sideeffects of cornflakes : ಬೆಳಗಿನ ಉಪಹಾರಕ್ಕೆ Cornflakes ಸೇವಿಸುವ ಮುನ್ನ ಅದರ ಅಪಾಯ ತಿಳಿಯಿರಿ

sideeffects of cornflakes :ಬೆಳಗಿನ ಗಡಿಬಿಡಿಯಲ್ಲಿ ಸುಲಭವಾಗಿ ತಯಾರಾಗುತ್ತದೆ ಎಂಬ ಕಾರಣಕ್ಕೆ ಕೆಲವರು cornflakes ಬಳಸಿದರೆ, ಇನ್ನು ಕೆಲವರು ಆರೋಗ್ಯಕರ ಉಪಹಾರ  ಎಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.  ಮಕ್ಕಳಿಂದ ಮುದುಕರವರೆಗೂ ಕಾರ್ನ್ ಫ್ಲೇಕ್ಸ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ  ಎಂಬುದು ನಿಮಗೆ ತಿಳಿದಿದೆಯೇ?

Written by - Ranjitha R K | Last Updated : Jun 20, 2021, 10:49 AM IST
  • ತಯಾರಿಸುವುದು ಸುಲಭ ಎಂದು ಕಾರ್ನ್ ಫ್ಲೇಕ್ ಸೇವಿಸುತ್ತೀರಾ?
  • ಕಾರ್ನ್ ಫ್ಲೇಕ್ ಸೇವನೆಯ ಅಪಾಯ ತಿಳಿದಿದೆಯಾ
  • ಕಾರ್ನ್ ಫ್ಲೇಕ್ ನಲ್ಲಿರುವ ಹಾನಿಕಾರಕ ಅಂಶಗಳ ಬಗ್ಗೆ ತಿಳಿಯಿರಿ
sideeffects of cornflakes : ಬೆಳಗಿನ ಉಪಹಾರಕ್ಕೆ Cornflakes ಸೇವಿಸುವ ಮುನ್ನ  ಅದರ ಅಪಾಯ ತಿಳಿಯಿರಿ title=
ಕಾರ್ನ್ ಫ್ಲೇಕ್ ಸೇವನೆಯ ಅಪಾಯ ತಿಳಿದಿದೆಯಾ (photo india.com)

ನವದೆಹಲಿ : ಬದಲಾಗುತ್ತಿರುವ ಸನ್ನಿವೇಶದಲ್ಲಿ ಇಂದಿನ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಸಾಮಾನ್ಯವಾಗಿ ದೋಸೆ, ಇಡ್ಲಿ, ಉಪ್ಪಿಟ್ಟು, ಚಪಾತಿ, ಮೊಟ್ಟೆ, ಇತ್ಯಾದಿಗಳನ್ನು ಬೆಳಗಿನ ಉಪಾಹಾರದ (Breakfast) ಸಮಯದಲ್ಲಿ ತಿನ್ನಲಾಗುತ್ತದೆ.  ಆದರೆ ಬದಲಾಗುತ್ತಿರುವ ಕಾಲದಲ್ಲಿ ಉಪಹಾರದ ಲಿಸ್ಟ್ ಗೆ Cornflakes ಸೇರಿಕೊಂಡಿದೆ. ಬೆಳಗಿನ ಗಡಿಬಿಡಿಯಲ್ಲಿ ಸುಲಭವಾಗಿ ತಯಾರಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಇದನ್ನು ಬಳಸಿದರೆ, ಇನ್ನು ಕೆಲವರು ಆರೋಗ್ಯಕರ ಉಪಹಾರ (Healthy breakfast) ಎಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.  ಮಕ್ಕಳಿಂದ ಮುದುಕರವರೆಗೂ ಕಾರ್ನ್ ಫ್ಲೇಕ್ಸ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ (Side effects of cornflakes) ಎಂಬುದು ನಿಮಗೆ ತಿಳಿದಿದೆಯೇ? 

ಹಾಗಿದ್ದರೆ ಕಾರ್ನ್ ಫ್ಲೇಕ್ ನಲ್ಲಿರುವ ಹಾನಿಕಾರಕ ಅಂಶಗಳ ಬಗ್ಗೆ ತಿಳಿಯೋಣ : 
ಶೂನ್ಯ ಪೋಷಕಾಂಶ : 
ಕಾರ್ನ್‌ಫ್ಲೇಕ್‌ಗಳಲ್ಲಿನ (Cornflakes) ಪೌಷ್ಠಿಕಾಂಶದ ಮೌಲ್ಯ ಶೂನ್ಯವಾಗಿರುತ್ತದೆ. ಇದರಲ್ಲಿ ಕಾರ್ನ್ ಸಿರಪ್ ಮತ್ತು ವನಸ್ಪತಿಯಂತಹ  ಪದಾರ್ಥಗಳಿವೆ. ಇದನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ : Fox Seed With Milk : ರಾತ್ರಿ ಮಲಗುವ ಮುನ್ನ Fox Seedsನಿಂದ ತಯಾರಿಸಿದ ಈ ಪೇಯ ಸೇವಿಸಲು ಮರಿಯಬೇಡಿ

ಹೈ ಗ್ಲೈಸೆಮಿಕ್ ಇಂಡೆಕ್ಸ್ : 
ಕಾರ್ನ್‌ಫ್ಲೇಕ್‌ ನಲ್ಲಿ ಗ್ಲೈಸೆಮಿಕ್  ಇಂಡೆಕ್ಸ್ ಹೆಚ್ಚಿನ ಪ್ರಮಾನದಲ್ಲಿ ಇರುತ್ತವೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹ ರೋಗಕ್ಕೆ (Diabetes) ತುತ್ತಾಗುವ ಸಾಧ್ಯತೆ ಇರುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ ನ ಸಹಾಯದಿಂದಲೇ ಯಾವುದೇ ಆಹಾರವು ದೇಹದ ಸಕ್ಕರೆ ಮಟ್ಟವನ್ನು (Sugar level) ಎಷ್ಟು ವೇಗವಾಗಿ ಮತ್ತು ಎಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ ಎಂಬುದನ್ನು ತೋರಿಸುತ್ತದೆ.

ಸಿಹಿ ಸೇರಿಸಲಾಗುತ್ತದೆ : 
ಕಾರ್ನ್‌ಫ್ಲೇಕ್‌ಗಳ ಸಾಮಾನ್ಯ ರುಚಿ (Natural taste) ನಾಲಗೆಗೆ ರುಚಿಸುವುದಿಲ್ಲ.  ಈ ಕಾರಣಕ್ಕೆ ಇದನ್ನು ಟೇಸ್ಟಿ ಮಾಡಲು ಹಲವಾರು ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಸೋಡಿಯಂನಲ್ಲಿಯೂ ಇದನ್ನು ಬಿಸಿಮಾಡಲಾಗುತ್ತದೆ. ಇದರ ನಂತರ, ಕಾರ್ನ್ ಸಿರಪ್ (Corn syrup) ಮತ್ತು ಸಿಹಿಯನ್ನು ಸೇರಿಸಲಾಗುತ್ತದೆ. ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Sunflower Seeds Benefits: ಹೈ ಬಿಪಿ, ಶುಗರ್ ಇರುವವರು ಸೂರ್ಯಕಾಂತಿ ಬೀಜಗಳನ್ನು ಪ್ರತಿದಿನ ತಪ್ಪದೇ ಸೇವಿಸಿ

ಕಾರ್ನ್‌ಫ್ಲೇಕ್‌ಗಳ ಬದಲಿಗೆ ಇವುಗಳನ್ನು ಸೇವಿಸಿ : 
ಕಾರ್ನ್‌ಫ್ಲೇಕ್‌ಗಳ ಬದಲಾಗಿ, ಉಪಾಹಾರದಲ್ಲಿ (Breakfast) ಓಟ್ಸ್ ಅಥವಾ ಗೋಧಿ ಕಡಿ ಉಪ್ಪಿಟ್ಟು ಸೇವಿಸುವುದು ಬಹಳ ಪ್ರಯೋಜನಕಾರಿ. ಇದಲ್ಲದೆ ಬ್ರೆಡ್ ಆಮ್ಲೆಟ್ (Omlet) , ಹಣ್ಣುಗಳು, ಹಣ್ಣನ ರಸ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹಕ್ಕೆ ಪ್ರಯೋಜನವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News