ನವದೆಹಲಿ : Mango Peel For Healthy Skin : ಹಣ್ಣುಗಳ ರಾಜ ಮಾವು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಮಾವಿನ ಹಣ್ಣನ್ನು ತಿನ್ನದವರು ಇಷ್ಟ ಪಡದವರು ಯಾರೂ ಇರಲಿಕ್ಕಿಲ್ಲ. ಆದರೆ, ಮಾವಿನಹಣ್ಣನ್ನು ತಿಂದು ಜನ ಸಿಪ್ಪೆಯನ್ನು ಎಸೆಯುತ್ತಾರೆ. ಮಾವಿನಹಣ್ಣಿನ ಸಿಪ್ಪೆಯನ್ನು ಎಸೆಯುವ ಮುನ್ನ ಸ್ವಲ್ಪ ಯೋಚಿಸಿ. ಯಾಕೆಂದರೆ ಮಾವಿನ ಹಣ್ಣಿನ ಸಿಪ್ಪೆ, ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ (Mango peel benefits for skin). ಇದರಲ್ಲಿ ವಿಟಮಿನ್-ಎ, ವಿಟಮಿನ್-ಸಿ ಜೊತೆಗೆ ಕಾಪರ್ , ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮುಂತಾದ ಸತ್ವಗಳು ಕಂಡು ಬರುತ್ತವೆ. ತ್ವಚೆಯ ಟ್ಯಾನಿಂಗ್ ಮತ್ತು ಬ್ಲ್ಯಾಕ್ ಹೆಡ್ಫ್ ಗಳನ್ನು ಹೋಗಲಾಡಿಸಲು ಮಾವಿನ ಹಣ್ಣಿನ ಸಿಪ್ಪೆಗಳನ್ನು ಬಳಸಬಹುದು. ಮಾವಿನ ಹಣ್ಣಿನ ಸಿಪ್ಪೆಯಿಂದ ಫೇಸ್ ಪ್ಯಾಕ್ (mango peel face pack) ಮತ್ತು ಸ್ಕ್ರಬ್ ತಯಾರಿಸಿ ಬಳಸುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಬಹುದು.
ಮಾವಿನಹಣ್ಣಿನ ಸಿಪ್ಪೆಯ ಫೇಸ್ ಸ್ಕ್ರಬ್ :
1. ಫೇಸ್ ಸ್ಕ್ರಬ್ (Face scrub) ತಯಾರಿಸಲು ಮಾವಿನ ಸಿಪ್ಪೆಯನ್ನು ಮಿಕ್ಸರ್ ನಲ್ಲಿ ಪುಡಿಮಾಡಿ ಅದನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ.
2. ಈ ಪುಡಿಗೆ ಒಂದು ಚಮಚ ಹಾಲಿನ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು (honey) ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ.
3. ಈಗ ಈ ಮಿಶ್ರಣವನ್ನು ಸರ್ಕ್ಯುಲರ್ ಮೋಶನ್ ನಲ್ಲಿ ಮುಖಕ್ಕೆ ಹಚ್ಚಿ.
4. ಹಚ್ಚಿದ ನಂತರ ನಿಮ್ಮ ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಿ. ಈ ಸ್ಕ್ರಬ್ ಮುಖದಿಂದ ಡೆಡ್ ಸೆಲ್ ಗಳನ್ನು ಬ್ಲ್ಯಾಕ್‌ಹೆಡ್‌ಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ : Ayurvedic Health Tips : ಈ 6 ಸರಳ ಆಯುರ್ವೇದ ಆಚರಣೆಗಳ ಮೂಲಕ ನೀವು ದಿನ ಆರಂಭಿಸಿ ಸಂತೋಷವಾಗಿರಿ!
ಮಾವಿನ ಸಿಪ್ಪೆ ಫೇಸ್ ಪ್ಯಾಕ್ :
1. ಮಾವಿನ ಸಿಪ್ಪೆಯ ಫೇಸ್ ಪ್ಯಾಕ್ (Mango peel face pack) ತಯಾರಿಸುವ ಮುನ್ನ ಕೆಲವು ದಿನಗಳವರೆಗೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು. ಈ ಒಣಗಿಸಿದ ಸಿಪ್ಪೆಯಿಂದಲೇ ಪ್ಯಾಕ್ (face pack) ತಯಾರಿಸಬೀಕಾಗಿರುವುದು.
2. ಮಾವಿನಹಣ್ಣಿನ ಸಿಪ್ಪೆ ಚೆನ್ನಾಗಿ ಒಣಗಿದ ನಂತರ ಅದನ್ನು ಮಿಕ್ಸರ್ ನಲ್ಲಿ ಪುಡಿಮಾಡಿ.
3. ಈಗ ಈ ಪುಡಿಗೆ ಮೊಸರು ಅಥವಾ ರೋಸ್ ವಾಟರ್ (Rose water) ಸೇರಿಸಿ.
4. ಈ ಪೇಸ್ಟ್ ಅನ್ನು ಪ್ರತಿದಿನ ಮುಖಕ್ಕೆ ಹಚ್ಚಬೇಕು. ಈ ಪೇಸ್ಟ್ ಚರ್ಮದ ಮೇಲಿನ ಕಪ್ಪು ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಬಳಸುವ ಮುನ್ನ ಎಚ್ಚರವಿರಲಿ , ಈ ವಸ್ತುಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ