Health Benefits Of Jaggery - ಹಾಲು ಬೆಲ್ಲದಿಂದಾಗುವ ಈ ಪ್ರಯೋಜನಗಳು ನಿಮಗೆ ತಿಳಿದಿದೆಯಾ?

Health Benefits Of Jaggery  - ಸಾಮಾನ್ಯವಾಗಿ ನಾವೆಲ್ಲರೂ ಸಿಹಿ ಪದಾರ್ಥಗಳಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಬೆಲ್ಲ(Jaggery) ಸಕ್ಕರೆಗಿಂತ ಹೆಚ್ಚು ರುಚಿಕರ ಹಾಗೂ ಪೌಷ್ಠಿಕವಾಗಿದೆ ಎಂಬುದು ನಿಮಗೆ ತಿಳಿದಿದೆಯೇ?

Written by - Nitin Tabib | Last Updated : Mar 14, 2021, 09:58 PM IST

    ಸಾಮಾನ್ಯವಾಗಿ ಸಿಹಿ ಪದಾರ್ಥಗಳಲ್ಲಿ ಜನರು ಸಕ್ಕರೆ ಬೆರೆಸುವುದು ಸಾಮಾನ್ಯ.

    ಆದರೆ ಸಕ್ಕರೆಗಿಂತ ಬೆಲ್ಲದ ಬಳಕೆ ಆರೋಗ್ಯಕ್ಕೆ ಉತ್ತಮ ಹಾಗೂ ರುಚಿಕರ ಕೂಡ ಹೌದು.

    ಬೆಲ್ಲವನ್ನು ಹಾಲಿನ ಜೊತೆಗೆ ಬೆರೆಸಿ ಸೇವಿಸುವ ಹಲವು ಪ್ರಯೋಜನಗಳಿವೆ.

Health Benefits Of Jaggery - ಹಾಲು ಬೆಲ್ಲದಿಂದಾಗುವ ಈ ಪ್ರಯೋಜನಗಳು ನಿಮಗೆ ತಿಳಿದಿದೆಯಾ? title=
Health Benefits Of Jaggery Milk (File Photo)

Health Benefits Of Jaggery  - ಸಾಮಾನ್ಯವಾಗಿ ನಾವೆಲ್ಲರೂ ಸಿಹಿ ಪದಾರ್ಥಗಳಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಬೆಲ್ಲ(Jaggery) ಸಕ್ಕರೆಗಿಂತ ಹೆಚ್ಚು ರುಚಿಕರ ಹಾಗೂ ಪೌಷ್ಠಿಕವಾಗಿದೆ ಎಂಬುದು ನಿಮಗೆ ತಿಳಿದಿದೆಯೇ. ಬೆಲ್ಲದ ಸೇವನೆ ಶರೀರದಿಂದ ಹಲವು ರೋಗಗಳನ್ನು ತೊಲಗಿಸುತ್ತದೆ ಎಂದು ಸಾಬೀತಾಗಿದೆ. ಹೀಗಾಗಿ ಬೆಲ್ಲ ಸೇವಿಸಿ ಯಾವ ಯಾವ ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.

ಬೆಲ್ಲದ ಅನೇಕ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ನಿಮಗೆ ತಿಳಿದಿರಬಹುದು, ಇನ್ನೂ ಕೆಲವು ನಿಮಗೆ ತಿಳಿಯದೇ ಇರಬಹುದು. ದೇಸಿ ಸೂಪರ್‌ಫುಡ್ ಬೆಲ್ಲವನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ, ಅದರ ಪ್ರಯೋಜನಗಳು ಅನೇಕ ಪಟ್ಟು ಹೆಚ್ಚಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?

ಹೌದು, ಬೆಲ್ಲವನ್ನು ಹಾಲಿಗೆ ಬೆರೆಸಿ ಕುಡಿದರೆ ಹಲವು ಆರೋಗ್ಯಕರ ಪ್ರಯೋಜನ ಸಿಗಲಿದೆ. ಅವುಗಳ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ... (Health Tips)

- ಹಾಲಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.

- ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ನಿದ್ರೆ ನಿಮ್ಮದಾಗುತ್ತದೆ. ಚಯಾಪಚಯ ದರವನ್ನು ವೇಗಗೊಳಿಸಲು ಉತ್ತಮ ನಿದ್ರೆ ಸಹಾಯ ಮಾಡುತ್ತದೆ.

- ರಕ್ತಹೀನತೆ ಇದ್ದರೆ, ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವಂತಹ ಆಹಾರವನ್ನು ಸೇವಿಸಬೇಕು. ಬೆಲ್ಲದಲ್ಲಿ ಹಿಮೋಗ್ಲೋಬಿನ್ ವರ್ಧಿಸುವ ಗುಣಲಕ್ಷಣಗಳು ಕಂಡುಬರುತ್ತವೆ. ಹೀಗಾಗಿ ಹಾಲಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ನಿಮ್ಮ ಹಿಮೊಗ್ಲೋಬಿನ್ ಹೆಚ್ಚಾಗುತ್ತದೆ.

ಇದನ್ನೂ ಓದಿ- ಕಡುಬೇಸಿಗೆಯಲ್ಲಿ ಈ 9 ಆಹಾರಗಳಿಂದ ಸಾಧ್ಯವಾದಷ್ಟೂ ದೂರ ಇರಿ.!

- ನೀವು ಪ್ರತಿದಿನ ಹಾಲಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿದರೆ ನಿಮ್ಮ ಚರ್ಮವು ಯಾವಾಗಲೂ ಆರೋಗ್ಯಕರವಾಗಿರುತ್ತದೆ.

- ಹಾಲಿನಲ್ಲಿ ಬೆಲ್ಲ ಹಾಕಿ ಕುಡಿಯುವುದರಿಂದ, ಶರೀರದಲ್ಲಿ ಉಂಟಾಗುವ ಹಲವು ನೋವನ್ನು ನಿವಾರಿಸಬಹುದು. 

- ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಬೆಚ್ಚಗಿನ ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ.

- ನೀವು ದೈನಂದಿನ ಆಹಾರದಲ್ಲಿ ಹಾಲಿನಲ್ಲಿ ಬೆಲ್ಲ ಮಿಕ್ಸ್ ಮಾಡಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ-ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?

- ವ್ಯಾಯಾಮ, ಕ್ರೀಡೆ ಅಥವಾ ಕೆಲಸದ ಕಾರಣದಿಂದಾಗಿ ದೇಹದಲ್ಲಿ ನೋವು ತಪ್ಪಿಸಲು ಕೂಡ ಈ ಹಾಲು ಸಹಾಯಕ.

- ನಿಮ್ಮ ದೈನಂದಿನ ಆಹಾರದಲ್ಲಿ ಹಾಲಿನಲ್ಲಿ ಅರಿಶಿನ ಬೆಲ್ಲವನ್ನು ಸೇರಿಸಿ ಕುಡಿದರೆ ನೀವು ಕ್ಯಾನ್ಸರ್, ಹೃದ್ರೋಗ, ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಂದ ದೂರ ಇರಬಹುದು.

ಇದನ್ನೂ ಓದಿ-Tulsi :ಅಮೃತ ಸಮಾನ ಈ ತುಳಸಿ ರಸ..! ತಿಳಿಯಿರಿ ಆರೋಗ್ಯಕ್ಕೇನು ಲಾಭ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News