ಇದು ಹೆಪಟೈಟಿಸ್ ಲಕ್ಷಣವಾಗಿರಬಹುದು .! ನಿರ್ಲಕ್ಷಿಸಿದರೆ ಸಾವಿಗೆ ಸನಿಹವಾಗಬೇಕಾದಿತು .!
World Hepatitis Day 2022: ಹೆಪಟೈಟಿಸ್‌ನಿಂದಾಗಿ, ನಮ್ಮ ದೇಹದ ಬಹುಮುಖ್ಯ ಅಂಗವಾಗಿರುವ ಯಕೃತ್ತಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ. ಇದು ವೈರಲ್ ಸೋಂಕಿನಿಂದ ಪ್ರಾರಂಭವಾಗುತ್ತದೆ.
World Hepatitis Day 2022 : ಪ್ರತಿ ವರ್ಷ 'ವಿಶ್ವ ಹೆಪಟೈಟಿಸ್ ದಿನ'ವನ್ನು ಜುಲೈ 28 ರಂದು ಆಚರಿಸಲಾಗುತ್ತದೆ. ಈ ಅಪಾಯಕಾರಿ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಹೆಪಟೈಟಿಸ್‌ನಿಂದಾಗಿ, ನಮ್ಮ ದೇಹದ ಬಹುಮುಖ್ಯ ಅಂಗವಾಗಿರುವ ಯಕೃತ್ತಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ. ಇದು ವೈರಲ್ ಸೋಂಕಿನಿಂದ ಪ್ರಾರಂಭವಾಗುತ್ತದೆ. ಹೆಪಟೈಟಿಸ್ ನಮ್ಮ ದೇಹವನ್ನು ಆಕ್ರಮಿಸುವ ಸುಮಾರು 5 ವಿಧಾನಗಳಿವೆ. ಇವುಗಳಲ್ಲಿ ಆಹಾರ, ನೀರು, ರಕ್ತ, ಯೋನಿ ಸ್ರವಿಸುವಿಕೆ ಅಥವಾ ವೀರ್ಯ ಸೇರಿವೆ.
ಈ ಕಾರಣದಿಂದಾಗಿ ಹೆಪಟೈಟಿಸ್ ಉಂಟಾಗುತ್ತದೆ :
ಅತಿಯಾಗಿ ಆಲ್ಕೋಹಾಲ್ ಕುಡಿಯುವ ಜನರಲ್ಲಿ ಯಕೃತ್ತಿನ ಹಾನಿಯ ಅಪಾಯವು ಬಹಳ ಹೆಚ್ಚಾಗಿರುತ್ತದೆ. ಇದು ಉರಿಯೂತವನ್ನು ಉಂಟುಮಾಡುತ್ತದೆ. ಆಲ್ಕೋಹಾಲ್ ನೇರವಾಗಿ ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಇದು ಹೆಪಟೈಟಿಸ್, ಸಿರೋಸಿಸ್ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ : Cholesterol Lowering Drinks: ಈ ನಾಲ್ಕು ಪಾನೀಯಗಳ ಸೇವನೆಯಿಂದ ಕಡಿಮೆಯಾಗುತ್ತದೆ ಕೊಲೆಸ್ಟ್ರಾಲ್
ಹೆಪಟೈಟಿಸ್‌ನ ಲಕ್ಷಣಗಳು :
ಹೆಪಟೈಟಿಸ್‌ಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಮಾರಣಾಂತಿಕ ಕಾಯಿಲೆಯಾಗಿ ಪರಿಣಮಿಸುತ್ತದೆ. ಈ ರೋಗದ ಮುಖ್ಯ ಲಕ್ಷಣಗಳು ಯಾವುವು ನೋಡೋಣ :
- ಆಯಾಸ -
- ಜ್ವರ ರ
-ಹಸಿವಾಗದೆ ಇರುವುದು
- ತ್ವರಿತ ತೂಕ ನಷ್ಟ
- ಕಾಮಾಲೆ ಲಕ್ಷಣಗಳು
- ಹೊಟ್ಟೆ ನೋವು
- ಕೀಲು ನೋವು
- ಗಾಢ ಬಣ್ಣದ ಮೂತ್ರ
- ತಿಳಿ ಬಣ್ಣದ ಮಲ
ಹೆಪಟೈಟಿಸ್ ವಿಧಗಳು :
ಹೆಪಟೈಟಿಸ್ ಎ - ಈ ರೋಗವು ತುಂಬಾ ಅಪಾಯಕಾರಿ ಅಲ್ಲ ಮತ್ತು ಸೌಮ್ಯವಾದ ಔಷಧಿಗಳ ಸಹಾಯದಿಂದ ಇದನ್ನು ಗುಣಪಡಿಸಬಹುದು. ಈ ಪರಿಸ್ಥಿತಿಯಲ್ಲಿ, ವೈದ್ಯರು ವಿಶ್ರಾಂತಿ ಮತ್ತು ಕೆಲವು ವಿಶೇಷ ಆಹಾರವನ್ನು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ : ಬ್ಲಡ್ ಶುಗರ್ ಕಡಿಮೆ ಮಾಡಲು ಅಡುಗೆಮನೆಯಲ್ಲಿರುವ ಈ ಒಂದು ಮಸಾಲೆ ಸಾಕು
ಹೆಪಟೈಟಿಸ್ ಬಿ - ಇದು ಕರೋನಿಕ್ ಕಾಯಿಲೆಯಾಗಿದ್ದು, ಆಂಟಿವೈರಲ್ ಔಷಧಿಗಳನ್ನು ಬಳಸಿ ಗುಣಪಡಿಸಿಕೊಳ್ಳಬಹುದು. ಅಲ್ಲದೆ ಲಸಿಕೆಯ ಮೂಲಕ ಕೂಡಾ ಇದರ ವಿರುದ್ದ ಪರಿಹಾರ ಕಂಡು ಕೊಳ್ಳಬಹುದು.
ಹೆಪಟೈಟಿಸ್ ಸಿ- ಆಂಟಿವೈರಲ್ ಔಷಧಗಳು ಮತ್ತು ಚಿಕಿತ್ಸೆಗಳ ಮೂಲಕ ಈ ರೋಗವನ್ನು ನಿವಾರಿಸಬಹುದು. ರೋಗ ಲಕ್ಷಣಗಳು ಕಂಡುಬಂದಾಗ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಹೆಪಟೈಟಿಸ್ ಡಿ - ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, Pegylated Interferon Alphaವನ್ನು ಹೆಪಟೈಟಿಸ್ ಡಿ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : ತಲೆನೋವನ್ನು ಕ್ಷಣಾರ್ಧದಲ್ಲೇ ಶಮನ ಮಾಡುತ್ತೆ ಈ ಮನೆಮದ್ದು
ಹೆಪಟೈಟಿಸ್ ಇ- ಈ ಕಾಯಿಲೆಗೆ ಸರಿಯಾದ ಔಷಧಿಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಆದರೆ ಅನೇಕ ಬಾರಿ ಅದು ಸ್ವತಃ ಗುಣವಾಗುತ್ತದೆ. ಇದಕ್ಕಾಗಿ ಸಂಪೂರ್ಣ ವಿಶ್ರಾಂತಿ, ದ್ರವ ಪದಾರ್ಥಗಳ ಸೇವನೆ, ಆರೋಗ್ಯಕರ ಆಹಾರ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿರಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.