ನವದೆಹಲಿ: Medicine For Covid-19 Treatment - ಕೋವಿಡ್ -19 ಸಕಾರಾತ್ಮಕ ರೋಗಿಗಳಿಗೆ ಚಿಕಿತ್ಸೆ ನೀಡಲು ಭಾರತದಲ್ಲಿ ಬ್ಯಾರಿಸಿಟಿನಿಬ್ (Baricitinib) ಮಾತ್ರೆಗಳ ತುರ್ತು ಬಳಕೆಗೆ ಅನುಮತಿ ದೊರೆತಿದೆ ಎಂದು ಔಷಧ ತಯಾರಕ ಕಂಪನಿ  Natco Pharma ಸೋಮವಾರ ತಿಳಿಸಿದೆ. ಕಂಪನಿಯ ಪ್ರಕಾರ, ಇದನ್ನು ಭಾರತದಲ್ಲಿ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದಿಸಿದೆ. CDSCO ಭಾರತದಲ್ಲಿ ಔಷಧಿಗಳಿಗೆ ಅನುಮತಿ, ಕ್ಲಿನಿಕಲ್ ಟ್ರಯಲ್ ನಡೆಸಲು, ಔಷಧಿಗೆ ಮಾನದಂಡಗಳನ್ನು ನಿರ್ಧರಿಸುವ, ದೇಶದಲ್ಲಿ ಆಮದು ಮಾಡಲಾಗಿರುವ ಔಷಧಿಗಳ ಗುಣಮಟ್ಟ ನಿಯಂತ್ರಣ ಹಾಗೂ ರಾಜ್ಯ ಮಟ್ಟದಲ್ಲಿನ  ಡ್ರಗ್ ಕಂಟ್ರೋಲರ್ ಆರ್ಗನೈಜೆಶನ್ ಗಳ ಮಧ್ಯೆ ಸಮನ್ವಯ ಸಾಧಿಸುವ ಪ್ರಮುಖ ಸಂಸ್ಥೆಯಾಗಿದೆ.


COMMERCIAL BREAK
SCROLL TO CONTINUE READING

CDSCO ನೀಡಿದೆ ಈ ಅನುಮತಿ
ಈ ಕುರಿತು ರೆಗ್ಯುಲೆಟರಿ ಫೈಲಿಂಗ್ ಮಾಡಿರುವ ಕಂಪನಿ, 'Natco Pharma Limited ಕಂಪನಿಗೆ ತನ್ನ ಔಷಧಿಯ ತುರ್ತು ಬಳಕೆಗೆ ಅನುಮತಿ ದೊರೆತಿದೆ' ಎಂದಿದೆ. Baricitinib  ಮಾತ್ರೆಗಳ 1mg, 2mg ಹಾಗೂ 4mg ಮಾತ್ರೆಗಳಿಗೆ ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್  ಆರ್ಗನೈಜೇಷನ್ (CDSCO) ಅನುಮತಿ ನೀಡಿದೆ ಎಂದು ಕಂಪನಿ ಹೇಳಿದೆ. Baricitinib ಮಾತ್ರೆಗಳನ್ನು Remdesivir ಜೊತೆ ಸೇರಿ ಕೊವಿಡ್-19 ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ- Corona: Paracetamol ಸೇರಿದಂತೆ ಈ ಅತ್ಯಾವಶ್ಯಕ ಔಷಧಿಗಳ ಬೆಲೆ ಏರಿಕೆ ಸಾಧ್ಯತೆ, ಕಾರಣ ಇಲ್ಲಿದೆ


'ತುರ್ತು ಪರಿಸ್ಥಿತಿಯ ಬಳಕೆಯ ಆಧಾರದ ಮೇಲೆ ಮತ್ತು ಭಾರತ ದೇಶಾದ್ಯಂತ ಸಾಂಕ್ರಾಮಿಕ ರೋಗದಿಂದ ಉಂಟಾಗುವ ತೀವ್ರವಾದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಡ್ಡಾಯ ಪರವಾನಗಿ ಕೋರುವುದಾಗಿ ಕಂಪನಿ ಹೇಳಿದೆ. ಈ ವಾರ ಉತ್ಪನ್ನವನ್ನು ಬಿಡುಗಡೆ ಮಾಡಲು ಕಂಪನಿಯು ಸಿದ್ಧವಾಗಿದೆ, ಇದರಿಂದಾಗಿ ಇದು ದೇಶಾದ್ಯಂತ ಬಳಲುತ್ತಿರುವ ರೋಗಿಗಳಿಗೆ ಲಭ್ಯವಾಗಲಿದೆ'  ಎಂದು ಕಂಪನಿ ಹೇಳಿದೆ. ಕಂಪನಿಯ ಈ ಘೋಷಣೆಯಿಂದ Natco Pharma ಷೇರುಗಳು BSEಯಲ್ಲಿ ಪ್ರತಿ ಷೇರಿಗೆ ಶೇ 3.35 ರಷ್ಟು ಏರಿಕೆ ಕಂಡು 926.70 ರೂ.ಗಳಲ್ಲಿ ತನ್ನ ವಹಿವಾಟು ನಡೆಸಿವೆ.


ಇದನ್ನೂ ಓದಿ- Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ ಈ ಆಯುರ್ವೇದ ಔಷಧಿ!


ಇನ್ನೊಂದೆಡೆ ವಿಶ್ವದಲ್ಲಿಯೇ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿರುವ ಕಂಪನಿಗಳಲ್ಲಿ ಶಾಮೀಲಾಗಿರುವ  ಫೈಜರ್ (Pfizer) ಕಂಪನಿ ಕೂಡ ಭಾರತದಲ್ಲಿ ತನ್ನ ವ್ಯಾಕ್ಸಿನ್ ಗೆ ಶೀಘ್ರದಲ್ಲಿಯೇ ಅನುಮತಿ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೇರಿಕಾ ಮೂಲದ ಕಂಪನಿ, ಭಾರತದಲ್ಲಿ ತನ್ನ ಕಂಪನಿಯ ವ್ಯಾಕ್ಸಿನ್ ಗೆ ಅತೀ ಶೀಘ್ರದಲ್ಲಿ ಅನುಮತಿ ಪಡೆಯಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದೆ. ಇದೇ ವೇಳೆ ಭಾರತದಲ್ಲಿ ಕೊರೊನಾ ವಿಸ್ಫೋಟದ ಮೇಲೆ ನಿಯಂತ್ರಣ ಸಾಧಿಸಲು ತನ್ನ ಕಂಪನಿಯ ವತಿಯಿಂದ 7 ಕೋಟಿ ಡಾಲರ್ ಅಂದರೆ ಸುಮಾರು 510 ಕೋಟಿ ರೂ.ಗೂ ಅಧಿಕ ಮೌಲ್ಯದ ಔಷಧಿಯನ್ನು ಉಚಿತವಾಗಿ ಕಳುಹಿಸುತ್ತಿದೆ ಎಂದು ಕಂಪನಿ ಘೋಷಿಸಿದೆ.


ಇದನ್ನೂ ಓದಿ- CT-Scan To Detect Corona Is Dangerous - 'ಕೊರೊನಾ ವೈರಸ್ ಪತ್ತೆಗಾಗಿ CT-Scan ನಡೆಸುವುದು ತುಂಬಾ ಅಪಾಯಕಾರಿ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.