Motion Sickness: ನೀವು ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಇಲ್ಲಿದೆ ಪರಿಹಾರ

ಲಾಂಗ್ ಡ್ರೈವ್ ಅಥವಾ ಲಾಂಗ್ ಜರ್ನಿ ಎನ್ನುವುದು ಅನೇಕರ ಬಯಕೆಯಾಗಿರುತ್ತದೆ. ಆದರೆ ಕೆಲವರಿಗೆ ಪ್ರಯಾಣದ ವೇಳೆ ವಾಂತಿ, ತಲೆಸುತ್ತುವಿಕೆ ಮತ್ತು ವಾಕರಿಕೆಯ ಸಮಸ್ಯೆ ಇರುತ್ತದೆ. ಇದಕ್ಕೆ ಸುಲಭ ಪರಿಹಾರ ಇಲ್ಲಿದೆ ನೋಡಿ.

Written by - Puttaraj K Alur | Last Updated : Sep 14, 2022, 08:54 AM IST
  • ದೂರದ ಪ್ರಯಾಣದ ವೇಳೆ ನಿಮಗೂ ವಾಂತಿ ಮತ್ತು ತಲೆ ಸುತ್ತುವಿಕೆಯ ಸಮಸ್ಯೆ ಇದೆಯೆ?
  • ನಿಮ್ಮ ಟ್ರಾವೆಲ್ ಬ್ಯಾಗ್‍ನಲ್ಲಿ ನಿಂಬೆಹಣ್ಣು, ಶುಂಠಿ ಮತ್ತು ಬಾಳೆ ಹಣ್ಣು ಇಟ್ಟುಕೊಳ್ಳಿರಿ
  • ನಿಂಬೆ, ಶುಂಠಿ ಮತ್ತು ಬಾಳೆ ಹಣ್ಣು ಸೇವನೆಯಿಂದ ನಿಮ್ಮ ಸಮಸ್ಯೆಗೆ ಸಿಗುತ್ತೆ ಪರಿಹಾರ
Motion Sickness: ನೀವು ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಇಲ್ಲಿದೆ ಪರಿಹಾರ   title=
How To Get Rid of Motion Sickness

ನವದೆಹಲಿ: ಪ್ರಯಾಣ ಮಾಡುವುದು ಅನೇಕ ಜನರಿಗೆ ಒಂದು ಹವ್ಯಾಸವಾಗಿರುತ್ತದೆ. ಪ್ರಯಾಣದ ವೇಳೆ ಮೋಜು-ಮಸ್ತಿ ಜೊತೆಗೆ ಜೀವನದಲ್ಲಿ ಹೊಸದನ್ನು ಕಲಿಯುವ ಅವಕಾಶ ಸಿಗುತ್ತದೆ. ಪ್ರತಿಯೊಬ್ಬರಿಗೂ ಪ್ರಯಾಣವು ವಿಭಿನ್ನ ರೀತಿಯ ಅನುಭವ ನೀಡುತ್ತದೆ. ಅನೇಕರು ಬಸ್, ರೈಲು, ಕಾರು ಅಥವಾ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣಿಸುವಾಗ ಕೆಲವರಿಗೆ ವಾಂತಿ, ತಲೆತಿರುಗುವಿಕೆ ಮತ್ತು ವಾಕರಿಕೆ ಬರುತ್ತದೆ. ಇದಕ್ಕೆ ಕಾರಣ ಮತ್ತು ಪರಿಹಾಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಅನೇಕರು ವಾಂತಿ ಮತ್ತು ತಲೆಸುತ್ತುವಿಕೆಯ ಕಾರಣದಿಂದ ಇಷ್ಟವಿದ್ದರೂ ಪ್ರಯಾಣ ಮಾಡಲು ಹಿಂಜರಿಯುತ್ತಾರೆ. ವಿಮಾನದಲ್ಲಿ ಪ್ರಯಾಣಿಕರು ವಾಂತಿ ಮಾಡಿಕೊಳ್ಳುತ್ತಾರೆಂದೇ ಸೀಟಿನ ಮುಂದೆ ಪಾಕೆಟ್ ರೀತಿಯ ವ್ಯವಸ್ಥೆ ಮಾಡಲಾಗಿರುತ್ತದೆ. ನೀವು ಸಹ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪ್ರಯಾಣದ ವೇಳೆ ನಿಮ್ಮ ಬ್ಯಾಗ್‍ನಲ್ಲಿ ಈ 3 ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ.

ಇದನ್ನೂ ಓದಿ: Health Tips : ಆರೋಗ್ಯಕರ, ಬಲವಾದ ಸ್ನಾಯುಗಳಿಗೆ ವೈದ್ಯರ ಸಲಹೆ ಇಲ್ಲಿದೆ

ಈ 3 ವಸ್ತುಗಳು ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿರಿಸಿ

ನಿಂಬೆ ಹಣ್ಣು: ನಿಂಬೆ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ಪ್ರಯಾಣದ ಸಮಯದಲ್ಲಿ ನಿಮಗೆ ವಾಂತಿ, ವಾಕರಿಕೆ ಮತ್ತು ಚಡಪಡಿಕೆಗೆ ಸಹಾಯ ಮಾಡುತ್ತದೆ. ನಿಮ್ಮ ವಸ್ತುಗಳೊಂದಿಗೆ ನಿಂಬೆಯನ್ನು ಇಟ್ಟುಕೊಳ್ಳಬೇಕು. ನಿಮಗೆ ಸಮಸ್ಯೆ ಹೆಚ್ಚಾದರೆ ಅದರ ರಸವನ್ನು ಸೇವಿಸಿ. ನೀವು ನೀರಿನ ಬಾಟಲಿಯಲ್ಲಿ ನಿಂಬೆ ಪಾನಕವನ್ನು ಸಹ ಇಟ್ಟುಕೊಳ್ಳಬಹುದು. ವಾಂತಿ ಮತ್ತು ತಲೆಸುತ್ತುವಿಕೆ ಬಂದಾಗ ಸೇವಿಸಿದರೆ ನಿಮಗೆ ರಿಲೀಫ್ ಸಿಗುತ್ತದೆ  

ಬಾಳೆಹಣ್ಣು: ನೀವು ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಆದರೆ ಪ್ರಯಾಣ ಮಾಡುವಾಗ ನಿಮ್ಮ ಚೀಲದಲ್ಲಿ ಒಂದೆರಡು ಬಾಳೆಹಣ್ಣು ಇರಿಸಿ. ಈ ಹಣ್ಣು ಪೊಟ್ಯಾಸಿಯಮ್ ಮರುಸ್ಥಾಪಿಸುವ ಗುಣವನ್ನು ಹೊಂದಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ವಾಂತಿಯನ್ನು ಹೋಗಲಾಡಿಸುತ್ತದೆ. ಲಾಂಗ್ ಡ್ರೈವ್‍ನಲ್ಲಿ ವಾಂತಿ ಅಥವಾ ತಲೆಸುತ್ತು ಬಂದರೆ ಬಾಳೆಹಣ್ಣು ತಿಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ

 ಶುಂಠಿ: ಶುಂಠಿಯು ಪಾಕವಿಧಾನಗಳ ರುಚಿ ಹೆಚ್ಚಿಸಲು ನಾವು ಬಳಸುವಂತಹ ಮಸಾಲೆಗಳಲ್ಲಿ ಒಂದಾಗಿದೆ. ಪ್ರಯಾಣದ ವೇಳೆ ನಿಮಗೆ ವಾಂತಿ ಸಮಸ್ಯೆ ಇದ್ದರೆ ಕೆಲವು ಶುಂಠಿ ತುಂಡುಗಳನ್ನು ನಿಮ್ಮ ಬ್ಯಾಗ್‍ನಲ್ಲಿರಿಸಿ. ಇದು ವಾಕರಿಕೆ ಮತ್ತು ತಲೆಸುತ್ತುವಿಕೆ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಅದೇ ರೀತಿ ಇದು ನಿಮ್ಮ ಹೊಟ್ಟೆಯ ಗ್ಯಾಸ್ ಸಮಸ್ಯೆಗೂ ಪರಿಹಾರ ನೀಡುತ್ತದೆ. ನಿಮಗೆ ಸಮಸ್ಯೆ ಹೆಚ್ಚಾದಾಗ ಹಸಿ ಶುಂಠಿಯನ್ನು ಜಗಿಯಿರಿ. ಬೇಕಿದ್ದರೆ ಶುಂಠಿ ಕ್ಯಾಂಡಿ, ಶುಂಠಿ ಟೀ, ಥರ್ಮಾಸ್ ಫ್ಲಾಸ್ಕ್ ನಲ್ಲಿ ಶುಂಠಿ ಬೆರೆಸಿದ ಬಿಸಿ ನೀರು ಕೂಡ ಇಟ್ಟುಕೊಳ್ಳಬಹುದು. ಇದು ಚಡಪಡಿಕೆಯಿಂದ ಉಪಶಮನ ನೀಡುತ್ತದೆ ಮತ್ತು ವಾಂತಿ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News