ಶರೀರದಲ್ಲಿ ಈ ನಾಲ್ಕು ವಿಟಮಿನ್ ಗಳ ಕೊರತೆಯೇ ದೃಷ್ಟಿ ಮಂಜಾಗುವುದಕ್ಕೆ ಕಾರಣ
Vitamin Deficiency Leads To Low Vision: ಯುವಕರು ಅಥವಾ ಮಧ್ಯವಯಸ್ಕರಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಂಡರೆ, ಅವರ ದೇಹದಲ್ಲಿ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆಯಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
Vitamin Deficiency Leads To Low Vision: ಕೆಲವರಿಗೆ ಇದ್ದಕ್ಕಿದ್ದಂತೆ ದೃಷ್ಟಿ ಮಂಜಾಗುತ್ತದೆ. ಅದೂ ಕತ್ತಲಲ್ಲಿ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಯಸ್ಕರಲ್ಲಿ ಈ ಸಮಸ್ಯೆ ಕಂಡು ಬಂದರೆ ಅದು ಸಾಮಾನ್ಯ ಎಂದು ಸುಮ್ಮನಾಗಬಹುದು. ಯಾಕೆಂದರೆ ವಯಸ್ಸಾಗುತ್ತಿದ್ದಂತೆ ದೃಷ್ಟಿ ಮಂಕಾಗುತ್ತದೆ. ಯುವಕರು ಅಥವಾ ಮಧ್ಯವಯಸ್ಕರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ, ಅವರ ದೇಹದಲ್ಲಿ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆಯಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ 4 ವಿಟಮಿನ್ ಗಳ ಕೊರತೆಯಿಂದ ದೃಷ್ಟಿ ದುರ್ಬಲವಾಗುತ್ತದೆ.
ದೈನಂದಿನ ಆಹಾರದಲ್ಲಿ ಈ ಜೀವಸತ್ವಗಳನ್ನು ಸೇರಿಸಿ :
1. ವಿಟಮಿನ್ ಎ
ವಿಟಮಿನ್ ಎ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಕಣ್ಣುಗಳ ಹೊರ ಪದರಕ್ಕೆ ರಕ್ಷಣೆ ನೀಡುತ್ತದೆ. ದೇಹದಲ್ಲಿ ಈ ಪೋಷಕಾಂಶದ ಕೊರತೆಯಿದ್ದರೆ, ರಾತ್ರಿ ಕುರುಡುತನ ಸಂಭವಿಸುತ್ತದೆ. ಹೀಗಾದಾಗ, ರಾತ್ರಿಯಾಗುತ್ತಿದ್ದಂತೆಯೇ ಏನೂ ಸರಿಯಾಗಿ ಕಾಣಿಸುವುದಿಲ್ಲ. ಇದಕ್ಕಾಗಿ ಹಸಿರು ಎಲೆಗಳ ತರಕಾರಿಗಳು, ಸಿಹಿ ಗೆಣಸು, ಪಪ್ಪಾಯಿ, ಕ್ಯಾರೆಟ್ ಮತ್ತು ಕುಂಬಳಕಾಯಿಯನ್ನು ತಿನ್ನಬೇಕು.
ಇದನ್ನೂ ಓದಿ : Motion Sickness: ನೀವು ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಇಲ್ಲಿದೆ ಪರಿಹಾರ
2. ವಿಟಮಿನ್ ಬಿ
ದೃಷ್ಟಿ ಎಂದಿಗೂ ದುರ್ಬಲವಾಗಬಾರದು ಎಂದು ಅಂದುಕೊಂಡಿದ್ದರೆ, ಅಂತಹ ವಿಟಮಿನ್ ಬಿ 6, ವಿಟಮಿನ್ ಬಿ 9 ಮತ್ತು ವಿಟಮಿನ್ ಬಿ 12 ಹೇರಳವಾಗಿರುವ ಆಹಾರಗಳನ್ನು ಸೇವಿಸಿ. ಇದಕ್ಕಾಗಿ, ನೀವು ಹಸಿರು ಎಲೆಗಳ ತರಕಾರಿಗಳು, ಒಣ ಹಣ್ಣುಗಳು, ಕಾಳುಗಳು, ಬೀನ್ಸ್, ಮಾಂಸ, ಬೀಜಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು.
3. ವಿಟಮಿನ್ ಸಿ
ವಿಟಮಿನ್ ಸಿ ದೃಷ್ಟಿಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಕಣ್ಣಿನ ದೃಷ್ಟಿಯನ್ನು .ಕಿತ್ತಳೆ, ನಿಂಬೆ, ನೆಲ್ಲಿಕಾಯಿ, ಮೊಸಂಬಿ, ಪೇರಳೆ, ಕೋಸುಗಡ್ಡೆ, ಮತ್ತು ಕರಿಮೆಣಸುಗಳ ಸೇವನೆಯನ್ನು ದೇಹದಲ್ಲಿ ವಿಟಮಿನ್ ಸಿಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ : Couple workout ಮಾಡೋದ್ರಿಂದ ಸಿಗುತ್ತೆ ಅನೇಕ ಪ್ರಯೋಜನ: ತಿಳಿದರೆ ದಿಗ್ಭ್ರಮೆಯಾಗುತ್ತದೆ!
4. ವಿಟಮಿನ್ ಇ
ವಿಟಮಿನ್ ಇ ನಮ್ಮ ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಫ್ರೀ ರಾಡಿಕಲ್ ಗಳ ಅಪಾಯದಿಂದ ನಮ್ಮನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿಗಳು, ಸಾಲ್ಮನ್ ಮೀನು, ಬೀಜಗಳು ಮತ್ತು ಆವಕಾಡೊ ತಿನ್ನುವುದರಿಂದ ವಿಟಮಿನ್ ಇ ಪಡೆಯಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.