ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸಲು ಈ ಆಹಾರಗಳನ್ನು ತಪ್ಪದೇ ಸೇವಿಸಿ

ಕಬ್ಬಿಣದ ಕೊರತೆಯು ದೇಹದಲ್ಲಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳು ಸಹ ಸಹಕಾರಿ ಆಗಿವೆ.

ಕಬ್ಬಿಣದ ಕೊರತೆಯು ದೇಹದಲ್ಲಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳು ಸಹ ಸಹಕಾರಿ ಆಗಿವೆ. ಕೆಲವು ಆಹಾರಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸುವುದರಿಂದ ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಅಂತಹ ಕೆಲವು ಆಹಾರಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬೀಟ್ರೂಟ್ : ದೇಹದಲ್ಲಿ ಕಬ್ಬಿಣದ ಕೊರತೆಯನ್ನು ತಡೆಗಟ್ಟಲು ಪ್ರತಿದಿನ ಒಂದು ಬೀಟ್ರೂಟ್ ಅನ್ನು ಸೇವಿಸಿ. ಬೀಟ್ರೂಟ್ ಸೇವನೆಯು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ

2 /5

ಪಾಲಕ್ ಸೊಪ್ಪು: ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸಲು ಪಾಲಕ್ ಸೊಪ್ಪನ್ನು ಸೇವಿಸಬೇಕು. ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಖನಿಜ ಲವಣಗಳು, ಕ್ಲೋರಿನ್, ರಂಜಕ ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳು ಇರುವುದರಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸುತ್ತದೆ. 

3 /5

ದಾಳಿಂಬೆ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ದಾಳಿಂಬೆ ತಿಂದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ನಿವಾರಣೆಯಾಗುತ್ತದೆ. ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆಯಂತಹ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.

4 /5

ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಹೇರಳವಾಗಿದ್ದು, ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಐರನ್ ಕೊರತೆಯನ್ನು ಸರಿಪಡಿಸಬಹುದು ಎನ್ನಲಾಗುವುದು.

5 /5

ಹಸಿರು ತರಕಾರಿಗಳು: ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ನಿಮ್ಮ ಡಯಟ್ನಲ್ಲಿ ಹಸಿರು ತರಕಾರಿಗಳನ್ನು ತಪ್ಪದೇ ಸೇರಿಸಿ. ಹಸಿರು ತರಕಾರಿಗಳ ಸೇವನೆಯಿಂದ ಐರನ್ ಕೊರತೆ ಮಾತ್ರವಲ್ಲ ಇತರ ಹಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.