ನವದೆಹಲಿ : Drumstick Flower Health Benefits : ನುಗ್ಗೆಕಾಯಿ ಭಾರತದಲ್ಲಿ ಸಾಮಾನ್ಯವಾಗಿ  ಬಳಸುವ ತರಕಾರಿ. ಸಾಮಾನ್ಯವಾಗಿ ನುಗ್ಗೆಕಾಯಿಯನ್ನು ಸಾಂಬಾರ್, ಪಲ್ಯ ಎಂದು ಬಳಸಲಾಗುತ್ತದೆ. ನುಗ್ಗೆ ಸೊಪ್ಪನ್ನು (Drumstick leaves) ಕೂಡಾ ಸಾಂಬಾರ್, ಪಲ್ಯಗಳಲ್ಲಿ ಬಳಸಲಾಗುತ್ತದೆ. ಆದರೆ, ಹೂವುಗಳನ್ನು ಬಳಸುವುದು ಕಡಿಮೆ. ಹಾಗೆ ನೋಡುವುದಾದರೆ ನುಗ್ಗೆಕಾಯಿ, ನುಗ್ಗೆ ಸೊಪ್ಪು ಆರೋಗ್ಯಕ್ಕೆ (Benefits of drumstick leaves) ಎಷ್ಟು ಸಹಕಾರಿಯೋ, ನುಗ್ಗೆ ಹೂವು ಕೂಡಾ ಅಷ್ಟೇ ಸಹಕಾರಿ.  ನುಗ್ಗೆ ಹೂವಿನಲ್ಲಿ  ಪೋಷಕಾಂಶಗಳು ಹೇರಳವಾಗಿ ಇರುತ್ತವೆ. 


COMMERCIAL BREAK
SCROLL TO CONTINUE READING

ನುಗ್ಗೆ ಹೂವಿನ ಆರೋಗ್ಯ ಪ್ರಯೋಜನಗಳಿವು : 
ನುಗ್ಗೆ ಹೂವುಗಳು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇದರ ಹೊರತಾಗಿ, ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಗಳು ಹೇರಳವಾಗಿವೆ. ಇದನ್ನು ಆರೋಗ್ಯಕ್ಕೆ (Health) ಬಹಳ ಉಪಯುಕ್ತವೆಂದು ಪರಿಗಣಿಸಲಾಗಿದೆ. ಡ್ರಮ್ ಸ್ಟಿಕ್ ಹೂಗಳನ್ನು (Drumstick flower) ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. 


ಇದನ್ನೂ ಓದಿ : Tulsi Water Benefits: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಸೇವಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ


ನುಗ್ಗೆ ಹೂವಿನಲ್ಲಿ ಅನೇಕ ರೀತಿಯ ವಿಟಮಿನ್ ಗಳು ಕಂಡು ಬರುತ್ತವೆ. 
ನುಗ್ಗೆಹೂವಿನಿಂದ ದೇಹಕ್ಕೆ ಸಿಗುವ ವಿಟಮಿನ್ ಗಳು ಹೀಗಿವೆ. 
ವಿಟಮಿನ್  ಎ 
ವಿಟಮಿನ್ ಬಿ 1
ವಿಟಮಿನ್ ಬಿ 2 ಅಥವಾ ರಾಯಿಬೋಫ್ಲಾವಿನ್
ವಿಟಮಿನ್ ಬಿ 3 ಅಥವಾ ನಿಯಾಸಿನ್
ವಿಟಮಿನ್ ಬಿ 6
ಫೋಲೇಟ್ ಮತ್ತು ಆಸ್ಕೋರ್ಬಿಕ್ ಆಸಿಡ್ 
ವಿಟಮಿನ್ ಸಿ
ಕ್ಯಾಲ್ಸಿಯಂ
ಪೊಟ್ಯಾಸಿಯಮ್
ಕಬ್ಬಿಣ
ಮೆಗ್ನೀಸಿಯಮ್ ಇವುಗಳು ಹೇರಳವಾಗಿ ಕಂಡು ಬರುತ್ತದೆ.
ಡ್ರಮ್ ಸ್ಟಿಕ್ ಹೂಗಳನ್ನು ಸೇವಿಸುವುದರಿಂದ, ದೇಹವು ಈ ಪ್ರಯೋಜನಗಳನ್ನು ಪಡೆಯುತ್ತದೆ.


ಇದನ್ನೂ ಓದಿ : Weight Loss Tips : ನಿಮ್ಮ 'ತೂಕ ಇಳಿಕೆಗೆ' ಸಹಾಯ ಮಾಡುತ್ತವೆ ಪುದೀನ ಸೇರಿದಂತೆ ಈ ಮೂರು ಗಿಡಮೂಲಿಕೆಗಳು!


ಚರ್ಮಕ್ಕೆ ಪ್ರಯೋಜನಕಾರಿ : 
ನುಗ್ಗೆ ಹೂವುಗಳು ಚರ್ಮಕ್ಕೆ (Skin care) ತುಂಬಾ ಪ್ರಯೋಜನಕಾರಿ. ಹಾಗಾಗಿ ಈ  ಹೂವುಗಳನ್ನು ನಿತ್ಯ ಸೇವಿಸಬೇಕು. ಡ್ರಮ್ ಸ್ಟಿಕ್ ಹೂವುಗಳು ಚರ್ಮದ ಸೋಂಕು ನಿವಾರಣೆಗೆ ಪ್ರಯೋಜನಕಾರಿಯಾಗಿದೆ.  


ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು :
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಡ್ರಮ್ ಸ್ಟಿಕ್ ಹೂವುಗಳು ತುಂಬಾ ಪ್ರಯೋಜನಕಾರಿ. ನುಗ್ಗೆ ಹೂವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ.


ಇದನ್ನೂ ಓದಿ : Castor Oil: ಡಾರ್ಕ್ ಸರ್ಕಲ್ ಸಮಸ್ಯೆಗೆ ತಕ್ಷಣ ಪರಿಹಾರ ನೀಡಲಿದೆ ಈ ಎಣ್ಣೆ


ಮೂಳೆಗಳಿಗೆ ಪ್ರಯೋಜನಕಾರಿ : 
ನುಗ್ಗೆ ಹೂವುಗಳು ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಂಧಿವಾತದ ಸಮಸ್ಯೆ ಇದ್ದರೆ, ಅದರ ಹೂವುಗಳನ್ನು ಸೇವಿಸುವುದು ಬಹಳ ಪ್ರಯೋಜನಕಾರಿ.


ತೂಕವನ್ನು ಕಡಿಮೆ ಮಾಡುತ್ತದೆ : 
ತೂಕವನ್ನು ಕಡಿಮೆ (Weight loss) ಮಾಡಲು ನುಗ್ಗೆ ಹೂವುಗಳ ಸೇವನೆಯು ತುಂಬಾ ಸಹಕಾರಿ.  ಈ ಹೂವುಗಳಲ್ಲಿನ ಕೊಬ್ಬಿನ (Fat) ಪ್ರಮಾಣವು ಒಂಚೂರೂ ಇರುವುದಿಲ್ಲ. ಅಲ್ಲದೆ ಇದರಲ್ಲಿ  ಕ್ಯಾಲೋರಿಗಳು ತುಂಬಾ ಕಡಿಮೆ. ಆದ್ದರಿಂದ ಇದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ