ಬದಲಾದ ಜೀವನ ಶೈಲಿಯಿಂದಾಗಿ ಬಹುತೇಕ ಮಂದಿಯನ್ನು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಸ್ಥೂಲಕಾಯತೆಯೂ ಒಂದು. ನೀವು ಸಹ ಸ್ಥೂಲಕಾಯತೆಯಿಂದ ತೊಂದರೆಗೊಳಗಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ವಾಸ್ತವವಾಗಿ, ಜನರು ತೂಕವನ್ನು ಕಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದರೆ, ತೂಕ ಕಳೆದುಕೊಳ್ಳಲು ವಾಯಾಮದ ಜೊತೆಗೆ ಆಹಾರದ ಬಗ್ಗೆಯೂ ಗಮನ ಹರಿಸುವುದು ಬಹಳ ಮುಖ್ಯ. ನಿಮ್ಮ ನಿತ್ಯದ ಡಯಟ್ನಲ್ಲಿ ಒಂದು ಪಾನೀಯವನ್ನು ಸೇರಿಸುವ ಮೂಲಕ ನೀವು ಸ್ಥೂಲಕಾಯತೆಯಿಂದ ಪರಿಹಾರ ಪಡೆಯಬಹುದು. ಈ ಲೇಖನದಲ್ಲಿ ಅಂತಹ ಒಂದು ಆರೋಗ್ಯಕರ ಪಾನೀಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಿಮ್ಮ ಆಹಾರ ಪದ್ದತಿಯಲ್ಲಿ ಆರೋಗ್ಯಕರ ಡ್ರಿಂಕ್ಸ್ ಸೇರಿಸುವುದರಿಂದ ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ದಿನಕ್ಕೆ ಒಂದು ಚಮಚ ಜೀರಿಗೆ ಬೀಜಗಳನ್ನು ಸೇವಿಸುವುದರಿಂದ ಮೂರು ಪಟ್ಟು ವೇಗವಾಗಿ ಕೊಬ್ಬು ಕಡಿಮೆಯಾಗುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ವಾಸ್ತವಾವಾಗಿ, ಈ ಕುರಿತಂತೆ ನಡೆಸಲಾದ ಸಂಶೋಧನೆಯಲ್ಲಿ ನಿತ್ಯ ಜೀರಿಗೆ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು ಎಂಬ ಅಂಶ ಬಹಿರಂಗಗೊಂಡಿದೆ. ಜೀರಿಗೆಯು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವುದಲ್ಲದೆ, ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರಿಗೆಯನ್ನು ಪ್ರತಿದಿನ ಸೇವಿಸುವುದರಿಂದ ಒಂದು ತಿಂಗಳೊಳಗೆ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ, ಅದನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂದು ತಿಳಿದಿರುವುದು ಬಹಳ ಮುಖ್ಯ.
ಇದನ್ನೂ ಓದಿ- ಕಿತ್ತಳೆ ಸಿಪ್ಪೆಯ 5 ಅದ್ಭುತ ಪ್ರಯೋಜನಗಳು
ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ಜೀರಿಗೆಯನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು?
>> ಮೊದಲು ನೀವು ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಬೇಕು.
>> ರಾತ್ರಿಯಿಡೀ ನೆನೆಸಿದ ನಂತರ, ಬೆಳಿಗ್ಗೆ ಈ ಪಾನೀಯವನ್ನು ಕುದಿಸಿ, ಸೋಸಿ ಚಹಾ ಸೇವಿಸುವಂತೆ ಈ ಪಾನೀಯವನ್ನು ಸೇವಿಸಿ.
>> ಸೋಸಿದ ಜೀರಿಗೆಯನ್ನು ಹಾಗೆ ಸೇವಿಸಿ.
>> ನಿತ್ಯ ಈ ರೀತಿ ಮಾಡುವುದರಿಂದ ದೇಹದಲ್ಲಿ ಇರುವ ಹೆಚ್ಚುವರಿ ಕೊಬ್ಬು ಆರೋಗ್ಯಕರವಾಗಿ ಕರಗುತ್ತದೆ.
ಈ ರೀತಿಯೂ ಜೀರಿಗೆಯನ್ನು ಸೇವಿಸಬಹುದು:
ತ್ವರಿತವಾಗಿ ತೂಕ ಇಳಿಸಲು ಮತ್ತೊಂದು ಉತ್ತಮ ಮಾರ್ಗವೆಂದರೆ ಜೀರಿಗೆಯೊಂದಿಗೆ ಶುಂಠಿ ಮತ್ತು ನಿಂಬೆಯನ್ನು ಬೆರೆಸಿ ಸೇವಿಸುವುದು. ಇದಕ್ಕಾಗಿ ಮೊದಲು ಶುಂಠಿಯನ್ನು ಕತ್ತರಿಸಿ ಮತ್ತು ಕ್ಯಾರೆಟ್ ಜೊತೆಗೆ ಇತರ ತರಕಾರಿಗಳನ್ನು ನೀರಿನೊಂದಿಗೆ ಹಾಕಿ ಕುದಿಸಿ. ಇದಕ್ಕೆ ಜೀರಿಗೆ ಪುಡಿ, ನಿಂಬೆ ರಸವನ್ನು ಮಿಕ್ಸ್ ಮಾಡಿ ಸೂಪ್ ರೀತಿ ಸೇವಿಸಿ. ನಿತ್ಯ ರಾತ್ರಿ ಈ ಪಾನೀಯವನ್ನು ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಪೈಲ್ಸ್ ಸಮಸ್ಯೆಯನ್ನು ಮೂಲದಿಂದ ನಿವಾರಿಸಲು ಮನೆಮದ್ದು
ಮೊಸರಿನೊಂದಿಗೆ ಜೀರಿಗೆ:
ತೂಕವನ್ನು ಕಡಿಮೆ ಮಾಡಲು ನೀವು ಜೀರಿಗೆಯನ್ನು ಮೊಸರಿನೊಂದಿಗೆ ಸಹ ಸೇವಿಸಬಹುದು. ಇದಕ್ಕಾಗಿ ಮೊಸರಿನೊಂದಿಗೆ ಜೀರಿಗೆ ಪುಡಿಯನ್ನು ಬೆರೆಸಿ ತೆಗೆದುಕೊಳ್ಳಬಹುದು. ಪ್ರತಿದಿನ ಹೀಗೆ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿ ಆಗಲಿದೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.