ರುಚಿ ರುಚಿ ಪುದಿನ ಮತ್ತು ಕೊತ್ತಂಬರಿ ಸೊಪ್ಪಿನ ಚಟ್ನಿ ಈ 7 ಕಾರಣಕ್ಕೆ ತಿನ್ನಬೇಕು..!
ಉಪ್ಪು, ಮೆಣಸು, ಹುಳಿ, ತೆಂಗಿನ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ ಮಾಡಿದ ಕೊತ್ತಂಬರಿ ಸೊಪ್ಪಿನ ಚಟ್ನಿಅದೇ ರೀತಿ ಉಪ್ಪು, ಹುಳಿ, ಮೆಣಸು, ಮತ್ತು ಪುದಿನ ಬೆರೆಸಿ ಮಾಡಿದ ಪುದಿನ ಚಟ್ನಿ ಊಟಕ್ಕೆ ನಂಜಿಕೊಳ್ಳಲು ಇದ್ದರೆ ಅದೇ ಬ್ರಹ್ಮಾಂಡ.
ಬೆಂಗಳೂರು : ಉಪ್ಪು, ಮೆಣಸು, ಹುಳಿ, ತೆಂಗಿನ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು (Coriander) ಬೆರೆಸಿ ಮಾಡಿದ ಕೊತ್ತಂಬರಿ ಸೊಪ್ಪಿನ ಚಟ್ನಿಅದೇ ರೀತಿ ಉಪ್ಪು, ಹುಳಿ, ಮೆಣಸು, ಮತ್ತು ಪುದಿನ ಬೆರೆಸಿ ಮಾಡಿದ ಪುದಿನ ಚಟ್ನಿ ಊಟಕ್ಕೆ ನಂಜಿಕೊಳ್ಳಲು ಇದ್ದರೆ ಅದೇ ಬ್ರಹ್ಮಾಂಡ. ಹಸಿದ ಹೊಟ್ಟೆಗೆ ಈ ಪುದಿನ ಅಥವಾ ಕೊತ್ತಂಬರಿ ಸೊಪ್ಪಿನ ಚಟ್ನಿ ( Coriander, mint chutney)ಸಿಕ್ಕರೆ ಅದೇ ಪರಮಾನಂದ. ಹಸಿವಾಗದೇ ಇರುವುದು, ಅಜೀರ್ಣ ಇತ್ಯಾದಿ ಸಮಸ್ಯೆ ಇದ್ದರೆ, ಒಮ್ಮೆ ಈ ಚಟ್ನಿ ತಿಂದು ನೋಡಿ. ನಿಮ್ಮ ಎಲ್ಲಾ ಸಮಸ್ಯೆ ನೀಗುತ್ತದೆ.
ಆರೋಗ್ಯಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಚಟ್ನಿಯ 7 ಲಾಭಗಳು
1. ಜೀರ್ಣ ಕ್ರಿಯೆ ಸುಲಲಿತ :
ಪುದಿನ ಅಥವಾ ಕೊತ್ತಂಬರಿ ಸೊಪ್ಪಿನ ಚಟ್ನಿಗೆ (Pudina chuteny) ಲಿಂಬೆ, ಬ್ಲ್ಯಾಕ್ ಸಾಲ್ಟ್, ಜೀರಿಗೆ, ಹಸಿ ಮೆಣಸು, ಇಂಗು, ಶುಂಠಿ , ಬೆಳ್ಳುಳ್ಳಿ (Garlic) ಸೇರಿಸಿದರೆ ಅದರ ರುಚಿ ಇನ್ನೂ ಹೆಚ್ಚುತ್ತದೆ. ಜೊತೆಗೆ ಜೀರ್ಣಕ್ರಿಯೆ (digestion) ಸರಾಗವಾಗುತ್ತದೆ.
ಇದನ್ನೂ ಓದಿ : ಯೋಗಾಸನದ ಬಳಿಕ ಈ ಐದು ಆಹಾರಗಳನ್ನು ತಿನ್ನಬೇಕು
2. ಮಧುಮೇಹ ನಿಯಂತ್ರಣದಲ್ಲಿಡುತ್ತದೆ
ಮಧುಮೇಹಿಗಳು ಕೊತ್ತಂಬರಿ ಸೊಪ್ಪು ಜಾಸ್ತಿ ತಿನ್ನಬೇಕು. ಯಾಕೆಂದರೆ ಕೊತ್ತಂಬರಿ ಸೊಪ್ಪಿನಿಂದ ಇನ್ಸುಲಿನ್ ಸ್ರವಿಸುವಿಕೆ ಹೆಚ್ಚಾಗುತ್ತೆ. ಇದರಿಂದ ಸಕ್ಕರೆ ಲೆವೆಲ್ (Sugra level) ನಿಯಂತ್ರಣಕ್ಕೆ ಬರುತ್ತದೆ.
3. ದೇಹದ ಉರಿ ಕಡಿಮೆ ಮಾಡುತ್ತದೆ.
ಕೊತ್ತಂಬರಿ ಅಥವಾ ಪುದಿನ ಚಟ್ನಿ (Pudina chutney) ದೇಹವನ್ನು ತಣ್ಣಗಿಡುತ್ತದೆ. ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಪುದಿನ ಚಟ್ನಿಯನ್ನು ದಿನವೂ ತಿಂದರೆ ಹೊಟ್ಟೆ ಉರಿ ನೀಗುತ್ತದೆ.
4. ಹಸಿವು ಹೆಚ್ಚುತ್ತದೆ
ಹಸಿವಾಗದೇ ಹೋದರೆ ಊಟ ಸೇರಲ್ಲ. ಊಟ ಮಾಡದೇ ಹೋದರೆ ನಿಶ್ಯಕ್ತಿ ಆವರಿಸುತ್ತದೆ. ಊಟದ ಜೊತೆ ಕೊತ್ತಂಬರಿ ಸೊಪ್ಪಿನ ಚಟ್ನಿ, ಅಥವಾ ಪುದಿನ ಚಟ್ನಿ ತಿಂದರೆ ಹಸಿವು ಪ್ರಚೋದನೆಯಾಗುತ್ತದೆ. ಅಂದರ ಹಸಿವು ಹೆಚ್ಚು ಮಾಡುತ್ತದೆ ಕೊತ್ತಂಬರಿ ಸೊಪ್ಪು ಮತ್ತು ಪುದಿನ.
ಇದನ್ನೂ ಓದಿ : Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು
5. ವಾಕರಿಕೆ ನಿಲ್ಲಿಸುತ್ತದೆ
ಪುದಿನ ಮತ್ತು ಕೊತ್ತಂಬರಿ ಸೊಪ್ಪಿಗೆ ಒಂದು ವಿಶೇಷ ಸುವಾಸನೆ ಇದೆ. ಇವು ವಾಕರಿಕೆ ಕಡಿಮೆ ಮಾಡುತ್ತವೆ. ಜೊತೆಗೆ ನಿಮಗೆ ಫ್ರೆಶ್ನೆಸ್ ನೀಡುತ್ತದೆ.
6. ತ್ವಚೆಯ ಕಾಂತಿಗಾಗಿ
ಪುದಿನ ಮತ್ತು ಕೊತ್ತಂಬರಿ ಸೊಪ್ಪಿನಲ್ಲಿ ಆಂಟಿ ಫಂಗಲ್ ಮತ್ತು ಆಂಟಿಸೆಪ್ಟಿಕ್ ಗುಣಗಳಿವೆ. ಪುದಿನ, ಕೊತ್ತಂಬರಿ ಸೊಪ್ಪು ದಿನವೂ ತಿಂದರೆ ತ್ವಚೆಯ ಕಾಂತಿ ಹೆಚ್ಚುತ್ತದೆ. ಜೊತೆಗೆ ಇದು ದೇಹದ ಡಿಟಾಕ್ಸಿಫಿಕೇಶನ್ ಗೂ ನೆರವಾಗುತ್ತದೆ. ಅಂದರೆ ದೇಹದಲ್ಲಿ ಬೆರೆತಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಕ್ಕೆ ಹಾಕುವಲ್ಲಿ ನೆರವಾಗುತ್ತದೆ.
7. ರಕ್ತ ಹೀನತೆಯನ್ನು ಕಡಿಮೆ ಮಾಡುತ್ತದೆ.
ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ರಕ್ತ ಹೀನತೆ ಉಂಟಾಗುತ್ತದೆ. ಕೊತ್ತಂಬರಿ ಸೊಪ್ಪು ಮತ್ತು ಪುದಿನ ಚಟ್ನಿ (benefits of pudina chutney) ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದಾಂಶ ಹೆಚ್ಚುತ್ತದೆ. ಜೊತೆಗೆ ಇದು ರಕ್ತ ಹೀನತೆ ಕಡಿಮೆ ಮಾಡುತ್ತದೆ.
ಇದನ್ನೂ ಓದಿ : sideeffects of cornflakes : ಬೆಳಗಿನ ಉಪಹಾರಕ್ಕೆ Cornflakes ಸೇವಿಸುವ ಮುನ್ನ ಅದರ ಅಪಾಯ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.