷಣಗಳೇ ಇಲ್ಲದ ರೋಗಿಗಳಲ್ಲಿಯೂ ಕೂಡ ಈ ಔಷಧಿ (Corona Medicine) ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಹೇಳಿದೆ.

ಇದನ್ನೂ ಓದಿ- Coronavirus: Covishield ಬಳಿಕ ಇದೀಗ Covaxin ದರದಲ್ಲಿಯೂ ಇಳಿಕೆಯ ಘೋಷಣೆ ಮಾಡಿದ ಭಾರತ್ ಬಯೋಟೆಕ್

ಕೊರೊನಾದಿಂದ ಚೇತರಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ
ಕೇಂದ್ರ ಆಯುಶ್ ಸಚಿವಾಲಯ (Ministry Of AYUSH), ಕೇಂದ್ರ ಔಷಧ ಸಂಶೋಧನಾ ಸಂಸ್ಥೆ(CSIR) ಹಾಗೂ ICMR ನಿಗಾವಣೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭರ್ತಿ ಇರುವ ಸುಮಾರು 140 ರೋಗಿಗಳ ಮೇಲೆ ಈ ಔಷಧಿಯ ಪರೀಕ್ಷೆ ನಡೆಸಿದೆ. ಈ ಔಷಧಿ ಸೇವಿಸಿದ ರೋಗಿಗಳು ತಕ್ಷಣವೆ  ಚೇತರಿಸಿಕೊಂಡಿದ್ದಾರೆ ಎಂಬುದು ಈ ಅಧ್ಯಾಯನದಲ್ಲಿ ಬೆಳಕಿಗೆ ಬಂದಿದೆ ಮತ್ತು ಅವರ RT-PCR ವರದಿ ನಿರೀಕ್ಷೆಗೂ ಮುನ್ನವೇ ನಕಾರಾತ್ಮಕ ಹೊರಬಂದಿದೆ ಎಂದು ಹೇಳಿದೆ.

ಇದನ್ನೂ ಓದಿ- ನಾಳೆ ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ, ಮಹತ್ವದ ನಿರ್ಣಯ ಸಾಧ್ಯತೆ

ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿಯೂ ಕೂಡ ಉತ್ತಮ ಫಲಿತಾಂಶ 
ತಜ್ಞರು ಹೇಳುವ ಪ್ರಕಾರ ಆಯುಶ್-64 ಔಷಧಿಯನ್ನು ಆಲೋಪೆಥಿಕ್ ಔಷಧಿಯ ಜೊತೆಗೂ ಕೂಡ ಸೇವಿಸಬಹುದಾಗಿದೆ. ನಿತ್ಯ ಈ ಔಷಧಿಯ ಒಟ್ಟು ಎರಡು ಮಾತ್ರೆಗಳನ್ನು ಬಿಸಿನೀರಿನ ಜೊತೆಗೆ ಸೇವಿಸಬೇಕು. ಆಯುರ್ವೇದ ವೈದ್ಯರು ಈ ಮಾತ್ರೆಗಳನ್ನು 2ರಿಂದ 12 ವಾರಗಳವರೆಗೆ ಈ ಔಷಧಿಯ ಸಲನೆ ನೀಡುತ್ತಾರೆ. ಈ ಔಷಧಿ ಕೋವಿಡ (Covid-19) ರೋಗಿಗಳನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಗುಣಪಡಿಸುತ್ತದೆ ಎನ್ನಲಾಗುತ್ತಿದೆ. ಇದುವರೆಗೆ ಈ ಔಷಧಿಯ ಕುರಿತು ನಡೆಸಲಾಗಿರುವ ರೋಗಿಗಳಲ್ಲಿ ಸಕ್ಕರೆ ಕಾಯಿಲೆ ಇರುವವರು ಕೂಡ ಶಾಮೀಲಾಗಿದ್ದು, ಅವರ ಮೇಲೂ ಕೂಡ ಈ ಔಷಧಿ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಇದನ್ನೂ ಓದಿ- ಇಂತಹ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು! ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News