ನವದೆಹಲಿ : ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿರುತ್ತದೆ.  ಆದರೆ ಬೇಸಿಗೆಯ ದಿನಗಳಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ಸೊಳ್ಳೆಗಳು  ಹೆಚ್ಚಾಗಿರುತ್ತವೆ.  ಸೊಳ್ಳೆ ಕಚ್ಚಿದರೆ ಡೆಂಗ್ಯೂ (Dengue), ಮಲೇರಿಯಾ, ಚಿಕುನ್ ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ. ಆದ್ದರಿಂದ, ನಿಮ್ಮ ಕುಟುಂಬ ಸದಸ್ಯರನ್ನು ಸೊಳ್ಳೆಗಳಿಂದ ರಕ್ಷಿಸುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

 ಮನೆ ಸುತ್ತ  ಈ ಗಿಡಗಳನ್ನು ನೆಟ್ಟು ಮಾಡಿ :   
ಸೊಳ್ಳೆಗಳ  (Mosquito) ಕಾಟ ತಪ್ಪಿಸಲು ಲೋಷನ್ ಗಳು , ಕ್ರೀಮ್ ಗಳು, ಮಾರುಕಟ್ಟೆಯಲ್ಲಿ ಸಿಗುತ್ತವೆ.  ಆದರೆ ಇವೆಲ್ಲವೂ ಚರ್ಮದ ಮೇಲೆ  ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಾಗಿ ಸೊಳ್ಳೆಗಳ ಕಾಟವನ್ನು ತಪ್ಪಿಸುವ ಸಲುವಾಗಿ ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುವುದು ಉತ್ತಮ. ಅಂತಹ ಒಂದು ವಿಧಾನವೆಂದರೆ ಸಸ್ಯಗಳು.


ಇದನ್ನೂ ಓದಿ : Guvava Leaves Tea: ಪೇರಳೆ ಹಣ್ಣಿನ ಎಳೆಗಳ ಈ ಪೇಯ ಬೊಜ್ಜು ನಿವಾರಕ


ಹೌದು, ಸೊಳ್ಳೆಗಳನ್ನು ನೈಸರ್ಗಿಕವಾಗಿ ಹೋಗಲಾಡಿಸುವಂತಹ ಸಸ್ಯಗಳು ಯಾವುವು ನೋಡೋಣ : 


1.ಚೆಂಡು ಹೂವು : ಚೆಂಡು ಹೂವು ಎಲ್ಲಾ ಕಾಲದಲ್ಲೂ ಅರಳುತ್ತದೆ.  ಈ ಹೂವಿನ (Flower) ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡುತ್ತಿದೆ. ಈ ಕಾರಣದಿಂದ ಸೊಳ್ಳೆಗಳು ಈ ಸಸ್ಯದಿಂದ ದೂರವಿರುತ್ತದೆ. ಈ ಸಸಿಯನ್ನು ನೆಟ್ಟರೆ ಹೂ ಅರಳಿ ನಿಂತಾಗ ಮನೆಯ ಸೌಂದರ್ಯವು ಹೆಚ್ಚುತ್ತದೆ.  ಸೊಳ್ಳೆ ಕಾಟದಿಂದ ಮುಕ್ತಿ ಕೂಡಾ ಸಿಗುತ್ತದೆ. ಇನ್ನು ಬೇಕಾದರೆ ಈ ಸಸ್ಯದ ಕುಂಡವನ್ನು ಮನೆಯ ಹೊಸ್ತಿಲಲ್ಲಿಟ್ಟರೆ ಸೊಳ್ಳೆ ಮನೆ ಒಳಗೆ ಬರುವುದನ್ನು ತಪ್ಪಿಸಬಹುದು.   



2. ಲ್ಯಾವೆಂಡರ್ ಸಸ್ಯ : ಈ  ಸಸಿಯ ಸುತ್ತ ಸೊಳ್ಳೆಗಳು ಮಾತ್ರವಲ್ಲ, ಕೀಟಗಳು, ಮೊಲಗಳಂತಹ ಪ್ರಾಣಿಗಳು ಕೂಡ ಬರುವುದಿಲ್ಲ.  ಲ್ಯಾವೆಂಡರ್ (Lavender) ಸಸ್ಯದ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ ಸುಗಂಧ ಹೊರ ಹೊಮ್ಮುತ್ತದೆ.  ಈ ಸುಗಂಧದ ಕಾರಣದಿಂದ ಸೊಳ್ಳೆಗಳು ಈ ಸಸಿ ಸುತ್ತ ಬರುವುದಿಲ್ಲ. ಈ ಸಸ್ಯಕ್ಕೆ ಹೆಚ್ಚಿನ ನೀರು (water) ಕೂಡ ಅಗತ್ಯವಿಲ್ಲ ಮತ್ತು ಅದು ಹೆಚ್ಚು ಕಾಲ ಹಾಳಾಗುವುದಿಲ್ಲ.


ಇದನ್ನೂ ಓದಿ : Spring Onion : ಈ ಆರು ಕಾರಣಕ್ಕೆ ಈರುಳ್ಳಿ ಸೊಪ್ಪು ಚೆನ್ನಾಗಿ ತಿನ್ನಿ.


3. ರೋಸ್ ಮೇರಿ ಸಸ್ಯ :  ಮತ್ತೊಂದು ನೈಸರ್ಗಿಕ ಸೊಳ್ಳೆ ನಿವಾರಕ ಸಸ್ಯ ರೋಸ್ಮರಿ (Rosemary).  ಇದನ್ನು ಗುಲ್  ಮೆಹೆಂದಿ ಅಂತಲೂ ಕರೆಯುತ್ತಾರೆ. ಈ ಸಸ್ಯದಿಂದ ಕೂಡಾ ಹೊರ ಬರುವ ವಿಶೇಷ ಪರಿಮಳದ ಕಾರಣದಿಂದ ಸೊಳ್ಳೆಗಳು, ನೊಣ (House fly) ಮತ್ತು ಇತರ ಅನೇಕ ಕೀಟಗಳಿಂದ ದೂರ ಓಡುತ್ತವೆ.  


4. ಕ್ಯಾಟ್ನಿಪ್ ಸಸ್ಯ : ಅನೇಕ ಸ್ಥಳಗಳಲ್ಲಿ ಕ್ಯಾಟ್ಮಿಂಟ್  (Catmint) ಎಂದೂ ಕರೆಯಲ್ಪಡುವ ಕ್ಯಾಟ್ನಿಪ್ ಸಸ್ಯವು ಪುದೀನ ಜಾತಿಗೆ ಸೇರಿದೆ. ಇದು ಎಲ್ಲಿ ಬೇಕಾದರೂ ಸುಲಭವಾಗಿ ಬೆಳೆಯುತ್ತದೆ. ಅಮೆರಿಕಾದ Iowa ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಸಿದ ಅಧ್ಯಯನವು ಸೊಳ್ಳೆಗಳನ್ನು ರಕ್ಷಿಸುವಲ್ಲಿ ಕ್ಯಾಟ್ಮಿಂಟ್ ಸಸ್ಯವು DEET ಗಿಂತ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. DEET ಮಾಸ್ಕಿಟೋ ರಿಪೆಲೆಂಟ್ ನಲ್ಲಿ ಬಳಸುವ ರಾಸಾಯನಿಕವಾಗಿದೆ. 


ಇದನ್ನೂ ಓದಿ : Tulsi :ಅಮೃತ ಸಮಾನ ಈ ತುಳಸಿ ರಸ..! ತಿಳಿಯಿರಿ ಆರೋಗ್ಯಕ್ಕೇನು ಲಾಭ.!


5. ತುಳಸಿ ಮತ್ತು ಪುದೀನ  ಗಿಡ : ಸೊಳ್ಳೆಗಳನ್ನು ಮನೆಯಿಂದ ದೂರವಿರಿಸಲು ತುಳಸಿ (Tulsi) ಮತ್ತು ಪುದೀನ ಸಸಿ ಕೂಡಾ ಸಹಾಯ ಮಾಡುತ್ತದೆ. ತುಳಸಿ ಎಲೆಗಳ ತೀವ್ರವಾದ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಪುದೀನ (Pudina) ಸಸ್ಯವು ಸೊಳ್ಳೆಗಳು, ನೊಣಗಳು ಮತ್ತು ಇರುವೆಗಳನ್ನು ಸಹಾ ಮನೆಯಿಂದ ದೂರವಿರಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.