Ginger Oil For Bad Cholesterol - ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನದಲ್ಲಿ ಕೀಲು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇನ್ನೊಂದೆಡೆ, ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಇದನ್ನು ತಪ್ಪಿಸಲು, ಜನರಿಗೆ ಕೆಲ ತೈಲಗಳು ಸಾಕಷ್ಟು ನೆರವಾಗುತ್ತವೆ. ಇಂತಹುದೇ ತೈಲಗಳಲ್ಲಿ  ಶುಂಠಿ ಎಣ್ಣೆಯೂ ಕೂಡ ಒಂದು. ಶುಂಠಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಅದರ ಎಣ್ಣೆಗೂ ಕೂಡ ಇದು ಅನ್ವಯಿಸುತ್ತದೆ. ಶುಂಠಿ ಎಣ್ಣೆಯಿಂದಲೂ ನೀವು ಸಾಕಷ್ಟು ಪ್ರಯೋಜನ ಪಡೆಯುತ್ತೀರಿ. ಹಾಗಾದರೆ ಶುಂಠಿ ಎಣ್ಣೆಯು ಕೀಲು ನೋವನ್ನು ಹೇಗೆ ಗುಣಪಡಿಸುತ್ತದೆ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಶುಂಠಿಯನ್ನು ಹೇಗೆ ಬಳಸಬೇಕು?
ಕೀಲು ನೋವಿನಲ್ಲಿ ಶುಂಠಿ ಎಣ್ಣೆಯ ಬಳಕೆ ಬಳಕೆ ತುಂಬಾ ಪಯೋಜನಕಾರಿಯಾಗಿದೆ. ಈ ಎಣ್ಣೆಯಿಂದ ನೋವು ಇರುವ ಜಾಗದಲ್ಲಿ ನೀವು ಮಸಾಜ್ ಮಾಡಬಹುದು. ಇದಲ್ಲದೆ, ನೀವು ಶುಂಠಿ ಚಹಾವನ್ನು ಕುಡಿಯಬಹುದು. ನೀವು ಶುಂಠಿ ನೀರನ್ನು ಸಹ ಕುಡಿಯಬಹುದು. ಶುಂಠಿಯಲ್ಲಿ ಕಂಡುಬರುವ ಉರಿಯೂತದ ಸಂಯುಕ್ತವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಇದನ್ನು ನಿಯಮಿತವಾಗಿ ಬಳಸಿದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುವಿರಿ.

ಶುಂಠಿ ಎಣ್ಣೆಯನ್ನು ಹೇಗೆ ತಯಾರಿಸಬೇಕು?
ಶುಂಠಿ ಎಣ್ಣೆಯನ್ನು ತಯಾರಿಸಲು, ಮೊದಲನೆಯದಾಗಿ, ಶುಂಠಿಯನ್ನು ಚೆನ್ನಾಗಿ ತುರಿ ಮಾಡಿ. ಇದರ ನಂತರ, ತುರಿದ ಶುಂಠಿಯಲ್ಲಿ ಒಂದು ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಬಳಿಕ ಈ ಪೇಸ್ಟ್ ಅನ್ನು ಕುದಿಸಿದ ನಂತರ, ಪೇಸ್ಟ್ ಅನ್ನು ತಣ್ಣಗಾಗಲು ಬಿಡಿ ಮತ್ತು ತಣ್ಣಗಾದ ಗಾಜಿನ ಬಾಟಲಿಯಲ್ಲಿ ಅದನ್ನು ತುಂಬಿಸಿ.


ಇದನ್ನೂ ಓದಿ-Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್

ಈ ಎರಡು ರೋಗಗಳ ನಿವಾರಣೆಗೂ ಕೂಡ ಶುಂಠಿ ಎಣ್ಣೆ ಪ್ರಯೋಜನಕಾರಿಯಾಗಿದೆ
ಶುಂಠಿ ಎಣ್ಣೆಯಿಂದ ಹೃದಯದ ಅಪಾಯವೂ ಕಡಿಮೆಯಾಗುತ್ತದೆ. ಹೌದು, ಇದರ ಸೇವನೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ತನ್ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಂದರೆ ಹೃದಯವನ್ನು ಸದೃಢವಾಗಿಡಲು ಶುಂಠಿಯನ್ನು ಸೇವಿಸಬೇಕು. ಇದರ ಸೇವನೆಯಿಂದ ಒಂದಲ್ಲ ಹಲವಾರು ದೊಡ್ಡ ಪ್ರಯೋಜನಗಳನ್ನು ನೀವು ಪಡೆಯಬಹುದು. ಹೀಗಾಗಿ ಇಂದೇ ಇದನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ. ಏಕೆಂದರೆ ಇದರಿಂದ ನೀವು ಅಪಾರವಾದ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.


ಇದನ್ನೂ ಓದಿ-Skin Care Tips: 40ರ ವಯಸ್ಸಲ್ಲಿ 18ರ ಯುವತಿಯಂತೆ ಕಾಣಬೇಕೆ? ಈ ಉಪಾಯಗಳನ್ನು ಅನುಸರಿಸಿ

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.