Tulsi :ಅಮೃತ ಸಮಾನ ಈ ತುಳಸಿ ರಸ..! ತಿಳಿಯಿರಿ ಆರೋಗ್ಯಕ್ಕೇನು ಲಾಭ.!

ತುಳಸಿ ನೀರನ್ನು ಕುಡಿದರೆ  ದೇಹದ ಚಯಾಪಚಯ ಕ್ರಿಯೆ ಪ್ರಬಲವಾಗುತ್ತದೆ. ಇದರಿಂದ  ರಕ್ತದಲ್ಲಿನ ಸಕ್ಕರೆ ಮಟ್ಟ ಕಂಟ್ರೊಲಿಗೆ ಬರುತ್ತದೆ.  ಇದು ದೇಹದಲ್ಲಿರುವ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

Written by - Ranjitha R K | Last Updated : Mar 12, 2021, 09:14 AM IST
  • ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಬೃಂದಾವನವಿರುತ್ತದೆ.
  • ತುಳಸಿ ನಮಗೆ ದೇವರು. ತುಳಸಿಗೆ ನಿತ್ಯ ಪೂಜೆ ಸಲ್ಲುತ್ತದೆ.
  • ಆಯುರ್ವೇದದಲ್ಲೂ ತುಳಸಿಗೆ ಸಾಕಷ್ಟು ಮಹತ್ವ ಇದೆ.
Tulsi :ಅಮೃತ ಸಮಾನ  ಈ ತುಳಸಿ ರಸ..! ತಿಳಿಯಿರಿ ಆರೋಗ್ಯಕ್ಕೇನು ಲಾಭ.! title=
ಆಯುರ್ವೇದದಲ್ಲೂ ತುಳಸಿಗೆ ಸಾಕಷ್ಟು ಮಹತ್ವ ಇದೆ. (file photo)

ಬೆಂಗಳೂರು : ಭಾರತದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಬೃಂದಾವನವಿರುತ್ತದೆ. ತುಳಸಿ ನಮಗೆ ದೇವರು. ತುಳಸಿಗೆ ನಿತ್ಯ ಪೂಜೆ ಸಲ್ಲುತ್ತದೆ.  ಆಯುರ್ವೇದದಲ್ಲೂ (Ayurveda) ತುಳಸಿಗೆ ಸಾಕಷ್ಟು ಮಹತ್ವ ದೆ. ಪ್ರತಿದಿನ ಬೆಳಿಗ್ಗೆ ಬೆಳಿಗ್ಗೆ ಎದ್ದು ತುಳಸಿ ರಸ ಸೇವಿಸಿದರೆ, ಆರೋಗ್ಯಕ್ಕೆ ಹಲವು ಲಾಭ  ಇದೆ. 

ತುಳಸಿ ನೀರು ಒತ್ತಡ ನಿವಾರಕ :
 ತುಳಸಿಯಲ್ಲಿ (Tulsi) ಕಾರ್ಟಿಸೋಲ್ (Cortisole) ಎಂಬ ಹಾರ್ಮೋನುಗಳಿವೆ. ಅದು ಒತ್ತಡವನ್ನು ಕಡಿಮೆ ಮಾಡುತ್ತದೆ. ತುಳಸಿ ನೀರು ಕುಡಿಯುವುದರಿಂದ ಟೆನ್ಶನ್ (Tension) ಮತ್ತು ಖಿನ್ನತೆ (Depression) ಕಡಿಮೆಯಾಗುತ್ತದೆ. 

ಇದನ್ನೂ ಓದಿ : Termeric Benefits : ಅರಸಿನ, ಲಿಂಬೆಯನ್ನು ಹೀಗೆ ಬಳಸಿ! ಆರೋಗ್ಯಕ್ಕೆ ಎಷ್ಟು ಹಿತಕಾರಿ ನೋಡಿ.!

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ: 
ತುಳಸಿ ನೀರನ್ನು ಕುಡಿದರೆ  ದೇಹದ ಚಯಾಪಚಯ ಕ್ರಿಯೆ ಪ್ರಬಲವಾಗುತ್ತದೆ. ಇದರಿಂದ  ರಕ್ತದಲ್ಲಿನ ಸಕ್ಕರೆ ಮಟ್ಟ ಕಂಟ್ರೊಲಿಗೆ ಬರುತ್ತದೆ.  ಇದು ದೇಹದಲ್ಲಿರುವ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಅಂದರೆ, ಮಧುಮೇಹಿಗಳಿಗೆ (diabetic) ತುಳಸಿ ರಸ ಬಹಳ ಒಳ್ಳೆಯದು. 

ಅಸ್ತಮಾ ಕಾಯಿಲೆಗೆ ರಾಮಬಾಣ :
ತುಳಸಿ ನೀರು ಆಸ್ತಮಾ, ಉಸಿರಾಟದ ತೊಂದರೆ ಮತ್ತು  ಶೀತದಂತಹ ಕಾಯಿಲೆಗಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ತುಳಸಿ ಎಕ್ಸ್‌ಪೆಕ್ಟೊರೆಂಟ್, ಆಂಟಿಟಸ್ಸಿವ್ ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಆಸ್ತಮಾದಂತಹ ರೋಗವನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಚಳಿಗಾಲದ ಲ್ಲಿ (winter) ತುಳಸಿಯ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಹೇಳುತ್ತಾರೆ. 

ಇದನ್ನೂ ಓದಿ : Desi Ghee Health Benefits - ಆರೋಗ್ಯದ ಜೊತೆಗೆ ಕೂದಲಿಗೂ ಕೂಡ ಲಾಭಕಾರಿ ದೇಸಿ ತುಪ್ಪ

ಬೊಜ್ಜು ಕರಗಿಸುತ್ತದೆ :
ತುಳಸಿ ನಿಮ್ಮ ಬೊಜ್ಜು (fat)ಕರಗಿಸಲು ನೆರವಾಗುತ್ತದೆ . ತೂಕ ಇಳಿಸಲು ಕಾರಣವಾಗುವ ನೈಸರ್ಗಿಕ ರಾಸಾಯನಿಕಗಳು ತುಳಸಿಯಲ್ಲಿ ಕಂಡುಬರುತ್ತವೆ. ನಿಯಮಿತವಾಗಿ ತುಳಸಿ ನೀರನ್ನು ಕುಡಿಯಲು ಪ್ರಾರಂಭಿಸಿದರೆ, ಅದು ನಿಮ್ಮ ತೂಕವನ್ನು ಸಹ ಕಡಿಮೆ (weight loss) ಮಾಡುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು :
ತುಳಸಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ (Constipation) ನಿವಾರಿಸುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಬೆಳಗ್ಗೆ ಎದ್ದು ಒಂದು ಲೋಟಕ್ಕೆ ಸ್ವಲ್ಪ ತುಳಸಿ ರಸ ಸೇರಿಸಿ ಕುಡಿದರೆ ತುಂಬಾ ಒಳ್ಳೆಯದು. 

ಇದನ್ನೂ ಓದಿ : Helth Tips: ನಿತ್ಯ ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿರುವ ನೀರು ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ

ದೇಹದ ಶಕ್ತಿ ವರ್ಧಕ :
ತುಳಸಿ ರಸ ದೇಹಕ್ಕೆ ಶಕ್ತಿ ತುಂಬುತ್ತದೆ.  ಇದು ಸೋಮಾರಿತನ,  ಒತ್ತಡ ನಿವಾರಿಸುತ್ತದೆ. ದೇಹದ ವಿಕ್ನೆಸ್ ಕಡಿಮೆ ಮಾಡುತ್ತದೆ. 

ಬೆಳಗ್ಗೆ ಎದ್ದು ಒಂದು ಲೋಟ ನೀರಿಗೆ ನಾಲ್ಕೈದು ಡ್ರಾಪ್ ತುಳಸಿ ರಸ ಸೇರಿಸಿ ಕುಡಿದರೆ ಆರೋಗ್ಯಕ್ಕೆ (health) ತುಂಬಾ ಹಿತ  ಎಂದು ಆರೋಗ್ಯತಜ್ಞರು ಹೇಳುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News