ಆಲೋವಿರಾ ಜ್ಯೂಸ್ ಕುಡಿದರೆ ಈ ಎಲ್ಲಾ ರೋಗಗಳಿಂದ ದೂರವಿರಬಹುದು

Benefits Of Drinking Aloe Vera Juice: ಇದು ಚರ್ಮಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಸಹಾಯಕವಾಗಿದೆ. ವಿಶೇಷವಾಗಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Jul 15, 2021, 08:10 PM IST
  • ಅಲೋವೆರಾದಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ
  • ಅಲೋವೆರಾ ರಸವನ್ನು ಸೇವಿಸುವುದರಿಂದ ಅನೇಕ್ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು
  • ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತವೆ.
ಆಲೋವಿರಾ ಜ್ಯೂಸ್ ಕುಡಿದರೆ ಈ ಎಲ್ಲಾ ರೋಗಗಳಿಂದ ದೂರವಿರಬಹುದು   title=
ಅಲೋವೆರಾದಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ (photo zee news)

ನವದೆಹಲಿ : Benefits Of Drinking Aloe Vera Juice: ಅಲೋವೆರಾ ನಮ್ಮ ತ್ವಚೆಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.  ಇದು ಚರ್ಮಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಸಹಾಯಕವಾಗಿದೆ. ವಿಶೇಷವಾಗಿ ಇದು ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲೋವೆರಾ ರಸವನ್ನು ನಿತ್ಯ ಸೇವಿಸುತ್ತಾ ಬಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲೋವೆರಾದಲ್ಲಿ ಆಂಟಿ ಇನ್ ಫ್ಲಮೆಟರಿ,  ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿವೆ. ಇದಲ್ಲದೆ, ವಿಟಮಿನ್ ಎ, ಸಿ, ಇ, ಫೋಲಿಕ್ ಆಸಿಡ್, ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ. 

ಅಲೋ ವೆರಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು: 
 1. ರೋಗನಿರೋಧಕ ಶಕ್ತಿ: ಅಲೋವೆರಾ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ (immunity) ಹೆಚ್ಚುತ್ತದೆ.  ರೋಗನಿರೋಧಕ ಶಕ್ತಿ ಹೆಚ್ಚಿದರೆ ಅನೇಕ ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ಅಲೋವೆರಾದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು  ಕಂಡುಬರುತ್ತವೆ, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Mango Peel For Healthy Skin: ಟ್ಯಾನಿಂಗ್ , ಬ್ಲಾಕ್ ಹೆಡ್ಸ್ ಸಮಸ್ಯೆಯಿಂದ ಮುಕ್ತಿ ನೀಡಲಿದೆ ಮಾವಿನಹಣ್ಣಿನ ಸಿಪ್ಪೆ

2 . ಸಂಧಿವಾತ: ನೀವು ಸಂಧಿವಾತದ ರೋಗಿಯಾಗಿದ್ದರೆ, ಅಲೋವೆರಾ ಜ್ಯೂಸ್ ನಿಮಗೆ ಪ್ರಯೋಜನಕಾರಿಯಾಗಿದೆ. ಅಲೋವೆರಾದಲ್ಲಿ ಆಂಟಿ ಇನ್ ಫ್ಲಮೆಟರಿ,  ಆಂಟಿ ಆಕ್ಸಿಡೆಂಟ್ ಗುಣಗಳಿರುತ್ತವೆ.  ಇದು ಸಂಧಿವಾತದ ನೋವಿನಿಂದ ನಿವಾರಣೆ ನೀಡುತ್ತದೆ. 

3. ತೂಕ ನಷ್ಟ: ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುವವರು ತೂಕವನ್ನು ಕಡಿಮೆ (Weight loss) ಮಾಡಲು  ಅಲೋವೆರಾ ರಸವನ್ನು ಸೇವಿಸಬಹುದು. ಅಲೋವೆರಾದಲ್ಲಿರುವ ಸ್ಥೂಲಕಾಯ ವಿರೋಧಿ ಗುಣಲಕ್ಷಣಗಳು ಬೊಜ್ಜು (fat) ನಿಯಂತ್ರಿಸಲು ಸಹಾಯ ಮಾಡುತ್ತದೆ. 

5.ಮಲಬದ್ಧತೆ: ಅಲೋವೆರಾದಲ್ಲಿ ಲೈಕ್ಸೆಟಿವ್  ಗುಣಗಳಿದ್ದು ಹೊಟ್ಟೆಯನ್ನು ಸ್ವಚ್ಛ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆಯ (Constipation) ಸಮಸ್ಯೆಯಿದ್ದರೆ ಅಲೋವೆರಾ ಜ್ಯೂಸ್ ಅನ್ನು ಸೇವಿಸಬಹುದು. 

ಇದನ್ನೂ ಓದಿ : Advantages of Curd : ಆರೋಗ್ಯಕ್ಕೆ ಬಹುಉಪಯೋಗಿ 'ಮೊಸರು' : ಇಲ್ಲಿದೆ ಅದರ ಪ್ರಯೋಜನಗಳು

6.ಮಧುಮೇಹ: ಅಲೋವೆರಾದಲ್ಲಿ ಮಧುಮೇಹ (diabetes) ವಿರೋಧಿ ಗುಣಗಳಿವೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಅಲೋವೆರಾ ಜ್ಯೂಸ್ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News