ಭಾರತವು ವಿಶ್ವದ ಎರಡನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಇದರರ್ಥ ಇಲ್ಲಿ ಪುರುಷತ್ವ ಉತ್ತಮವಾಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಪುರುಷ ಬಂಜೆತನ ಸಮಸ್ಯೆ ಗಮನಾರ್ಹವಾಗಿ ಕಂಡುಬರುತ್ತಿದ್ದು, ಇದರಿಂದಾಗಿ ಪುರುಷರು ತಂದೆಯಾಗುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಸಮಸ್ಯೆಗೆ ಕಾರಣ ಏನು ಎಂದು ತಿಳಿಯೋಣ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Sanjanaa Galrani: ಸಂಜನಾ ಗಲ್ರಾನಿ ಮಗನ ಹೆಸರೇನು ಗೊತ್ತಾ? ಇಲ್ಲಿದೆ ಮಗುವಿನ ಮುದ್ದಾದ ವಿಡಿಯೋ


ಪುರುಷರಲ್ಲಿ 50 ವರ್ಷದ ನಂತರ ಸ್ಪರ್ಮ್‌ ಕೌಂಟ್‌ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಪುರುಷತ್ವ ಕಡಿಮೆಯಾಗಲು ಕಾರಣವಾಗುತ್ತದೆ. ಆದರೆ ಮಹಿಳೆಯರಲ್ಲಿ ಇದು ಹೆಚ್ಚಾಗಿ 32 ರಿಂದ 35 ವರ್ಷಗಳ ನಂತರ ಸಂಭವಿಸುತ್ತದೆ. ಆದರೆ ಆಧುನಿಕ ಜೀವನದ ಭರಾಟೆಯಲ್ಲಿ ಪುರುಷರಲ್ಲಿ ಫಲವತ್ತತೆ ಚಿಕ್ಕವಯಸ್ಸಿನಲ್ಲಿಯೇ ಕಡಿಮೆಯಾಗಲು ಪ್ರಾರಂಭಿಸುತ್ತಿದೆ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ.


1. ಸೋಂಕಿನ ಅಪಾಯವು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ:
ಅಸುರಕ್ಷಿತ ಲೈಂಗಿಕತೆಯಿಂದಾಗಿ, ಲೈಂಗಿಕವಾಗಿ ಹರಡುವ ರೋಗಗಳ (ಎಸ್‌ಟಿಡಿ) ಸೋಂಕಿನ ಅಪಾಯವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅಂತಹ ಕಾಯಿಲೆಗಳು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ವೀರ್ಯದ ಸಾಗುವ ಹಾದಿಯನ್ನು ನಿರ್ಬಂಧಿಸಬಹುದು. 


2. ವೀರ್ಯಕ್ಕೆ ಹಾನಿಕಾರಕ ಪ್ರತಿರಕ್ಷಣಾ ವ್ಯವಸ್ಥೆ:
ವೀರ್ಯ ವಿರೋಧಿ ಪ್ರತಿಕಾಯಗಳು, ವೀರ್ಯಕ್ಕೆ ಹಾನಿಕಾರಕ ಪ್ರತಿರಕ್ಷಣಾ ವ್ಯವಸ್ಥೆಯ ಕೋಶಗಳಾಗಿವೆ. ಅವು ದೇಹದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿದರೆ, ಫಲವತ್ತತೆ ಕಡಿಮೆಯಾಗಲು ಆರಂಭಿಸುತ್ತದೆ. ಕಾರಣ ಇವು ವೀರ್ಯವನ್ನು ತೊಡೆದುಹಾಕಲು ಪ್ರಯತ್ನಿಸುತ್ತವೆ.


3. ವೆರಿಕೋಸಿಲೆ:
ವೃಷಣದಿಂದ ಹೊರಬರುವ ರಕ್ತನಾಳಗಳು ಊದಿಕೊಳ್ಳಲು ಪ್ರಾರಂಭಿಸುವ ಸಮಸ್ಯೆಯೇ ವೆರಿಕೋಸಿಲೆ. ಈ ಸಂದರ್ಭದಲ್ಲಿ ಪುರುಷನ ಫಲವತ್ತತೆ ಹದಗೆಡಲು ಆರಂಭವಾಗುತ್ತದೆ. 


4. ರೆಟ್ರೋಗ್ರೇಡ್ ಸ್ಖಲನ: 
ಲೈಂಗಿಕ ಸಮಯದಲ್ಲಿ ವೀರ್ಯವು ಹೊರಬರುವ ಬದಲು ಮೂತ್ರಕೋಶದೊಳಗೆ ಹೋದಾಗ ಹಿಮ್ಮುಖ ಸ್ಖಲನ ಸಂಭವಿಸುತ್ತದೆ. ಇದು ಪುರುಷರಿಗೆ ತಂದೆಯಾಗಲು ಅಡೆತಡೆಗಳನ್ನು ಸೃಷ್ಟಿಸುತ್ತದೆ. 


5. ದೇಹದಲ್ಲಿ ಉಂಟಾಗುವ ಗೆಡ್ಡೆಗಳು:
ಪುರುಷರ ದೇಹದಲ್ಲಿ ಉಂಟಾಗುವ ಗೆಡ್ಡೆಗಳು ಅವರ ಖಾಸಗಿ ಭಾಗಗಳ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತವೆ. ಇದು ಸಹ ಫಲವತ್ತತೆ ಕಡಿಮೆಯಾಗಲು ಮುಖ್ಯ ಕಾರಣವಾಗುತ್ತದೆ.


ಇದನ್ನೂ ಓದಿ: Ration Card Update : ಪಡಿತರ ಚೀಟಿದಾರರ ಗಮನಕ್ಕೆ : ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರಿ ಬದಲಾವಣೆ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.