Contact Lens Tips: ಪ್ರಸ್ತುತ ಈ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆಗಳು (Eye Problems) ಸರ್ವೇ ಸಾಮಾನ್ಯ. ಇದರಿಂದ ಪರಿಹಾರಕ್ಕಾಗಿ ಸ್ಪೆಕ್ಸ್ ಧರಿಸಬಹುದು. ಆದರೆ, ಕೆಲವರು ಕನ್ನಡಕ ಎಂದರೆ ಸ್ಪೆಕ್ಸ್ ಧರಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಾರೆ. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ, ಕಾಂಟ್ಯಾಕ್ಟ್ ಲೆನ್ಸ್‌ಗಳು (Contact Lens) ಕನ್ನಡಕಕ್ಕಿಂತ ಕೊಂಚ ದುಬಾರಿ ಆಗಿರುತ್ತವೆ. ಬಜೆಟ್ ದೃಷ್ಟಿಯಿಂದ ಲಘುವಾದ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕೊಂಡರೆ ಅದು ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕೇವಲ ಅಗ್ಗದ ಕಾಂಟ್ಯಾಕ್ಟ್ ಲೆನ್ಸ್‌ ಅಷ್ಟೇ ಅಲ್ಲ, ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ಕೆಲವು ವಿಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದಲೂ ಕೂಡ ಇದು ನಿಮ್ಮ ಕಣ್ಣಿಗೆ ಕುತ್ತು ತರಬಹುದು. ಅಂತಹ ವಿಚಾರಗಳೆಂದರೆ... 


* ದೀರ್ಘ ಸಮಯ ಬಳಕೆ: 
ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ದೀರ್ಘ ಸಮಯದವರೆಗೆ ಧರಿಸುವುದು ನಿಮ್ಮ ದೃಷ್ಟಿ ಯ (Vision) ಮೇಲೆ  ಅಡ್ಡ ಪರಿಣಾಮ ಉಂಟು ಮಾಡಬಹುದು. ಇಲ್ಲವೇ, ಇವು ನೀವು ಶಾಶ್ವತವಾಗಿ ಕನ್ನಡಕ/ ಲೆನ್ಸ್‌ಗಳನ್ನು ಧರಿಸಲು ಕಾರಣವಾಗಬಹುದು. 


ಇದನ್ನೂ ಓದಿ- ನಿತ್ಯ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಕೇವಲ ತಿಂಗಳಲ್ಲಿ ಕನ್ನಡಕ್ಕೆ ಗುಡ್ ಬೈ ಹೇಳಬಹುದು!​


* ಮಲಗುವಾಗ ಲೆನ್ಸ್ ಧರಿಸುವುದು: 
ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿ ಮಲಗುವುದು ಕೂಡ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕಣ್ಣಿನಲ್ಲಿ ಕಿರಿಕಿರಿ, ಕಣ್ಣಿನ ಸೋಂಕಿನಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು. 


* ಸಾಮಾನ್ಯ ನೀರಿನ ಬಳಕೆ: 
ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ವಾಶ್ ಮಾಡಲು ಅಪ್ಪಿತಪ್ಪಿಯೂ ಸಹ ಸಾಮಾನ್ಯ ನೀರನ್ನು ಬಳಸಬೇಡಿ. ಬದಲಿಗೆ ಹೈ ಡ್ರಾಪ್ಸ್, ಇಲ್ಲವೇ ಲೆನ್ಸ್ ವಾಶ್ ಗಾಗಿ ನೀಡಲಾಗುವ ಸೂಕ್ತ ದ್ರಾವಣವನ್ನು ಬಳಸಿ. ಇಲ್ಲವೇ ಇದು ನಿಮ್ಮ ಕಣ್ಣಿನಲ್ಲಿ ಸೋಂಕು ಉಂಟು ಮಾಡಬಹುದು. 


ಇದನ್ನೂ ಓದಿ- ಕೊಬ್ಬರಿ ಎಣ್ಣೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು


* ಶುಚಿತ್ವ: 
ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಲೆನ್ಸ್ ಧರಿಸುವಾಗ/ತೆಗೆಯುವಾಗ ಕೈ ಶುಚಿತ್ವದ ಬಗ್ಗೆ ಕಾಳಜಿ ವಹಿಸಿ. ಕೈ ಶುಚಿಯಾಗಿರದಿದ್ದರೆ ಆ ಕೊಳಕಿನಿಂದ ಸೂಕ್ಷ್ಮ ಜೀವಿಗಳು ಕಣ್ಣನ್ನು ಪ್ರವೇಶಿಸಬಹುದು. 


ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.