ಯೋಗಾಸನದ ಬಳಿಕ ಈ ಐದು ಆಹಾರಗಳನ್ನು ತಿನ್ನಬೇಕು

ಯೋಗ ಮಾಡಿದ ಮೇಲೆ ಏನು ತಿನ್ನಬೇಕು ಎನ್ನುವುದರ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಯೋಗ ಮಾಡಿದ ಮೇಲೆ ಸ್ನಾಯು ಇನ್ನಷ್ಟು ಬಲಿಷ್ಠವಾಗಬೇಕಾದರೆ ಈ ಐದು ಆಹಾರಗಳನ್ನು ತಿನ್ನಬೇಕು.   

Written by - Ranjitha R K | Last Updated : Jun 21, 2021, 12:17 PM IST
  • ಯೋಗಾಸನ ದೇಹದ ಆರೋಗ್ಯಕ್ಕೆ ಅತೀ ಮುಖ್ಯ
  • ಯೋಗ ಮಾಡಿ, ನಿರೋಗಿಯಾಗಿ ಇದು ಘೋಷವಾಕ್ಯ
  • ಯೋಗ ಮಾಡಿದ ಮೇಲೆ ಈ ಐದು ಆಹಾರಗಳನ್ನು ತಿನ್ನಿ
 ಯೋಗಾಸನದ ಬಳಿಕ ಈ ಐದು ಆಹಾರಗಳನ್ನು ತಿನ್ನಬೇಕು title=
ಯೋಗ ಮಾಡಿದ ಮೇಲೆ ಈ ಐದು ಆಹಾರಗಳನ್ನು ತಿನ್ನಿ (file photo)

ನವದೆಹಲಿ :  ಜೂನ್ 21 ವಿಶ್ವ ಯೋಗ ದಿನ (world yoga day). ಯೋಗದ ಮಹತ್ವ ಸಾರುವುದು ಈ ದಿನದ ಮೂಲ ಉದ್ದೇಶ. ಯೋಗಾಭ್ಯಾಸ ಭಾರತದಲ್ಲಿ ಸುಮಾರು 5000 ವರ್ಷಗಳಿಂದ ಚಾಲ್ತಿಯಲ್ಲಿದೆ. ಯೋಗ ಮಾಡುವ ವ್ಯಕ್ತಿ ಶಾರೀರಿಕ ಮತ್ತು ಮಾನಸಿಕವಾಗಿ ಬಲಶಾಲಿಯಾಗುತ್ತಾನೆ. ಯೋಗ ಮಾಡಿ, ನಿರೋಗಿಯಾಗಿ. ಇದು ಯೋಗದ ಘೋಷವಾಕ್ಯ. ಯೋಗ ಮಾಡಿದ ಮೇಲೆ ಏನು ತಿನ್ನಬೇಕು ಎನ್ನುವುದರ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಯೋಗ ಮಾಡಿದ ಮೇಲೆ ಸ್ನಾಯು ಇನ್ನಷ್ಟು ಬಲಿಷ್ಠವಾಗಬೇಕಾದರೆ ಈ ಐದು ಆಹಾರಗಳನ್ನು ತಿನ್ನಬೇಕು. ಅದರ ವಿವರ ಇಲ್ಲಿದೆ, ಓದಿ. 

1. ರೆಡ್ ರೈಸ್ : ರೆಡ್ ರೈಸ್ (Red rice) ನಿಮಗೆ ಗೊತ್ತೇ ಇರುತ್ತದೆ. ಎಲ್ಲಾ ಅಂಗಡಿಗಳಲ್ಲಿ ಇದು ಸಿಗುತ್ತದೆ. ಯೋಗ ಮಾಡಿದ ಮೇಲೆ ರೆಡ್ ತಿಂದರೆ ಸುಲಭದಲ್ಲಿ ಬೊಜ್ಜು (fat) ಕರಗುತ್ತದೆ. ಜೊತೆಗೆ ಇದು ಹೃದಯಕ್ಕೂ ಒಳ್ಳೆಯದು. ಸ್ನಾಯು ಕೂಡಾ ಗಟ್ಟಿಯಗುತ್ತದೆ. 

ಇದನ್ನೂ ಓದಿ : Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು

2. ಬಾಳೆ ಹಣ್ಣು :
ಬಾಳೆ ಹಣ್ಣನ್ನು (Banana) ಜನರು ಅತಿ ಹೆಚ್ಚು ತಿನ್ನಲು ಇಷ್ಟ ಪಡುತ್ತಾರೆ. ಇದರಲ್ಲಿ ಫೈಬರ್ ಇರುತ್ತದೆ. ಇದರಿಂದ ಜೀರ್ಣಕ್ರಿಯೆ (Digestion) ಚೆನ್ನಾಗಿ ಆಗುತ್ತದೆ. ನೀವು ಯೋಗ ಮಾಡಿದ ಮೇಲೆ ನಿತ್ಯವೂ ಒಂದು ಬಾಳೆ ಹಣ್ಣು ತಿಂದರೆ ದೇಹದ ಸ್ನಾಯುವಿನ ಜೊತೆಗೆ ಸಂಪೂರ್ಣ ಶರೀರ ಹೆಲ್ತಿ ಆಗಿರುತ್ತದೆ.

3. ಲಸ್ಸಿ :
ಎಲ್ಲಾ ಋತುವಿನಲ್ಲೂ ಲಸ್ಸಿ (lassi) ಆರೋಗ್ಯಕ್ಕೆ ತುಂಬಾ ಹಿತಕಾರಿ. ಇದು ಹೊಟ್ಟೆಯನ್ನು ತಣ್ಣಗಿಡುತ್ತದೆ. ಯೋಗ ಮಾಡಿದ ಮೇಲೆ ಲಸ್ಸಿ ಕುಡಿದರೆ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಸ್ನಾಯುಗಳು ಕೂಡಾ ಬಲಗೊಳ್ಳುತ್ತದೆ.

ಇದನ್ನೂ ಓದಿ : sideeffects of cornflakes : ಬೆಳಗಿನ ಉಪಹಾರಕ್ಕೆ Cornflakes ಸೇವಿಸುವ ಮುನ್ನ ಅದರ ಅಪಾಯ ತಿಳಿಯಿರಿ

4. ಮೊಟ್ಟೆ :
ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಒಮೆಗಾ 3 ಫ್ಯಾಟಿ ಆಸಿಡ್ ಮುಖ್ಯ ಮೂಲ ಮೊಟ್ಟೆ (egg).ಯೋಗ ಮಾಡಿದ ಮೇಲೆ ದೇಹಕ್ಕೆ ಶಕ್ತಿ ಬೇಕಾಗುತ್ತದೆ. ಆಗ ಮೊಟ್ಟೆ ತಿನ್ನಿ. ಮೊಟ್ಟೆ ಬರೀ ಶಕ್ತಿ ಮಾತ್ರ ಅಲ್ಲ, ಸ್ನಾಯುವನ್ನು ಕೂಡಾ ಬಲಗೊಳಿಸುತ್ತದೆ. 

5. ಕಿನೋವಾ :
ಕಿನೋವಾದಲ್ಲಿ ಕಾರ್ಬೋಹಡ್ರೇಟ್ ಸಾಕಷ್ಟು ಲಭ್ಯವಿರುತ್ತವೆ. ಪ್ರೊಟೀನ್ ಮತ್ತು ಫೈಬರಿನ ಮುಖ್ಯ ಮೂಲ ಇದು. ಕಿನೋವಾ ತಿಂದರೆ ದೇಹದ ಸ್ನಾಯು ಬಲಿಷ್ಠವಾಗುತ್ತದೆ.

ಇದನ್ನೂ ಓದಿ : Cow Milk Vs Buffalo Milk: ಹಸು/ಎಮ್ಮೆ ಹಾಲಿನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News