Weight Loss Tips : ನಿಮ್ಮ 'ತೂಕ ಇಳಿಕೆಗೆ' ಸಹಾಯ ಮಾಡುತ್ತವೆ ಪುದೀನ ಸೇರಿದಂತೆ ಈ ಮೂರು ಗಿಡಮೂಲಿಕೆಗಳು!

ಆರೋಗ್ಯಕರ ಮತ್ತು ಶಾಶ್ವತ ತೂಕ ಇಳಿಕೆಗೆ ನೀವು ತಾಳ್ಮೆಯಿಂದ ಇರುವುದು ಭಾಳ ಮುಖ್ಯ. ನೀವು ದೈನಂದಿನ ವ್ಯಾಯಾಮ, ಆರೋಗ್ಯಕರ ಸಮತೋಲಿತ ಆಹಾರ ಸೇವಿಸಬೇಕು. ಆಯುರ್ವೇದದಲ್ಲಿಯೂ ಕೆಲವು ಗಿಡಮೂಲಿಕೆಗಳಿವೆ, ಇದು ನಿಮ್ಮ ತೂಕ ಇಳಿಕೆ ತುಂಬಾ ಸಹಾಯ ಮಾಡುತ್ತವೆ.

Written by - Channabasava A Kashinakunti | Last Updated : Aug 21, 2021, 12:49 PM IST
  • ವೇಗವಾಗಿ ಹೆಚ್ಚುತ್ತಿರುವ ಸ್ಥೂಲಕಾಯದಿಂದ ನೀವು ತೊಂದರೆ
  • ಪುದೀನ ಕೂಡ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
  • ಜಿನ್ಸೆಂಗ್ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ
Weight Loss Tips : ನಿಮ್ಮ 'ತೂಕ ಇಳಿಕೆಗೆ' ಸಹಾಯ ಮಾಡುತ್ತವೆ ಪುದೀನ ಸೇರಿದಂತೆ ಈ ಮೂರು ಗಿಡಮೂಲಿಕೆಗಳು! title=

ವೇಗವಾಗಿ ಹೆಚ್ಚುತ್ತಿರುವ ಸ್ಥೂಲಕಾಯದಿಂದ ನೀವು ತೊಂದರೆಗೊಳಗಾಗಿದ್ದರೆ, ಈ ಸುದ್ದಿಯು ನಿಮ್ಮ ಉಪಯೋಗಕ್ಕೆ ಬರುತ್ತದೆ. ತೂಕ ಇಳಿಸಿಕೊಳ್ಳು ಜನರು ಅನೇಕ ಔಷಧಿಗಳನ್ನು ಬಳಸುತ್ತಾರೆ, ಆದರೆ ತೂಕ ಇಳಿಸಿಕೊಳ್ಳಲು ಆಹಾರದ ಸಮತೋಲನವನ್ನು ಹೊಂದುವುದು ಬಹಳ ಮುಖ್ಯ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ತೂಕ ಇಳಿಸುವುದು ಕೇವಲ ವ್ಯಾಯಾಮ ಮತ್ತು ವಾಕಿಂಗ್ ನಿಂದ ಸಾಧ್ಯವಿಲ್ಲ.

ಖ್ಯಾತ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಆರೋಗ್ಯಕರ ಮತ್ತು ಶಾಶ್ವತ ತೂಕ ಇಳಿಕೆಗೆ(Weight Loss) ನೀವು ತಾಳ್ಮೆಯಿಂದ ಇರುವುದು ಭಾಳ ಮುಖ್ಯ. ನೀವು ದೈನಂದಿನ ವ್ಯಾಯಾಮ, ಆರೋಗ್ಯಕರ ಸಮತೋಲಿತ ಆಹಾರ ಸೇವಿಸಬೇಕು. ಆಯುರ್ವೇದದಲ್ಲಿಯೂ ಕೆಲವು ಗಿಡಮೂಲಿಕೆಗಳಿವೆ, ಇದು ನಿಮ್ಮ ತೂಕ ಇಳಿಕೆ ತುಂಬಾ ಸಹಾಯ ಮಾಡುತ್ತವೆ.

ಇದನ್ನೂ ಓದಿ : Benefits of Black Gram : ಮಧುಮೇಹಿಗಳಿಗೆ ರಾಮಬಾಣ ಕರಿ ಕಡಲೆ ಕಾಳು : ಈ ಸಮಯದಲ್ಲಿ ಸೇವಿಸಿ ಆರೋಗ್ಯ ಪ್ರಯೋಜನ ಪಡೆಯಿರಿ!

ತೂಕ ಇಳಿಸಿಕೊಳ್ಳಲು ಈ ಮೂರು ತರಕಾರಿ ಸೇವಿಸಿ 

1. ಮೆಂತ್ಯ ಸೇವಿಸಿ 

ಮೆಂತ್ಯ(Methi)ವು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳಲ್ಲಿ ನೀರಿನಲ್ಲಿ ಕರಗುವ ಗ್ಯಾಲಕ್ಟೋಮನ್ನನ್ ಇರುವುದು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಇದು ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಫೈಬರ್‌ನ ಉತ್ತಮ ಮೂಲವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ. ಮೆಂತ್ಯದ ನೀರನ್ನು ನಿಯಮಿತವಾಗಿ ಕುಡಿಯುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Oils For Digestion: ಮಳೆಗಾಲದಲ್ಲಿ ಅಡುಗೆಗೆ ಯಾವ ಎಣ್ಣೆ ಬಳಸುವುದು ಸೂಕ್ತ ?

2. ಜಿನ್ಸೆಂಗ್ ಸೇವಿಸಿ

ಜಿನ್ಸೆಂಗ್(Ginseng) ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಒಂದು ಗಿಡಮೂಲಿಕೆಯಾಗಿದ್ದು, ಇತ್ತೀಚೆಗೆ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಡಾ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಜಿನ್ಸೆಂಗ್ ಟೀ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಏಕೆಂದರೆ ಇದು ಹಸಿವನ್ನು ಕಡಿಮೆ ಮಾಡುತ್ತದೆ. ಆದರೆ, ನಾವು ಮೊದಲೇ ಹೇಳಿದಂತೆ, ಈ ಆರೋಗ್ಯಕರ ಗಿಡಮೂಲಿಕೆಗಳು ನೀವು ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದಾಗ ಮಾತ್ರ ಕೆಲಸ ಮಾಡುತ್ತವೆ.

ಇದನ್ನೂ ಓದಿ : Buttermilk for kids : ಬಲಾಢ್ಯ ಮೂಳೆಗಳಿಗಾಗಿ ಮಕ್ಕಳಿಗೆ ನಿತ್ಯ ನೀಡಿ ಮಜ್ಜಿಗೆ

3. ಪುದೀನಾ ಸೇವಿಸಿ

ಪುದೀನ(Mint) ಕೂಡ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ದೂರವಿಡುವುದರಿಂದ ಹಿಡಿದು ರಿಫ್ರೆಶ್ ಪಾನೀಯವನ್ನು ಒದಗಿಸುವವರೆಗೆ, ಈ ಮೂಲಿಕೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪುದೀನಾ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರಕ್ಕಾಗಿ ಅನಗತ್ಯ ಹಂಬಲವನ್ನು ನಿಗ್ರಹಿಸುತ್ತದೆ. ಇದರ ಜೊತೆಯಲ್ಲಿ, ಪುದೀನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಸರಿಯಾಗಿರಿಸುತ್ತದೆ. ನೀವು ಪುದೀನ ಚಟ್ನಿ ತಿನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News