Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್

Superbugs In US: ಕರೋನಾ ಸಾಂಕ್ರಾಮಿಕದ ನಡುವೆಯೇ, ಕೆಲವು ದಿನಗಳ ಹಿಂದೆ, ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಸೂಪರ್‌ಬಗ್‌ನಿಂದ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ ಅಧ್ಯಯನದಲ್ಲಿ ಈ ಬಗ್ಗೆ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.  

Written by - Nitin Tabib | Last Updated : Jan 2, 2023, 06:44 PM IST
  • ಸ್ಕಾಲರ್ ಅಕಾಡೆಮಿಕ್ ಜರ್ನಲ್ ಆಫ್ ಫಾರ್ಮಸಿಯ ವರದಿಯ ಪ್ರಕಾರ,
  • ಕಳೆದ 15 ವರ್ಷಗಳಲ್ಲಿ, ವಿಶ್ವಾದ್ಯಂತ ಪ್ರತಿಜೀವಕಗಳ ಬಳಕೆಯು ಶೇ.65 ರಷ್ಟು ಹೆಚ್ಚಾಗಿದೆ.
  • ಕರೋನಾ ಸಾಂಕ್ರಾಮಿಕ ರೋಗ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಿಂದ ಭಯಭೀತರಾಗಿರುವ ಜನರು ಈಗ ಸಾಮಾನ್ಯ ಶೀತ ಮತ್ತು ಕೆಮ್ಮಿನಲ್ಲೂ ಆಂಟಿಬಯೋಟಿಕ್‌ಗಳನ್ನು ಬಳಸುತ್ತಿದ್ದಾರೆ.
Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್  title=
Superbugs In World

Superbugs: ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಒಂದೆಡೆ, ಪ್ರತಿ ವರ್ಷ ಹೊಸ ರೂಪಾಂತರದೊಂದಿಗೆ, ಈ ಸಾಂಕ್ರಾಮಿಕ ರೋಗವು ಜನರನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ದುರ್ಬಲಗೊಳಿಸುತ್ತಿದೆ. ಮತ್ತೊಂದೆಡೆ, ಅಮೆರಿಕದಲ್ಲಿ ಮಾನವರಲ್ಲಿ ವೇಗವಾಗಿ ಹರಡುತ್ತಿರುವ ಸೂಪರ್‌ಬಗ್ ಇಡೀ ಜಗತ್ತನ್ನು ಮತ್ತೆ ಚಿಂತೆಗೀಡು ಮಾಡಿದೆ.

ಈ ಬ್ಯಾಕ್ಟೀರಿಯಾದ ಸೂಪರ್‌ಬಗ್ ಕಳೆದ ಕೆಲವು ವರ್ಷಗಳಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ದೊಡ್ಡ ಸವಾಲಾಗಿ ಹೊರಹೊಮ್ಮಿದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್-19 ಸೋಂಕು ಹೆಚ್ಚು ಅಪಾಯಕಾರಿಯಾಗುತ್ತಿದೆ. ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನವು ಈ ಸೂಪರ್‌ಬಗ್ ಇದೇ ಪ್ರಮಾಣದಲ್ಲಿ ಹರಡುವುದನ್ನು ಮುಂದುವರೆಸಿದರೆ, ಪ್ರತಿ ವರ್ಷ 10 ಮಿಲಿಯನ್ ಜನರು ಇದರಿಂದ ಮರಣ ಹೊಂದಬಹುದು ಎಂದು ಎಚ್ಚರಿಸಿದೆ.
ಪ್ರಸ್ತುತ, ಈ ಸೂಪರ್‌ಬಗ್‌ನಿಂದಾಗಿ, ವಿಶ್ವಾದ್ಯಂತೆ ಪ್ರತಿ ವರ್ಷ 1.3 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಲ್ಯಾನ್ಸೆಟ್‌ನ ಅಧ್ಯಯನವು ಪ್ರತಿಜೀವಕಗಳು ಮತ್ತು ಆಂಟಿಫಂಗಲ್ ಔಷಧಗಳು ಸಹ ಸೂಪರ್‌ಬಗ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬಹಿರಂಗಪಡಿಸಿದೆ. ಈ ಸೂಪರ್‌ಬಗ್ ಜಗತ್ತಿಗೆ ಹೊಸ ರೀತಿಯ ಬೆದರಿಕೆಯನ್ನು ತಂದೊಡ್ಡುತ್ತಿದೆಯೇ? ಬನ್ನಿ ತಿಳಿದುಕೊಳ್ಳೋಣ,

ಸೂಪರ್ ಬಗ್ ಎಂದರೇನು?
ಇದು ಬ್ಯಾಕ್ಟೀರಿಯಾದ ಒಂದು ರೂಪವಾಗಿದೆ. ಕೆಲವು ಬ್ಯಾಕ್ಟೀರಿಯಾಗಳು ಮಾನವ ಸ್ನೇಹಿಯಾಗಿದ್ದು ,ಕೆಲವು ಮನುಷ್ಯರಿಗೆ ತುಂಬಾ ಅಪಾಯಕಾರಿಯಾಗಿವೆ. ಈ ಸೂಪರ್‌ಬಗ್ ಮನುಷ್ಯರಿಗೆ ಅತ್ಯಂತ ಮಾರಕವಾಗಿದೆ. ಇದು ಬ್ಯಾಕ್ಟೀರಿಯಾ, ವೈರಸ್ ಮತ್ತು ಪರಾವಲಂಬಿಗಳ ತಳಿಯಾಗಿದೆ. ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಅಥವಾ ಪರಾವಲಂಬಿಗಳು ಕಾಲಾನಂತರದಲ್ಲಿ ಬದಲಾದಾಗ, ಔಷಧವು ಅವುಗಳ ಮೇಲೆ ಪರಿಣಾಮ ಬೀರುವುದನ್ನು ನಿಲ್ಲಿಸುತ್ತವೆ. ಇದು ಜನರಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಸೃಷ್ಟಿಸುತ್ತದೆ.

ಆಂಟಿಮೈಕ್ರೊಬಿಯಲ್ ಪ್ರತಿರೋಧದ ಹೊರಹೊಮ್ಮುವಿಕೆಯ ನಂತರ, ಆ ಸೋಂಕಿನ ಚಿಕಿತ್ಸೆಯು ತುಂಬಾ ಕಷ್ಟಕರವಾಗುತ್ತದೆ. ಸರಳವಾದ ಭಾಷೆಯಲ್ಲಿ ಅರ್ಥಮಾಡಿಕೊಂಡರೆ, ರೋಗಿಯ ದೇಹದಲ್ಲಿ ಇರುವ ಬ್ಯಾಕ್ಟೀರಿಯಾ, ವೈರಸ್ ಮತ್ತು ಪರಾವಲಂಬಿಗಳ ಮುಂದೆ ಔಷಧವು ನಿಷ್ಪರಿಣಾಮಕಾರಿಯಾದಾಗ ಅಂತಹ ಪರಿಸ್ಥಿತಿಯನ್ನು ಸೂಪರ್ಬಗ್ ಎಂದು ಕರೆಯಲಾಗುತ್ತದೆ.

ಯಾವುದೇ ಆ್ಯಂಟಿಬಯೋಟಿಕ್ ಔಷಧದ ಅತಿಯಾದ ಬಳಕೆ ಅಥವಾ ಆ್ಯಂಟಿಬಯೋಟಿಕ್ ಔಷಧವನ್ನು ಅನಗತ್ಯವಾಗಿ ಬಳಸುವುದರಿಂದ ಸೂಪರ್‌ಬಗ್‌ಗಳು ಉತ್ಪತ್ತಿಯಾಗುತ್ತವೆ. ವೈದ್ಯರ ಪ್ರಕಾರ, ಜ್ವರದಂತಹ ವೈರಲ್ ಸೋಂಕಿನ ಸಂದರ್ಭದಲ್ಲಿ ಪ್ರತಿಜೀವಕಗಳನ್ನು ತೆಗೆದುಕೊಳ್ಳುವುದರಿಂದ, ಸೂಪರ್‌ಬಗ್‌ಗಳಾಗುವ ಹೆಚ್ಚಿನ ಅವಕಾಶಗಳಿವೆ, ಅದು ಕ್ರಮೇಣ ಇತರ ಮಾನವರಿಗೂ ಸೋಂಕು ತರುತ್ತದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ, ನಮ್ಮ ದೇಶದಲ್ಲಿ ನ್ಯುಮೋನಿಯಾ ಮತ್ತು ಸೆಪ್ಟಿಸೆಮಿಯಾ ಚಿಕಿತ್ಸೆಗೆ ಬಳಸಲಾಗುವ ಕಾರ್ಬಪೆನೆಮ್ ಔಷಧಗಳು ಈಗ ಬ್ಯಾಕ್ಟೀರಿಯಾದ ಮೇಲೆ ನಿಷ್ಪರಿಣಾಮಕಾರಿಯಾಗಿ ಮಾರ್ಪಟ್ಟಿವೆ. ಈ ಕಾರಣದಿಂದಾಗಿ, ಈ ಔಷಧಿಗಳ ತಯಾರಿಕೆಯನ್ನು ನಿಷೇಧಿಸಲಾಗಿದೆ.

ಈ ಅಪಾಯಕಾರಿ ಸುಪರ್ ಬಗ್ ಹೇಗೆ ಹರಡುತ್ತದೆ?
ಚರ್ಮದ ಸಂಪರ್ಕ, ಗಾಯಗಳು, ಲಾಲಾರಸ ಮತ್ತು ಲೈಂಗಿಕ ಸಂಪರ್ಕದ ಮೂಲಕ ಸೂಪರ್‌ಬಗ್‌ಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತವೆ. ಸೂಪರ್‌ಬಗ್ ಮಾನವನ ದೇಹದಲ್ಲಿ ಒಮ್ಮೆ, ಔಷಧಿಗಳು ರೋಗಿಯ ಮೇಲೆ ಪರಿಣಾಮ ಬೀರುವುದನ್ನು ನಿಲ್ಲಿಸುತ್ತವೆ. ಸೂಪರ್‌ಬಗ್‌ಗಳಿಗೆ ಪ್ರಸ್ತುತ ಯಾವುದೇ ಔಷಧವಿಲ್ಲ, ಆದರೆ ಸರಿಯಾದ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ತಡೆಯಬಹುದು.

ಕರೋನಾ ಮತ್ತು ಸೂಪರ್‌ಬಗ್‌ನ ಜಂಟಿಯಾಗಿ ಕೋಲಾಹಲವನ್ನೇ ಸೃಷ್ಟಿಸಿವೆ
ಲ್ಯಾನ್ಸೆಟ್ ಕೆಲವು ದಿನಗಳ ಹಿಂದೆ ಕರೋನಾ ಸಾಂಕ್ರಾಮಿಕದ ನಡುವೆ ಸೂಪರ್‌ಬಗ್‌ನಿಂದ ಸಾವನ್ನಪ್ಪಿದವರ ಬಗ್ಗೆ ಅಧ್ಯಯನ ನಡೆಸಿದೆ. ವರದಿಯ ಪ್ರಕಾರ, 2021 ರಲ್ಲಿ, ICMR 10 ಆಸ್ಪತ್ರೆಗಳಲ್ಲಿ ಅಧ್ಯಯನವನ್ನು ನಡೆಸಿತ್ತು ಮತ್ತು ಕರೋನವೈರಸ್ ನಂತರ ಜನರು ಹೆಚ್ಚು ಪ್ರತಿಜೀವಕಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ಕಂಡುಹಿಡಿದಿದೆ.

ಪ್ರತಿಜೀವಕಗಳು ಮತ್ತು ಸೂಪರ್‌ಬಗ್‌ಗಳ ಅತಿಯಾದ ಬಳಕೆಯಿಂದಾಗಿ ಪರಿಸ್ಥಿತಿಯು ಹದಗೆಟ್ಟಿದೆ. ಕರೋನಾ ಸೋಂಕಿಗೆ ಒಳಗಾದ ಶೇಕಡಾ 50 ಕ್ಕಿಂತ ಹೆಚ್ಚು ಕೋವಿಡ್ ರೋಗಿಗಳು ಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಾವನ್ನಪ್ಪಿದ್ದಾರೆ. ಅಧ್ಯಯನದ ಪ್ರಕಾರ, ಜಗತ್ತಿನಲ್ಲಿ ಆ್ಯಂಟಿಬಯೋಟಿಕ್‌ಗಳ ಬಳಕೆಯು ಈ ಪ್ರಮಾಣದಲ್ಲಿ ಹೆಚ್ಚುತ್ತಲೇ ಹೋದರೆ, ವೈದ್ಯಕೀಯ ವಿಜ್ಞಾನದ ಎಲ್ಲಾ ಪ್ರಗತಿಯು ಶೂನ್ಯವಾಗುತ್ತದೆ.

ಆ್ಯಂಟಿಬಯೋಟಿಕ್ ಬಳಕೆ ಹೆಚ್ಚುತ್ತಿದೆ
ಸ್ಕಾಲರ್ ಅಕಾಡೆಮಿಕ್ ಜರ್ನಲ್ ಆಫ್ ಫಾರ್ಮಸಿಯ ವರದಿಯ ಪ್ರಕಾರ, ಕಳೆದ 15 ವರ್ಷಗಳಲ್ಲಿ, ವಿಶ್ವಾದ್ಯಂತ ಪ್ರತಿಜೀವಕಗಳ ಬಳಕೆಯು ಶೇ.65 ರಷ್ಟು ಹೆಚ್ಚಾಗಿದೆ. ಕರೋನಾ ಸಾಂಕ್ರಾಮಿಕ ರೋಗ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಿಂದ ಭಯಭೀತರಾಗಿರುವ ಜನರು ಈಗ ಸಾಮಾನ್ಯ ಶೀತ ಮತ್ತು ಕೆಮ್ಮಿನಲ್ಲೂ ಆಂಟಿಬಯೋಟಿಕ್‌ಗಳನ್ನು ಬಳಸುತ್ತಿದ್ದಾರೆ. ಈ ಸೂಪರ್‌ಬಗ್‌ನಿಂದಾಗಿ ಅಮೆರಿಕವು $ 5 ಬಿಲಿಯನ್ ನಷ್ಟವನ್ನು ಅನುಭವಿಸುತ್ತಿದೆ.

ಆಂಟಿಬಯೋಟಿಕ್ ಮಿತಿಮೀರಿದ ಸೇವನೆ ಅಪಾಯಕಾರಿ!
ಲ್ಯಾನ್ಸೆಟ್‌ನ ಇದೇ ಅಧ್ಯಯನದಲ್ಲಿ, ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗಳಲ್ಲಿ ಇರುವ ರೋಗಿಗಳು AMR ನ ಹೊರೆಯನ್ನು ಹೇಗೆ ಹೆಚ್ಚಿಸಿದ್ದಾರೆ ಎಂಬುದನ್ನು ಹೇಳಲಾಗಿದೆ. ಇದಕ್ಕೆ ಒಂದು ಕಾರಣವೆಂದರೆ ಕರೋನಾ ಚಿಕಿತ್ಸೆಯ ಸಮಯದಲ್ಲಿ ಹೆಚ್ಚಿನ ರೋಗಿಗಳಿಗೆ ಪ್ರತಿಜೀವಕಗಳನ್ನು ನೀಡಲಾಗಿತ್ತು.

ಇದನ್ನೂ ಓದಿ-Diabetes: ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ ಜಾಮೂನ್ ವಿನೆಗಾರ್

ಸೂಪರ್‌ಬಗ್‌ಗಳಿಂದ ಯಾವ ರೋಗಗಳು ಉಂಟಾಗುತ್ತವೆ
2021 ರಲ್ಲಿ, ಅಮೆರಿಕಾದಲ್ಲಿ 10 ಕ್ಕೂ ಹೆಚ್ಚು ಸಂಶೋಧನೆಗಳು ಸೂಪರ್‌ಬಗ್‌ಗಳಿಂದ ಅಕಾಲಿಕ ಜನನದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದನ್ನು ಪತ್ತೆಹಚ್ಚಿವೆ. ಮತ್ತೊಂದೆಡೆ, ಪುರುಷರಿಗೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳಿವೆ. ಆದಾಗ್ಯೂ, ಮಾನವರಲ್ಲಿ ಇದರ ದೀರ್ಘಾವಧಿಯ ಅಡ್ಡಪರಿಣಾಮಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ-Health Tips: ಖಾಲಿ ಹೊಟ್ಟೆ ಈ ಜ್ಯೂಸ್ ಸೇವಿಸಿ, ಆರೋಗ್ಯಕ್ಕೆ ಹಲವು ಲಾಭಗಳಿವೆ

ಸೂಪರ್‌ಬಗ್  ಪ್ರಕೊಪದಿಂದ ಪಾರಾಗುವುದು ಹೇಗೆ?
>> ಸೂಪರ್‌ಬಗ್‌ಗಳನ್ನು ತಪ್ಪಿಸಲು, ಮೊದಲು ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ.
>> ಕೈ ಶುಚಿಗೊಳಿಸಲು ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
>> ಆಹಾರ ಪದಾರ್ಥಗಳನ್ನು ಸ್ವಚ್ಛ ಸ್ಥಳದಲ್ಲಿ ಇರಿಸಿ.
>> ಆಹಾರವನ್ನು ಸರಿಯಾಗಿ ಬೇಯಿಸಿ ಮತ್ತು ಅದಕ್ಕಾಗಿ ಶುದ್ಧ ನೀರನ್ನು ಬಳಸಿ.
>> ಅನಾರೋಗ್ಯದಿಂದ ಬಳಲುತ್ತಿರುವ ಜನರೊಂದಿಗೆ ಸಂಪರ್ಕವನ್ನು ತಪ್ಪಿಸಿ.
>> ವೈದ್ಯರನ್ನು ಸಂಪರ್ಕಿಸಿದ ನಂತರವೇ ಯಾವುದೇ ಪ್ರತಿಜೀವಕಗಳ ಬಳಕೆ ಮಾಡಿ.
>> ಇತರರೊಂದಿಗೆ ಪ್ರತಿಜೀವಕಗಳನ್ನು ಹಂಚಿಕೊಳ್ಳಬೇಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News