ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!
Bad Sleep Disease: ನಿದ್ರಾಹೀನತೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾದ ಕಾಯಿಲೆಯಾಗಿದೆ. ನಮ್ಮ ಜೀವನಶೈಲಿ ಮತ್ತು ಮಾನಸಿಕ ಸ್ಥಿತಿಯಿಂದ ಈ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ.
Tips To Get Deep Sleep: ನಿದ್ರೆ ಊಟದಷ್ಟೇ ಮುಖ್ಯವಾದದ್ದು. ಒಳ್ಳೆಯ ಊಟ ಮಾಡುವುದು ಎಷ್ಟು ಮುಖ್ಯವೋ ಹಾಗೆಯೇ ಒಳ್ಳೆಯ ನಿದ್ದೆ ಮಾಡುವುದೂ ಅಷ್ಟೇ ಮುಖ್ಯ. ಒಳ್ಳೆಯ ನಿದ್ದೆ ಎಂದರೆ ಮಧ್ಯ ಮಧ್ಯ ಎಚ್ಚರಗೊಳ್ಳದೆ ಕನಿಷ್ಠ ಐದಾರು ತಾಸು ನಿದ್ದೆ ಮಾಡುವುದು. ಆದರೆ ಇತ್ತೀಚೆಗಿನ ವರ್ಷದಲ್ಲಿ ಬಹುತೇಕರಿಗೆ ಇದು ಸಾಧ್ಯವಾಗುತ್ತಿಲ್ಲ. ನಿದ್ರಾಹೀನತೆ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ನಿದ್ರಾಹೀನತೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಇನ್ನೂ ಹಲವು ಕಾಯಿಲೆಗಳಿಗೆ ಎಡೆಮಾಡಿಕೊಡುವುದರಿಂದ ಈ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
ನಿದ್ರಾಹೀನತೆ ಕುರಿತಂತೆ ವೈದ್ಯರು, ನ್ಯೂಟ್ರಿಷಿಯನ್ ಗಳು, ಅರೋಗ್ಯ ಕ್ಷೇತ್ರದ ತಜ್ಞರು ‘ರಾತ್ರಿ ಬೇಗ ಊಟಮಾಡಿ’, ‘ಮಲಗುವ ಮುನ್ನ ಮೊಬೈಲ್ ಅಥವಾ ಟಿವಿ ನೋಡಬೇಡಿ’, ‘ಹಾಲು ಕುಡಿಯಿರಿ’, ‘ಹಾಲಿಗೆ ಇಂಥ ಪುಡಿ ಹಾಕಿಕೊಂಡು ಕುಡಿಯಿರಿ’, ‘ಸ್ನಾನ ಮಾಡಿ ಮಲಗಿ, ‘ಸಂಜೆ ವಾಕಿಂಗ್ ಅಥವಾ ವ್ಯಾಯಾಮ ಮಾಡಿ, ಆಗ ಆಯಾಸವಾಗುತ್ತೆ-ಚೆನ್ನಾಗಿ ನಿದ್ದೆ ಬರುತ್ತೆ’ ಎಂಬಿತ್ಯಾದಿ ಸಲಹೆ ಕೊಡುತ್ತಾರೆ. ಮೇಲಿನ ಎಲ್ಲಾ ಸಲಹೆಗಳ ಹೊರತಾಗಿಯೂ ನಿದ್ದೆ ಬರುತ್ತಿಲ್ಲ ಎನ್ನುವ ದೂರು ಕಮ್ಮಿಯಾಗಿಲ್ಲ.
ಇದನ್ನೂ ಓದಿ- ಒಂದೇ ಒಂದು ತೆಂಗಿನ ಚಿಪ್ಪಿನಿಂದ ಬಿಳಿ ಕೂದಲನನ್ನು ಸ್ವಾಭಾವಿಕವಾಗಿ ಕಪ್ಪಾಗಿಸಿ..!
ಹೀಗೆ ಬೇರೆ ಬೇರೆ ಪ್ರಯೋಗ-ಪ್ರಯತ್ನ ಮಾಡಿಯೂ ನಿಮಗೆ ನಿದ್ದೆ ಬಂದಿಲ್ಲ ಎಂದರೆ ಅದು ನಿಮ್ಮ ದೈಹಿಕವಾದ ಸಂರಚನೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ ಎನ್ನುವುದನ್ನು ಮನಗಾಣಬೇಕು. ಹಾಗಾದರೆ ಅದು ‘ಮಾನಸಿಕ ಸ್ಥಿತಿ’ಯನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಅರಿಯಬೇಕು. ಮಾನಸಿಕ ಸ್ಥಿತಿ ಎಂದರೆ ‘ಮಲಗುವಾಗ ಸಂಗೀತ ಕೇಳಿ ಮಲಗಿ’ ಮತ್ತು ‘ಯಾವುದೇ ಯೋಚನೆ ಮಾಡದೆ ನೆಮ್ಮದಿಯಾಗಿ ಇರಲು ಪ್ರಯತ್ನಿಸಿ’ ಎಂಬ ಸಲಹೆಗಳು ಬರುತ್ತವೆ. ಒಂದೊಮ್ಮೆ ಹಾಗೆ ಮಾಡಿದರೂ ನಿದ್ದೆ ಬರದಿದ್ದರೆ ಏನು ಮಾಡಬೇಕು?
ಇದನ್ನೂ ಓದಿ- ಉತ್ತಮ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ ದಾಲ್ಚಿನ್ನಿ
ಈ ಸಿಂಪಲ್ ಟ್ರಿಕ್ ಮಾಡಬೇಕು. ‘ನನಗೆ ಏನೇ ಮಾಡಿದರೂ ನಿದ್ದೆ ಬರುತ್ತಿಲ್ಲ’ ಎನ್ನುವ ನಕಾರಾತ್ಮಕ ಭಾವನೆಯನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಜೊತೆಗೆ ‘ನನಗೆ ಚೆನ್ನಾಗಿ ನಿದ್ದೆ ಬರುತ್ತದೆ, ಏನೂ ಸಮಸ್ಯೆ ಇಲ್ಲ’ ಎನ್ನುವ ಧನಾತ್ಮಕ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ರಾತ್ರಿ ಮಲಗುವಾಗ ತಪ್ಪದೆ ಈ ರೀತಿ ಮಾಡಬೇಕು. ಅದೇ ರೀತಿ ದಿನದಲ್ಲೂ ಐದಾರು ಬಾರಿ ಈ ರೀತಿಯ ಭಾವನೆಯನ್ನು ತಂದುಕೊಳ್ಳಬೇಕು. ಆಗ ನಿಮ್ಮ ದೇಹದಲ್ಲಿ ನಿದ್ರೆ ಬರಲು ಯಾವ ಆರ್ಮೋನ್ಸ್ ಗಳು ರಿಲೀಸ್ ಆಗಬೇಕೋ ಅವು ರಿಲೀಸ್ ಆಗುತ್ತವೆ. ನಮ್ಮ ಭಾವನೆಗಳು ನಮ್ಮ ದೇಹವನ್ನು ರೂಪಿಸುತ್ತಿರುತ್ತವೆ. ಒಂದು ವಾರ ಹೀಗೆ ಮಾಡಿದರೆ ವಾರದ ನಂತರ ನಿದ್ರೆಯ ಗುಣಮಟ್ಟ ತಾನೇತಾನಾಗಿ ಉತ್ತಮವಾಗಿರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.