Spring Onion : ಈ ಆರು ಕಾರಣಕ್ಕೆ ಈರುಳ್ಳಿ ಸೊಪ್ಪು ಚೆನ್ನಾಗಿ ತಿನ್ನಿ.

ಈರುಳ್ಳಿ ಸೊಪ್ಪಿನಲ್ಲಿ ಸಾಕಷ್ಟುಪ್ರಮಾಣದಲ್ಲಿ ಸಲ್ಫರ್ ಇರುತ್ತದೆ. ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ಸಲ್ಪರ್ ಸಾಕಷ್ಟು ಪ್ರಯೋಜನಕಾರಿ. ಈರುಳ್ಳಿ ಸೊಪ್ಪಿನಲ್ಲಿರು ಸಲ್ಫರಲ್ಲಿ ಅಲೈಲ್ ಸಲ್ಫೈಡ್  ಮತ್ತು ಫ್ಲವೊನಾಯಿಡ್ಸ್  ಎಂಬ ಅಂಶಗಳಿವೆ. ಇವು ಕ್ಯಾನ್ಸರ್‍ನಿಂದ ನಮ್ಮನ್ನು ರಕ್ಷಿಸುತ್ತವೆ. 

Written by - Ranjitha R K | Last Updated : Mar 15, 2021, 05:22 PM IST
  • ಖಾದ್ಯಗಳಿಗೆ ಈರುಳ್ಳಿ ಸೊಪ್ಪು ಹಾಕುವುದನ್ನು ನೀವು ಖಂಡಿತಾ ನೋಡಿರುತ್ತೀರಿ.
  • ಚೈನೀಸ್ ಅಡುಗೆಯಲ್ಲಿ ಈರುಳ್ಳಿ ಸೊಪ್ಪಿನ ಬಳಕೆ ಅತ್ಯಂತ ಹೆಚ್ಚು.
  • ಆರೋಗ್ಯ ಕಾಪಾಡುವಲ್ಲಿ ಈರುಳ್ಳಿ ಸೊಪ್ಪಿನ ಆರು ಪ್ರಯೋಜನಗಳ ಬಗ್ಗೆ ನೊಡೋಣ
Spring Onion : ಈ ಆರು ಕಾರಣಕ್ಕೆ ಈರುಳ್ಳಿ ಸೊಪ್ಪು ಚೆನ್ನಾಗಿ ತಿನ್ನಿ.  title=
ಚೈನೀಸ್ ಅಡುಗೆಯಲ್ಲಿ ಈರುಳ್ಳಿ ಸೊಪ್ಪಿನ ಬಳಕೆ ಅತ್ಯಂತ ಹೆಚ್ಚು. (file photo)

ಬೆಂಗಳೂರು : ಪ್ರೈಡ್ ರೈಸ್, ಸಾಂಬಾರ್ ಇತ್ಯಾದಿ ಖಾದ್ಯಗಳಿಗೆ ಈರುಳ್ಳಿ ಸೊಪ್ಪು (spring onion) ನ್ನು ನೀವು ಖಂಡಿತಾ ನೋಡಿರುತ್ತೀರಿ. ಚೈನೀಸ್ ಅಡುಗೆಯಲ್ಲಿ ಈರುಳ್ಳಿ ಸೊಪ್ಪಿನ ಬಳಕೆ ಅತ್ಯಂತ ಹೆಚ್ಚು.  ಈರುಳ್ಳಿ ಸೊಪ್ಪು,  ಅಡುಗೆಯ ರುಚಿ ಖಂಡಿತಾ ಹೆಚ್ಚಿಸುತ್ತದೆ.  ಆದರೆ, ಅದರ ಆರೋಗ್ಯದಲ್ಲಿ (health) ಅದರ ಮಹತ್ವ ಬಹಳಷ್ಟು ಜನರಿಗೆ ಖಂಡಿತಾ ಗೊತ್ತಿಲ್ಲ. ಈರುಳ್ಳಿ ಸೊಪ್ಪಿನಲ್ಲಿ ಕಾರ್ಬೊಹೈಡ್ರೇಟ್, ವಿಟಮಿನ್, ಪ್ರೊಟೀನ್, ಸಲ್ಫರ್ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ. 

ಇವತ್ತು ಆರೋಗ್ಯ ಕಾಪಾಡುವಲ್ಲಿ ಈರುಳ್ಳಿ ಸೊಪ್ಪಿನ ಆರು ಪ್ರಯೋಜನಗಳ  ಬಗ್ಗೆ ನೊಡೋಣ. 

1.  ಕ್ಯಾನ್ಸರ್ ಅಪಾಯದಿಂದ ರಕ್ಷಣೆ
ನಿಮಗೆ ಗೊತ್ತಿರಲಿ. ಈರುಳ್ಳಿ ಸೊಪ್ಪಿನಲ್ಲಿ (Spring onion) ಸಾಕಷ್ಟುಪ್ರಮಾಣದಲ್ಲಿ ಸಲ್ಫರ್ ಇರುತ್ತದೆ. ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ಸಲ್ಪರ್ ಸಾಕಷ್ಟು ಪ್ರಯೋಜನಕಾರಿ. ಈರುಳ್ಳಿ ಸೊಪ್ಪಿನಲ್ಲಿರುವ  ಸಲ್ಫರಲ್ಲಿ ಅಲೈಲ್ ಸಲ್ಫೈಡ್ (allyl sulphide) ಮತ್ತು ಫ್ಲವೊನಾಯಿಡ್ಸ್  (flavonoids)  ಎಂಬ ಅಂಶಗಳಿವೆ. ಇವು ಕ್ಯಾನ್ಸರಿಂದ  (Cancer) ನಮ್ಮನ್ನು ರಕ್ಷಿಸುತ್ತವೆ. ಅಲ್ಲದೆ, ಕ್ಯಾನ್ಸರ್ ಕಾರಕ ಕೋಶಗಳನ್ನು ಆರಂಭದಲ್ಲೇ ಕೊಲ್ಲುತ್ತವೆ. 

2. ಡಯಾಬಿಟಿಸ್ ರೋಗಿಗಳು ತಿನ್ನಲೇಬೇಕು.
ಮೊದಲೇ ಹೇಳಿದ್ದೇವೆ. ಈರುಳ್ಳಿ ಸೊಪ್ಪಿನಲ್ಲಿ ಸಲ್ಫರ್ ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಸಲ್ಪರ್ ಕಾರಣದಿಂದ ದೇಹದಲ್ಲಿ ಇನ್‍ಸುಲಿನ್ ಉತ್ಪಾದನೆ ಹೆಚ್ಚಾಗುತ್ತದೆ. ಇದು ಡಯಾಬಿಟಿಸ್‍ನಿಂದ (Diabetes) ನಮ್ಮನ್ನು ರಕ್ಷಿಸುತ್ತದೆ. 

ಇದನ್ನೂ ಓದಿ : ನಿತ್ಯ Mouthwash ಬಳಸುವವರು ತಪ್ಪದೇ ಈ ಸುದ್ದಿ ಓದಿ

3. ಹೊಟ್ಟೆ ಹಸಿವು ಹೆಚ್ಚಿಸುತ್ತದೆ.
ಈರುಳ್ಳಿ ಸೊಪ್ಪಿನಲ್ಲಿ ಸಾಕಷ್ಟು ಫೈಬರ್ (Fiber) ಇರುತ್ತದೆ. ಫೈಬರ್ ಇದ್ದಾಗ ಜೀರ್ಣಕ್ರೀಯೆ ಚೆನ್ನಾಗಿ ಆಗುತ್ತದೆ. ಜೀರ್ಣ ಕ್ರಿಯೆ ಸರಾಗವಾದಾಗ ಹೊಟ್ಟೆ ಹಸಿವು  ನ್ಯಾಚುರಲ್ ಆಗಿ ಹೆಚ್ಚಾಗುತ್ತದೆ. 

4. ಕಣ್ಣುಗಳ ಆರೋಗ್ಯಕ್ಕೆ ಹಿತಕಾರಿ :
ನಿಮಗೆ ಗೊತ್ತಿರಲಿ, ಈರುಳ್ಳಿ ಸೊಪ್ಪಿನಲ್ಲಿ ಕ್ಯಾರೋಟೆನಾಯಿಡ್ (carotenoids ) ಎಂಬ ಅಂಶ ಇರುತ್ತದೆ. ಇದು ನಮ್ಮ ಕಣ್ಣಿನ ಆರೋಗ್ಯವನ್ನು (Eyecare)  ಕಾಪಾಡುತ್ತದೆ. ಜೊತೆಗೆ ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೃಷ್ಟಿದೋಷ ನಿವಾರಣೆಯಾಗುತ್ತದೆ. 

5. ಶೀತ, ಕೆಮ್ಮು, ಜ್ವರ ನಿವಾರಕ
ಈರುಳ್ಳಿ ಸೊಪ್ಪಿನಲ್ಲಿ ಆಂಟಿಬ್ಯಾಕ್ಟೀರಿಯ ಮತ್ತು ಆಂಟಿ ವೈರಲ್ ಗುಣವಿದೆ. ವೈರಸ್ ಮತ್ತು ಜ್ವರದ ವಿರುದ್ಧ ಹೋರಾಡುವಲ್ಲಿ ಇದು ಅತ್ಯುಪಯೋಗಿ ಔಷಧಿ. ಚಳಿಗಾಲದಲ್ಲಿ (winter) ಇದು ತುಂಬಾ ಉಪಯೋಗಿ. 

ಇದನ್ನೂ ಓದಿ : Health Benefits Of Jaggery - ಹಾಲು ಬೆಲ್ಲದಿಂದಾಗುವ ಈ ಪ್ರಯೋಜನಗಳು ನಿಮಗೆ ತಿಳಿದಿದೆಯಾ?

6. ಎಲುಬನ್ನು ಸ್ಟ್ರಾಂಗ್ ಇಡುತ್ತದೆ
ಈರುಳ್ಳಿ ಸೊಪ್ಪಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ (Calcium) ಅಂಶ ಇರುತ್ತದೆ. ಕ್ಯಾಲ್ಸಿಯಂ ಯಾವತ್ತಿಗೂ ಎಲುಬನ್ನು ಗಟ್ಟಿಯಾಗಿಡುತ್ತದೆ. 
ಈರುಳ್ಳಿ ಸೊಪ್ಪನ್ನು ಸಲಾಡ್‍ ನಲ್ಲಿ ತಿನ್ನಬಹುದು. ಸಾಂಬಾರ್‍ಗೆ ಹಾಕಿ ತಿನ್ನಬಹುದು. ಪಲ್ಯಕ್ಕೆ ಸೇರಿಸಿ ತಿನ್ನಬಹುದು ಎಂದು ತಜ್ಞರು ಹೇಳುತ್ತಾರೆ. ತಜ್ಞರ ಪ್ರಕಾರ, ಈರುಳ್ಳಿ ಸೊಪ್ಪು ತಿನ್ನುವುದರಿಂದ ಆರೋಗ್ಯ ಸುಧಾರಣೆ ಆಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News