Tasty Tea: ಸಾಧಾರಣ ಟೀಯನ್ನು ಆರೋಗ್ಯಕರ , ರುಚಿಕರವಾಗಿಸಲು ಹೀಗೆ ಮಾಡಿ
ಚಹಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಿರುತ್ತದೆ. ಅನೇಕರ ದಿನ ಆರಂಭವಾಗುವುದೇ ಈ ಚಹಾದೊಂದಿಗೆ. ನಿದ್ದೆ ಓಡಿಸಲು ಚಹಾ ವೇಕು. ಅತಿಥಿಗಳನ್ನು ಸ್ವಾಗತಿಸೋದಕ್ಕೆ ಚಹಾ ಬೇಕು, ಟೈಂ ಪಾಸ್ ಮಾಡೋದಕ್ಕು ಚಹಾದ ಮೊರೆ ಹೋಗುವವರಿದ್ದಾರೆ.
ನವದೆಹಲಿ : ಚಹಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಿರುತ್ತದೆ. ಅನೇಕರ ದಿನ ಆರಂಭವಾಗುವುದೇ ಈ ಚಹಾದೊಂದಿಗೆ. ನಿದ್ದೆ ಓಡಿಸಲು ಚಹಾ ಬೇಕು. ಅತಿಥಿಗಳನ್ನು ಸ್ವಾಗತಿಸೋದಕ್ಕೆ ಚಹಾ (Tea) ಬೇಕು, ಟೈಂ ಪಾಸ್ ಮಾಡೋದಕ್ಕು ಚಹಾದ ಮೊರೆ ಹೋಗುವವರಿದ್ದಾರೆ. ಚಹಾ ಅಂದರೆ ಅದು ಬರೀ ಪಾನೀಯವಲ್ಲ. ಅದೊಂದು ಇಮೋಷನ್ ಕೂಡಾ. ಕೆಲವರಿಗೆ ಚಹಾ ಕುಡಿಯದೆ ಹೋದರೆ ಏನೋ ಕಳೆದುಕೊಂಡ ಭಾವ. ಆದರೆ ಈ ಸಾಮಾನ್ಯ ಚಹಾಕ್ಕೆ ಕೆಲವೊಂದು ವಸ್ತುಗಳನ್ನು ಸೇರಿಸಿದರೆ ಮತ್ತಷ್ಟು ರುಚಿಕರ ಮತ್ತಷ್ಟು ಆರೋಗ್ಯಕರವಾಗಿಸಬಹುದು.
ಚಹಾವನ್ನು ಆರೋಗ್ಯಕರವಾಗಿಸಲು ಏನು ಮಾಡಬೇಕು ನೋಡೋಣ..
ನಿಮ್ಮ ಚಹಾವನ್ನು (Tea) ಆರೋಗ್ಯಕರ ಮತ್ತು ಹೆಚ್ಚು ರುಚಿಕರವಾಗಿಸಲು ಬಯಸಿದರೆ, ಚಹಾ ಮಾಡುವಾಗ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ..
ಇದನ್ನೂ ಓದಿ : Vitamin A Deficiency Signs-Symptoms: ಮರೆತೂ ಸಹ ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
1. ಲವಂಗ ಮತ್ತು ಕರಿಮೆಣಸಿನ ಚಹಾ (Clove and Black Pepper Tea):
ಸಾಮಾನ್ಯ ಹಾಲಿನ ಚಹಾವನ್ನು ಮಸಾಲೆ (Masala tea) ಚಹಾವನ್ನಾಗಿ ಮಾಡಬೇಕಾದರೆ, ಲವಂಗ (Clove) ಮತ್ತು ಕರಿಮೆಣಸು ಉಪಯೋಗಿಸಿ. ಲವಂಗ ಮತ್ತು ಕರಿಮೆಣಸು ಚಹಾದ ರುಚಿಯನ್ನೇ ಬದಲಾಯಿಸುತ್ತದೆ. ಇದು ಚಹಾದ ರುಚಿ ಮಾತ್ರ ಬದಲಾಯಿಸುವುದಲ್ಲ, ಆರೋಗ್ಯಕ್ಕೂ ಕೆಲ ಪ್ರಯೋಜನಗಳನ್ನು ನೀಡುತ್ತದೆ. ಲವಂಗದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ದೇಹದ ಅಂಗಗಳನ್ನು (Clove benefits) ಆರೋಗ್ಯವಾಗಿರಿಸುತ್ತದೆ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ಅದೇ ರೀತಿ ಕರಿಮೆಣಸು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2. . ಬೆಲ್ಲ ಚಹಾ (Jaggery Tea) :
ಚಹಾದಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು (Jaggery) ಸೇರಿಸಿದರೆ ಇನ್ನೂ ಒಳ್ಳೆಯದು. ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ (Health benefits of jaggery) ಹೆಚ್ಚು ಪ್ರಯೋಜನಕಾರಿಯಾಗಿದೆ ಮತ್ತು ಇದು ದೇಸಿ ರುಚಿಯನ್ನು ಸಹ ನೀಡುತ್ತದೆ. ಚಹಾಕ್ಕೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಇದು ಮಲಬದ್ಧತೆ (Constipation) ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೆ ಬೆಲ್ಲದಲ್ಲಿರುವ ಕಬ್ಬಿಣದ ಅಂಶವು ಯಕೃತ್ತಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Red Meat : ಕೆಂಪು ಮಾಂಸ ಅತಿಯಾಗಿ ತಿನ್ನುವುದರಿಂದ ಬರುತ್ತೆ 'ಕರುಳಿನ ಕ್ಯಾನ್ಸರ್'..!
3. ತುಳಸಿ ಚಹಾ (Basil Leaves Tea) :
ತುಳಸಿ ಎಲೆಗಳು (Tulsi leaves) ನಿಮ್ಮ ಚಹಾಕ್ಕೆ ವಿಶೇಷವಾದ ರುಚಿಯನ್ನು ನೀಡುತ್ತದೆ. ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ತುಳಸಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಆಂಟಿ ಬ್ಯಾಕ್ಟೀರಿಯಾ, ಆಂಟಿ-ವೈರಲ್, ಆಂಟಿ ಫಂಗಸ್ ಗುಣಗಳಿರುತ್ತವೆ. ಇದು ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ, ಸೋಂಕು, ಕೊಲೆಸ್ಟ್ರಾಲ್ ಇತ್ಯಾದಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ಏಲಕ್ಕಿ ಚಹಾ (Cardamom Tea) :
ಒಂದು ಕಪ್ ಚಹಾಕ್ಕೆ ಎರಡು-ಮೂರು ಸಣ್ಣ ಏಲಕ್ಕಿಗಳನ್ನು ಸೇರಿಸುವುದರಿಂದ ಚಹಾದ ರುಚಿಯೂ ಹೆಚ್ಚುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಏಲಕ್ಕಿಯನ್ನು ಸೇರಿಸುವುದರಿಂದ ಚಹಾಕ್ಕೆ ಉತ್ತಮವಾದ ಘಮ ಸಿಗುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಏಲಕ್ಕಿ ತುಂಬಾ ಸಹಾಯಕವಾಗಿದೆ.
ಇದನ್ನೂ ಓದಿ : Diabetes: ಮಧುಮೇಹ ರೋಗಿಗಳು ಈ 3 ವಿಧಾನಗಳಲ್ಲಿ ಹಾಲನ್ನು ಸೇವಿಸಿದರೆ ಶುಗರ್ ನಿಯಂತ್ರಣದಲ್ಲಿರುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.