ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ಪಡೆಯಲು ನೈಸರ್ಗಿಕ ವಿಧಾನಗಳಿವು
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಸಹ ಪ್ರಮುಖ ಅಂಗವಾಗಿದೆ. ನಮ್ಮಲ್ಲಿ ಹಲವರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯ ಕನಿಷ್ಠ 10 ರಿಂದ 12 ಗ್ಲಾಸ್ ನೀರು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಿ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಕಿಡ್ನಿ ಸ್ಟೋನ್ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳು : ಕಿಡ್ನಿ ಸ್ಟೋನ್ ಸಮಸ್ಯೆ ಇರುವ ವ್ಯಕ್ತಿಯು ಆಪರೇಷನ್ ಇಲ್ಲದೆಯೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಕೆಲವು ಮನೆಮದ್ದುಗಳು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ನೀಡುತ್ತವೆ. ಈ ಲೇಖನದಲ್ಲಿ ಅಂತಹ ಕೆಲವು ಸಲಹೆಗಳನ್ನು ನೀಡಲಿದ್ದೇವೆ.
ಕಿಡ್ನಿ ಸ್ಟೋನ್ ಇದ್ದರೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಕಿಡ್ನಿ ಸ್ಟೋನ್ ಸಮಸ್ಯೆ ಹೊಂದಿರುವ ವ್ಯಕ್ತಿಯು ದಿನಕ್ಕೆ ಕನಿಷ್ಠ 10 ರಿಂದ 12 ಗ್ಲಾಸ್ ನೀರು ಕುಡಿಯಬೇಕು. ವಾಸ್ತವವಾಗಿ, ಕಲ್ಲುಗಳನ್ನು ರೂಪಿಸುವ ರಾಸಾಯನಿಕಗಳನ್ನು ಕರಗಿಸಲು ನೀರು ಸಹಾಯ ಮಾಡುತ್ತದೆ. ಮಾತ್ರವಲ್ಲ, ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ. ಇದರಿಂದ ಕಲ್ಲು ಕರಗಳು ಸಾಧ್ಯವಾಗುತ್ತದೆ. ನೀರು ಮಾತ್ರವಲ್ಲ, ಕೆಲವು ಆಹಾರ ಪದಾರ್ಥಗಳು ಸಹ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ನೀಡಬಲ್ಲವು.
ಕಿಡ್ನಿ ಸ್ಟೋನ್ ಸಮಸ್ಯೆಯಿರುವವರು ಈ ಆಹಾರ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ತಪ್ಪದೇ ಸೇರಿಸಿ:
ಬಾರ್ಲಿ ನೀರು:
ಬಾರ್ಲಿಯನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ. ಬಾರ್ಲಿ ನೀರಿನಲ್ಲಿ ಕಂಡುಬರುವ ಪೋಷಕಾಂಶಗಳು ಕಲ್ಲುಗಳನ್ನು ತೊಡೆದುಹಾಕಲು ಬಹಳ ಪರಿಣಾಮಕಾರಿ. ಕಿಡ್ನಿ ಸಮಸ್ಯೆ ಇರುವವರು ಇದನ್ನು ಪ್ರತಿದಿನ ಸೇವಿಸಬೇಕು. ಇದಕ್ಕಾಗಿ ಬಾರ್ಲಿಯನ್ನು ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳಿ. ಈ ನೀರನ್ನು ಕುಡಿಯುವುದರಿಂದ ಈ ಸಮಸೆಯಿಂದ ಪರಿಹಾರ ಪಡೆಯಬಹುದು.
ಇದನ್ನೂ ಓದಿ- ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸಲು ಈ ಆಹಾರಗಳನ್ನು ತಪ್ಪದೇ ಸೇವಿಸಿ
ಎಳನೀರು:
ಎಳನೀರು ಸೇವನೆಯಿಂದ ಇನ್ಸುಲಿನ್ ಹೆಚ್ಚಾಗುತ್ತದೆ. ಇದು ಮೂತ್ರದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ. ಎಳನೀರು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.
ಕಲೋಂಜಿ ಅಥವಾ ಕಪ್ಪು ಜೀರಿಗೆ:
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಬೇಕೆಂದರೆ ಕಲೋಂಜಿ ಅಂದರೆ ಕಪ್ಪು ಜೀರಿಗೆಯನ್ನು ಬಳಸಿ. ಇದರ ಸೇವನೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆಯಲ್ಲಿ ಕಪ್ಪು ಜೀರಿಗೆ ಉತ್ತಮ ಔಷಧವಾಗಿದೆ. ಇದನ್ನು ಪ್ರತಿದಿನ ಬೆಳಗ್ಗೆ ಒಂದು ಚಮಚ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ.
ಮೂಲಂಗಿ:
ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಮೂಲಂಗಿ ಸೇವನೆಯು ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಇದಕ್ಕೆ ಮೂಲಂಗಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.
ಕ್ಯಾರೆಟ್ :
ಕ್ಯಾರೆಟ್‌ನಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ, ಇದು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಪ್ರತಿದಿನ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಬಹುದು.
ಇದನ್ನೂ ಓದಿ- ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಪಾನೀಯ
ಬಾಳೆ ಹಣ್ಣು:
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ ಹೇರಳವಾಗಿ ಕಂಡು ಬರುತ್ತದೆ. ಇದು ದೇಹದಲ್ಲಿ ಕಲ್ಲುಗಳ ರಚನೆಯನ್ನು ತಡೆಯುತ್ತದೆ ಮತ್ತು ರೂಪುಗೊಂಡ ಕಲ್ಲನ್ನು ಸಣ್ಣ ತುಂಡುಗಳಾಗಿ ಒಡೆಯಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ರೋಗಿಗಳು ಪ್ರತಿದಿನ 100 ಅಥವಾ 150 ಗ್ರಾಂ ವಿಟಮಿನ್ ಬಿ ಸೇವಿಸಿದರೆ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಸೇಬು:
ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ತೊಡೆದುಹಾಕಲು ಸೇಬು ಸಹ ಉತ್ತಮ ಆಯ್ಕೆಯಾಗಿದೆ. ಪ್ರತಿದಿನ ಒಂದು ಲೋಟ ಸೇಬಿನ ರಸವನ್ನು ಕುಡಿಯುವುದ್ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.