ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಫಿಟ್ ಆಗಿರಲು ಜನರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಕೆಲವರು ತಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅದಾಗ್ಯೂ, ಸದಾ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಾವು ಆಹಾರ ಸೇವನೆ ಬಳಿಕ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಸಹ ಕಾರಣವಿರಬಹುದು. ಹೌದು, ಊಟದ ನಂತರ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಿಮ್ಮ ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಆಹಾರ ಸೇವನೆ ಬಳಿಕ ಮಾಡುವ ಈ 4 ತಪ್ಪುಗಳು ದೇಹಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು:
ಮನೆಯಲ್ಲಿ ಹಿರಿಯರು ಊಟದ ಮಧ್ಯೆ ನೀರು ಕುಡಿಯದಂತೆ ಮತ್ತು ಊಟವಾದ ತಕ್ಷಣ ನೀರು ಕುಡಿಯದಂತೆ ಸಲಹೆ ನೀಡುತ್ತಾರೆ. ಯಾರೂ ಇದಕ್ಕೆ ಕಿವಿಗೊಡುವುದಿಲ್ಲ. ನೀವೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಎಚ್ಚರ. ತಿಂದ ತಕ್ಷಣ ನೀರು ಕುಡಿಯುವುದರಿಂದ  ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ, ಊಟವಾದ ಅರ್ಧ ಗಂಟೆಯ ನಂತರ ಮಾತ್ರ ನೀರನ್ನು ಕುಡಿಯಿರಿ. 


ಇದನ್ನೂ ಓದಿ- ಮಧುಮೇಹದಿಂದ ಮಂಡಿ ನೋವಿನವರೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನುಗ್ಗೆ ಸೊಪ್ಪು


ಆಹಾರ ಸೇವನೆ ಬಳಿಕ ವ್ಯಾಯಾಮ:
ಕೆಲವರು ಊಟವಾದ ನಂತರ ವ್ಯಾಯಾಮ ಮಾಡುತ್ತಾರೆ. ನಿಮಗೂ ಈ ರೀತಿಯ ಅಭ್ಯಾಸವಿದ್ದರೆ ಇಂದೇ ಇದನ್ನು ಬದಲಾಯಿಸಿಕೊಳ್ಳಿ. ನೀವು ತಿಂದ ನಂತರ ವ್ಯಾಯಾಮ ಮಾಡಿದರೆ, ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಅಜೀರ್ಣ ಸಮಸ್ಯೆಗೂ ಕಾರಣವಾಗಬಹುದು.


ಊಟದ ನಂತರ ಚಹಾ:
ಕೆಲವರಿಗೆ ಊಟದ ನಂತರ ಟೀ ಅಥವಾ ಕಾಫಿ ಕುಡಿಯುವುದು ರೂಢಿ. ಆದರೆ, ಊಟದ ನಂತರ ಚಹಾವನ್ನು ಸೇವಿಸಿದರೆ , ಅದರಲ್ಲಿರುವ ನಿಕೋಟಿನ್ ನಿಮ್ಮ ದೇಹದ ಪ್ರೋಟೀನ್‌ಗಳನ್ನು ಹೀರಿಕೊಳ್ಳುತ್ತದೆ, ಇದರಿಂದಾಗಿ ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯೂ ಉಂಟಾಗಬಹುದು.


ಇದನ್ನೂ ಓದಿ- ತೂಕ ಇಳಿಕೆ ಮಾಡುವ ಈ ಚೂರ್ಣವನ್ನು ನೀವು ಸರಿಯಾಗಿ ಸೇವಿಸದಿದ್ದರೆ ಆರೋಗ್ಯಕ್ಕೆ ಭಾರಿ ಹಾನಿ


ಊಟವಾದ ತಕ್ಷಣ ಮಲಗುವುದು: 
ನಮ್ಮಲ್ಲಿ ಹೆಚ್ಚಿನ ಜನ ರಾತ್ರಿವೇಳೆ ಊಟವಾದ ತಕ್ಷಣ ಮಲಗುತ್ತಾರೆ. ಆದರೆ, ಇದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಊಟ ಮಾಡಿದ ತಕ್ಷಣ ನಿದ್ದೆ ಬಂದರೆ ಬೊಜ್ಜು, ಅಸಿಡಿಟಿ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಹಾಗಾಗಿ, ಉತ್ತಮ ಆರೋಗ್ಯಕ್ಕಾಗಿ ಊಟ ಮಾಡಿದ ಸುಮಾರು 2 ಗಂಟೆಗಳ ನಂತರವೇ ಮಲಗಬೇಕು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.