Lemon Water : ಈ ಆರು ಕಾರಣಕ್ಕೆ ನಿಂಬೂಪಾನಿ ಜೊತೆ ದಿನ ಶುರುಮಾಡಬೇಡಿ
ಬೇರೆ ಬೇರೆ ಆರೋಗ್ಯ ಕಾರಣಗಳಿಗಾಗಿ ಬಹಳಷ್ಟು ಜನ ಬೆಳಗ್ಗೆ ಎದ್ದ ಕೂಡಲೇ ನಿಂಬುಪಾನಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಮಿತಿ ಮೀರಿದ ಸೇವನೆಯಿಂದ ಲಿಂಬೆ ದೇಹಕ್ಕೆ ಹಾನಿ ಉಂಟು ಮಾಡುತ್ತದೆ.
ಬೆಂಗಳೂರು : ಬೇರೆ ಬೇರೆ ಆರೋಗ್ಯ ಕಾರಣಗಳಿಗಾಗಿ ಬಹಳಷ್ಟು ಜನ ಬೆಳಗ್ಗೆ ಎದ್ದ ಕೂಡಲೇ ನಿಂಬುಪಾನಿ (Lemon Water ) ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ತೂಕ ಇಳಿಸಿಕೊಳ್ಳಲು ಮತ್ತು ದೇಹವು ಟಾಕ್ಸಿನ್ ಮುಕ್ತವಾಗಲು ಬಹಳಷ್ಟು ಜನ ನಿಂಬೂಪಾನಿ ಕುಡಿದು ದಿನ ಆರಂಭಿಸುತ್ತಾರೆ. ಲಿಂಬೆಯಲ್ಲಿ ಸಾಕಷ್ಟು ಆರೋಗ್ಯದಾಯಕ ಅಂಶಗಳಿವೆ. ಗೊತ್ತಿರಲಿ, ಲಿಂಬೆಯಲ್ಲಿ ಆಮ್ಲೀಯ (Acidic) ಅಂಶ ಅಂದರೆ ಆಸಿಡಿಕ್ ಅಂಶ ಕೂಡಾ ಅಷ್ಟೇ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಮಿತಿ ಮೀರಿದ ಸೇವನೆಯಿಂದ ಲಿಂಬೆ ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಅತಿಯಾದ ಲಿಂಬೆಹಣ್ಣಿನ ಬಳಕೆಯ ಅಡ್ಡಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ.
1. ಹಲ್ಲುಗಳಿಗೆ ಹಾನಿ :
ಲಿಂಬೆ ಹಣ್ಣಿನಲ್ಲಿ (Lemon) ಆಮ್ಲೀಯ ಅಂಶ ಹೆಚ್ಚಾಗಿರುತ್ತದೆ. ಅತಿಯಾಗಿ ಸೇವಿಸಿದರೆ, ಈ ಆಮ್ಲಗಳು ಹಲ್ಲಿಗೆ ಹಾನಿ ಉಂಟು ಮಾಡುತ್ತದೆ. ಜೊತೆಗೆ ಹಲ್ಲಿನಲ್ಲಿಸೆನ್ಸಿಟಿವಿಟಿ (Sensitivity) ಉಂಟುಮಾಡುತ್ತದೆ. ಸಾಧ್ಯವಾದಷ್ಟು ನಿಂಬೂಪಾನಿಯನ್ನು ಸ್ಟ್ರಾ ಮೂಲಕ ಕುಡಿಯಿರಿ. ಆಗ ಅದು ಹಲ್ಲನ್ನು ಮುಟ್ಟುವ ಸಾಧ್ಯತೆ ಕಡಿಮೆ ಇರುತ್ತದೆ. ಜೊತೆಗೆ ನಿಂಬುಪಾನಿ ಕುಡಿದಾಕ್ಷಣ ಬ್ರಶ್ (Brush) ಮಾಡಬೇಡಿ. ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ.
ಇದನ್ನೂ ಓದಿ : Anxiety disorder : ಚಿಂತೆ ಏತಕೊ ಮನದ ಭ್ರಾಂತಿ ಏತಕೋ..! ಆಂಕ್ಸಾಯಿಟಿ ಡಿಸಾರ್ಡರನ್ನ ಕಡೆಗಣಿಸಬೇಡಿ.!
2. ಎದೆಯುರಿ ಹೆಚ್ಚಾಗಬಹುದು.!
ಲಿಂಬೆಹಣ್ಣಿನ ಅತಿಯಾದ ಬಳಕೆಯಿಂದ ಎದೆಯುರಿ (Heart Burning) ಹೆಚ್ಚಾಗಬಹುದು. ಎದೆಯುರಿ ಸಮಸ್ಯೆ ಇರುವವರು ಲಿಂಬೆಯಿಂದ ದೂರ ಇರುವುದು ಉತ್ತಮ. ಹೊಟ್ಟೆಯಲ್ಲಿ ಸ್ರವಿಸುವ ಆಮ್ಲಗಳ ಕಾರಣದಿಂದ ಜಠರದಲ್ಲಿ ಆಹಾರ ಜೀರ್ಣವಾಗುತ್ತದೆ. ಕೆಲವೊಮ್ಮೆ ಈ ಆಮ್ಲಗಳು ಅನ್ನನಾಳದ ಮೂಲಕ ಹೊರಗೆ ರಿಫ್ಲೆಕ್ಸ್ (Reflux) ಆಗುತ್ತದೆ. ಇದು ಎದೆಯುರಿಗೆ ಕಾರಣವಾಗುತ್ತದೆ. ಎದೆಯುರಿ ಸಮಸ್ಯೆ ಇರುವವರು ಲಿಂಬೆಯಿಂದ ದೂರವಿರಬೇಕು.
3. ಬಾಯಿಯಲ್ಲಿ ಗುಳ್ಳೆ :
ಸಾಮಾನ್ಯವಾಗಿ ಎಲ್ಲರಿಗೂ ಬಾಯಿಯಲ್ಲಿ ಗುಳ್ಳೆ ಸಮಸ್ಯೆಯ ಅರಿವಿದೆ. ಮೌತ್ ಅಲ್ಸರ್ (Mouth Ulcer) ಅಂತಲೂ ಇದನ್ನು ಕರೆಯುತ್ತಾರೆ. ಬಾಯಿಯಲ್ಲಿ ಗುಳ್ಳೆ ಇದ್ದಾಗ ಲಿಂಬೂ ಹಣ್ಣು ಸೇವನೆ ಮಾಡಿದರೆ, ಮೌತ್ ಅಲ್ಸರ್ ಪ್ರಮಾಣ ಹೆಚ್ಚಾಗುತ್ತದೆ.
ಇದನ್ನೂ ಓದಿ : ಒಸಡುಗಳ ರಕ್ತಸ್ರಾವ ಸಮಸ್ಯೆ ನಿವಾರಣೆಗೆ Vitamin C ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ
4. ಡಿಹೈಡ್ರೇಶನ್ ಉಂಟಾಗುತ್ತದೆ :
ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ಕಿಡ್ನಿಯಲ್ಲಿ ಮೂತ್ರ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಶರೀರದಲ್ಲಿರುವ ಹೆಚ್ಚುವರಿ ಉಪ್ಪಿನಾಂಶ ಹೊರಹೋಗುತ್ತದೆ. ಹಾಗಾಗಿ, ನೀವು ಪದೇ ಪದೇ ಮೂತ್ರ ಮಾಡಬೇಕಾಗುತ್ತದೆ. ಹೀಗಾದಾಗ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ. ಡಿಹೈಡ್ರೇಶನ್ (Dehydration) ಉಂಟಾಗುತ್ತದೆ.
5. ಮೈಗ್ರೇನ್ ಸಮಸ್ಯೆ :
ಮೈಗ್ರೇನ್ ಸಮಸ್ಯೆ ಇರುವವರು ಲಿಂಬೆಯಿಂದ ದೂರ ಇದ್ದಷ್ಟು ಉತ್ತಮ. ಯಾಕೆಂದರೆ, ಲಿಂಬೆಯಂತ ಹುಳಿ ವಸ್ತು ಮೈಗ್ರೇನ್ (Migraine) ತಲೆನೋವಿಗೆ ಕಾರಣವಾಗುತ್ತದೆ. ಹಲವು ಅಧ್ಯಯನಗಳಲ್ಲಿ ಇದು ದೃಢಪಟ್ಟಿದೆ.
ಇದನ್ನೂ ಓದಿ : Tips for Dal : ದಾಲ್ ಪ್ರಿಯರಿಗೆ ಕೆಲವು ಟಿಪ್ಸ್.! ಡಿನ್ನರ್ ಗೆ `ದಾಲ್' ತಿಂದರೆ ಸಮಸ್ಯೆಯಾಗುತ್ತಾ..?
6. ಮೂಳೆಗಳು ದುರ್ಬಲಗೊಳ್ಳುತ್ತವೆ :
ಲಿಂಬೆ ರಸದಲ್ಲಿ ಸಾಕಷ್ಟು ಆಮ್ಲೀಯ ಅಂಶಗಳಿರುತ್ತವೆ. ಇದರಿಂದ ಮೂಳೆಯಲ್ಲಿರುವ (bone) ಎಣ್ಣೆಯ ಅಂಶಗಳು ಕಡಿಮೆಯಾಗಿ ಮೂಳೆ ಸವೆತಕ್ಕೆ ಕಾರಣವಾಗುತ್ತದೆ. ಇದರಿಂದ ಕೀಲು ನೋವು, ಮೂಳೆ ಸವೆತ ಮುಂತಾದ ಕಾಯಿಲೆಗಳು ಉಂಟಾಗುತ್ತವೆ.
ಲಿಂಬೆ ಸೇವನೆ ಪ್ರಮಾಣ ಎಷ್ಟಿರಬೇಕು.?
ಲಿಂಬೆಯಿಂದ ಆರೋಗ್ಯಕ್ಕೆ ಎಷ್ಟು ಲಾಭ ಇದೆಯೋ, ಕೆಲವೊಂದು ಪ್ರಮಾಣದ ಹಾನಿ ಕೂಡಾ ಇದೆ. ಹಾಗಾಗಿ ಲಿಂಬೆ ಸೇವನೆ ಅತಿಯಾಗಬಾರದು. ಲಭ್ಯ ಸಂಶೋಧನೆಗಳ ಆಧಾರದ ಮೇಲೆ ಸರಳವಾಗಿ ಹೇಳುವುದಾದರೆ, ಅದು ನಿಂಬು ಪಾನಿ ಇರಲಿ, ಕಚ್ಚಾ ಲಿಂಬೆ ರಸ ಇರಲಿ, ಲಿಂಬೆ ಉಪ್ಪಿನಕಾಯಿಯೇ ಆಗಿರಲಿ, 24 ಗಂಟೆಗಳ ಅವಧಿಯಲ್ಲಿ 2ಕ್ಕಿಂತ ಹೆಚ್ಚು ನಿಂಬೆ ನಾವು ತಿನ್ನಬಾರದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.