Most Common Exercise Mistakes: ಪ್ರತಿದಿನ ವ್ಯಾಯಾಮ ಮಾಡುವಾಗ ಈ ರೀತಿಯ ತಪ್ಪುಗಳಾಗದಂತೆ ನಿಗಾವಹಿಸಿ
Most Common Exercise Mistakes: ನಿತ್ಯ ವ್ಯಾಯಾಮ ಮಾಡುವ ಸಮಯದಲ್ಲಿ ಜನರು ಆಗಾಗ್ಗೆ ಮಾಡುವ ತಪ್ಪುಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ಬೆಂಗಳೂರು: Most Common Exercise Mistakes- ಉತ್ತಮ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮವು ನಮಗೆ ಸದೃಢವಾಗಿರಲು ಸಹಾಯ ಮಾಡುತ್ತದೆ. ಫಿಟ್ ಆಗಿರಲು, ಒಳಾಂಗಣದಲ್ಲಿ ಸಹ ವ್ಯಾಯಾಮ ಮಾಡಬಹುದು ಎಂಬುದನ್ನು ಕಾಣದ ಕರೋನಾ ಕಲಿಸಿದೆ. ವ್ಯಾಯಾಮ (Exercise) ಮಾಡಲು ಮನೆಯಿಂದ ಹೊರಗೆ ಹೋಗುವುದು ಅನಿವಾರ್ಯವಲ್ಲ ಎಂಬುದು ಪ್ರಸ್ತುತ ಪರಿಸ್ಥಿತಿಯಿಂದ ನಾವು ಕಲಿತಿದ್ದೇವೆ.
ಕರೋನಾ (Coronavirus) ಆರಂಭವಾದಾಗಿನಿಂದ ಎಲ್ಲರ ಜೀವನ ಬದಲಾಗಿದೆ. ಅನೇಕ ಜನರು ತಮ್ಮನ್ನು ತಾವು ಸದೃಢವಾಗಿಡಲು ಮನೆಯಲ್ಲಿಯೇ ವ್ಯಾಯಾಮ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ವ್ಯಾಯಾಮ ಮಾಡುವ ಸಮಯದಲ್ಲಿ ಬಹುತೇಕ ಮಂದಿ ಆಗಾಗ್ಗೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ವ್ಯಾಯಾಮದಿಂದ ಸಿಗಬೇಕಾದ ಸೂಕ್ತ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ವ್ಯಾಯಾಮದ ವೇಳೆ ಸಾಮಾನ್ಯವಾಗಿ ಮಾಡುವ ಈ ತಪ್ಪುಗಳ ಬಗ್ಗೆ ನಿಗಾವಹಿಸುವುದು ಮತ್ತು ಆ ತಪ್ಪುಗಳನ್ನು ಮರುಕಳಿಸದೇ ಇರುವುದು ಬಹಳ ಮುಖ್ಯ.
ಇದನ್ನೂ ಓದಿ- Jaggery and Gram Benefits : ದಿನ ಬೆಲ್ಲ ಮತ್ತು ಕಡಲೆ ಎರಡು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು!
- ಯಾವುದೇ ವ್ಯಾಯಾಮ (Exercise) ಮಾಡುವ ಮೊದಲು ಅದರ ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹಾಗೆಯೇ ನಿಮ್ಮ ದೇಹದ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯ. ಅಂದರೆ ನೀವು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬ ಬಗ್ಗೆ ಗೊತ್ತಿರಲಿ. ನಿಮ್ಮ ದೇಹದ ಯಾವುದೇ ಭಾಗದಲ್ಲಿ ಸಮಸ್ಯೆ ಇದ್ದರೆ, ನೀವು ಕೆಲಸ ಮಾಡುವಾಗ ಆ ಭಾಗಕ್ಕೆ ಹೆಚ್ಚಿನ ತೂಕವನ್ನು ಬಿಡಬಾರದು ಎಂಬುದನ್ನು ನೆನಪಿನಲ್ಲಿಡಿ.
- ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ, ಆದರೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ ವ್ಯಾಯಾಮ ಮಾಡಬಾರದು. ದೇಹವು ತಾಲೀಮು ಮಾಡುವ ಶಕ್ತಿಯನ್ನು ಹೊಂದಲು ನೀವು ವ್ಯಾಯಾಮ ಮಾಡುವ ಒಂದು ಗಂಟೆ ಮೊದಲು ಲಘುವಾಗಿ ಏನನ್ನಾದರೂ ಸೇವಿಸಬೇಕು.
ಇದನ್ನೂ ಓದಿ - ಊಟ ಮಾಡಿದ ಕೂಡಲೇ ನೀವು ಮಾಡುತ್ತೀರಾ ಈ ತಪ್ಪು ? ಹಾಗಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ
- ವ್ಯಾಯಾಮ ಮಾಡುವವರಿಗೆ ವಿಶ್ರಾಂತಿ ಕೂಡ ಮುಖ್ಯ. ಇದಕ್ಕಾಗಿ ಸಾಕಷ್ಟು ನಿದ್ರೆ (Sleep) ಅವಶ್ಯಕತೆ ಇದೆ. ಏಕೆಂದರೆ ನಿದ್ದೆ ಮಾಡುವಾಗ ದೇಹದ ಸ್ನಾಯುಗಳು ತಮ್ಮನ್ನು ತಾವೇ ಸರಿಪಡಿಸಿಕೊಳ್ಳುತ್ತವೆ. ಈ ಕಾರಣದಿಂದಾಗಿ ನೀವು ದಿನವಿಡೀ ಒತ್ತಡ ಮುಕ್ತರಾಗಿರುತ್ತೀರಿ.
- ಕೆಲವರು ನಿತ್ಯ ತಪ್ಪದೇ ಜಿಮ್ ಅಥವಾ ವ್ಯಾಯಾಮ ಮಾಡಿದ ನಂತರವೂ ತಾವು ಬಯಸಿದ ಫಲಿತಾಂಶವನ್ನು ಪಡೆಯುವುದಿಲ್ಲ. ಇದಕ್ಕೆ ಅವರ ಆಹಾರ ಪದ್ಧತಿಯು ಪ್ರಮುಖ ಕಾರಣವಾಗಿದೆ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳದಿರುವುದು ಮತ್ತು ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ನೀವು ಬಯಸಿದ ಫಲಿತಾಂಶ ಸಿಗದೇ ಇರಬಹುದು. ಹಾಗಾಗಿ ವ್ಯಾಯಾಮ ಮಾಡುವುದರ ಜೊತೆಗೆ ನಿಮ್ಮ ಆಹಾರದ ಮೇಲೂ ನಿಗಾವಹಿಸುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ