Cholesterol Lowering Tips : ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಹಲವು ಕಾಯಿಲೆಗಳ ಅಪಾಯ ಹುಟ್ಟಿಕೊಳ್ಳುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನೇರವಾಗಿ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿವೆ. ಹಾಗಾಗಿಯೇ ನಾವು ಸೇವಿಸುವ ಆಹಾರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರತಿದಿನ ಕೆಳಗೆ ಹೇಳಲಾದ ಪಾನೀಯಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಕ್ಷಿಪ್ರಗತಿಯಲ್ಲಿ ಕಡಿಮೆಯಾಗುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೈಸರ್ಗಿಕ ಪಾನೀಯಗಳು :
1. ಟೊಮೇಟೊ ಜ್ಯೂಸ್ :
ಟೊಮೇಟೊವನ್ನು ಬಹುತೇಕ ಎಲ್ಲಾ ಮನೆಗಳಲ್ಲಿಯೂ ಬಳಸಲಾಗುತ್ತದೆ. ಆದರೆ ಇದರ ಮೂಲಕ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಲೈಕೋಪೀನ್ ಎಂಬ ಸಂಯುಕ್ತವು ಟೊಮೆಟೊಗಳಲ್ಲಿ ಕಂಡುಬರುತ್ತದೆ. ಇದು ಲಿಪಿಡ್ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಟೊಮೆಟೊ ರಸವನ್ನು ಪ್ರತಿದಿನ ಸೇವಿಸಬೇಕು.
ಇದನ್ನೂ ಓದಿ : ಬ್ಲಡ್ ಶುಗರ್ ಕಡಿಮೆ ಮಾಡಲು ಅಡುಗೆಮನೆಯಲ್ಲಿರುವ ಈ ಒಂದು ಮಸಾಲೆ ಸಾಕು
2. ಕೋಕೋ ಡ್ರಿಂಕ್ :
ಡಾರ್ಕ್ ಚಾಕೊಲೇಟ್ ತಿಂದಿದ್ದರೆ ಕೋಕೋ ಹೆಸರು ಕೂಡಾ ಕೇಳಿರುತ್ತೀರಿ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಫ್ಲೇವನಾಲ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಜೊತೆಗೆ ಕೋಕೋ ಪಾನೀಯಗಳಲ್ಲಿರುವ ಮೊನೊ-ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ.
3. ಓಟ್ಸ್ ಪಾನೀಯಗಳು :
ಓಟ್ಸ್ ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ಬೀಟಾ ಗ್ಲುಕನ್‌ಗಳನ್ನು ಹೊಂದಿದ್ದು, ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುತ್ತದೆ. ಇದು ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : ತಲೆನೋವನ್ನು ಕ್ಷಣಾರ್ಧದಲ್ಲೇ ಶಮನ ಮಾಡುತ್ತೆ ಈ ಮನೆಮದ್ದು
4. ಗ್ರೀನ್ ಟೀ :
ಗ್ರೀನ್ ಟೀ ತೂಕ ನಷ್ಟಕ್ಕೆ ಪರಿಣಾಮಕಾರಿ ಪರಿಹಾರ. ಇದರಲ್ಲಿರುವ ಕ್ಯಾಟೆಚಿನ್ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ಬಿಪಿ, ಹೃದಯಾಘಾತ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.