Serum ಬಳಿಕ ಇದೀಗ ತನ್ನ Coronavirus Vaccine ಬೆಲೆ ಘೋಷಿಸಿದ Moderna
ಕೊರೋನವೈರಸ್ ಸೋಂಕಿನ ವಿರುದ್ಧ ತನ್ನ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮಾಡರ್ನಾ ಕಂಪನಿ ಹೇಳಿಕೊಂಡಿದೆ. ಕರೋನಾ ವಿರುದ್ಧದ ಈ ಲಸಿಕೆ ಶೇಕಡಾ 94.5 ರಷ್ಟು ಸಕಾರಾತ್ಮಕ ಪರಿಣಾಮವನ್ನು ತೋರಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ನ್ಯೂಯಾರ್ಕ್: ಅಮೇರಿಕಾ (USA) ನ ಮಾಡರ್ನಾ (Moderna) ಕಂಪನಿ ತನ್ನ ಕೋವಿಡ್ -19 ಲಸಿಕೆಯ (Coronavirus Vaccine) ಬೆಲೆಯನ್ನು ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿಯು ತಮ್ಮ ಕರೋನಾ ಲಸಿಕೆ ಹಾಕಿಸಿಕೊಳ್ಳಲು ಎಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಮತ್ತು ಸರ್ಕಾರಗಳಿಂದ ಅದು ಎಷ್ಟು ಹಣವನ್ನು ಪಡೆಯಲಿದೆ ಎಂಬುದನ್ನು ಮಾಡರ್ನಾ ಹೇಳಿದೆ.
ಇದನ್ನು ಓದಿ- Corona Vaccine Plan: ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು, Covin ಆಪ್ ನೀಡಲಿದೆ ಮಾಹಿತಿ
ಮಾಡರ್ನಾ ಸಿಇಒ ಸ್ಟೀಫನ್ ಬಾನ್ಸೆಲ್, ಮಾಡರ್ನಾ ತನ್ನ ಕೊರೊನಾವೈರಸ್ ಲಸಿಕೆ (Vaccine)ಗಾಗಿ ಸರ್ಕಾರದಿಂದ $ 25 ರಿಂದ $ 37 ವರೆಗೆ ಹಣ ಪಡೆಯಲಿದೆ ಎಂದು ಹೇಳಿದ್ದಾರೆ. ಇದಲ್ಲದೆ ಲಸಿಕೆಯ ಆರ್ಡರ್ ಗಾತ್ರದ ಮೇಲೆ ಅದರ ಬೆಲೆ ಹೆಚ್ಚು ಅಥವಾ ಕಂಮಿಯಾಗಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ
ಇದರರ್ಥ ಮಾಡರ್ನಾ ವ್ಯಾಕ್ಸಿನ್ ನ ಒಂದು ಡೋಸ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 1800 ರಿಂದ 2700 ರವರೆಗೆ ಇರಲಿದೆ.
ಇದನ್ನು ಓದಿ- ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024 ರವರೆಗೆ ಕಾಯಬೇಕಂತೆ...!
ಭರವಸೆ ವ್ಯಕ್ತಪಡಿಸಿರುವ ಮಾಡರ್ನಾ
ಇದಕ್ಕೂ ಮೊದಲು ತನ್ನ ಕಂಪನಿಯಲ್ಲಿ ತಯಾರಾಗಿರುವ ವ್ಯಾಕ್ಸಿನ್ ಕುರಿತು ಭರವಸೆ ವ್ಯಕ್ತಪಡಿಸಿದ್ದ ಮಾಡರ್ನಾ, ತನ್ನ ವ್ಯಾಕ್ಸಿನ್ ಕೊರೊನಾ ಸೋಂಕಿನ ವಿರುದ್ಧ ತುಂಬಾ ಪ್ರಭಾವಶಾಲಿಯಾಗಿದೆ ಎಂದು ಹೇಳಿತ್ತು. ಅಷ್ಟೇ ಅಲ್ಲ ಕೊರೊನಾ ವಿರುದ್ಧ ಹೋರಾಡಲು ತಮ್ಮ ಲಸಿಕೆ ಶೇ.94.5ರಷ್ಟು ಸಕಾರಾತ್ಮಕ ಪರಿಣಾಮಗಳನ್ನು ತೋರಿಸುತ್ತಿದೆ ಎಂಬ ಭರವಸೆ ಕೂಡ ವ್ಯಕ್ತಪಡಿಸಿತ್ತು. ಕಂಪನಿಯ ಈ ಭರವಸೆಯ ಹಿನ್ನೆಲೆ ವಿಶ್ವಾದ್ಯಂತ ಇರುವ ದೇಶಗಳಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸುವಲ್ಲಿ ಹೊಸ ವಿಶ್ವಾಸ ಮೂಡಿಸಿದೆ.