ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು  ಮೂಡುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಕೆಲವರು ಆನುವಂಶಿಕ ಕಾರಣಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವ್ಯವಸ್ಥೆಯ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳ ಕಾರಣದಿಂದಲೇ  ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಭರದಲ್ಲಿ ಜನರು, ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಇದರಿನದ ತಕ್ಷಣಕ್ಕೆ ಸಮಸ್ಯೆಯಿಂದ ಪರಿಹಾರ ಸಿಗಬಹುದು. ಆದರೆ ರಾಸಾಯನಿಕಗಳ ಬಳಕೆಯಿಂದ ಇದು ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ.  ಅಲ್ಲದೆ ಕೂದಲಿನ ಆರೋಗ್ಯ ಕೂಡಾ ಕೆಡುತ್ತದೆ. 


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ಕಪ್ಪಾಗಿಸಲು ಅತ್ಯುತ್ತಮ ನೈಸರ್ಗಿಕ ವಿಧಾನ :
ಕೂದಲನ್ನು ಹಾನಿಯಾಗದಂತೆ ರಕ್ಷಿಸಲು ಮತ್ತು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು,  ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ ದುಬಾರಿ ರಾಸಾಯನಿಕಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ  ಕೂದಲನ್ನು ಕಪ್ಪಾಗಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಉತ್ತಮ. 


ಇದನ್ನೂ ಓದಿ : ಬೇಸಿಗೆಯಲ್ಲಿ ಹಾಗಲಕಾಯಿ ತಿನ್ನೋದು ಎಷ್ಟು ಉತ್ತಮ!


ಬಿಳಿ ಕೂದಲು ಮತ್ತೆ ಕಪ್ಪಾಗಲು ಪರಿಹಾರಗಳು :
1. ಆಮ್ಲಾ ಪೌಡರ್ :
ಆಮ್ಲಾದಲ್ಲಿನ ಔಷಧೀಯ ಗುಣಗಳ ಬಗ್ಗೆ  ಎಲ್ಲರಿಗೂ ತಿಳಿದಿರುತ್ತದೆ. ಇದು ಕೂದಲನ್ನು ಬಲಗೊಳಿಸುವುದಲ್ಲದೆ, ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ, ಬಿಳಿ ಕೂದಲಿನ ಪರಿಹಾರವಾಗಿ ಕೂಡಾ ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು. 
1. ಮೊದಲನೆಯದಾಗಿ, ಒಂದು ಬಟ್ಟಲಿನಲ್ಲಿ ಆಮ್ಲಾ ಪುಡಿ ಬಿಸಿಯಾಗುವವರೆಗೆ ಬೇಯಿಸಿ. 
2. ನಂತರ ಅದಕ್ಕೆ ಸುಮಾರು 500 ಮಿಲಿ ತೆಂಗಿನೆಣ್ಣೆ ಸೇರಿಸಿ. 
3. ಈಗ ಕಡಿಮೆ ಉರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಬಿಸಿ ಮಾಡಿ.  
4. ನಂತರ ಗ್ಯಾಸ್ ಆಫ್ ಮಾಡಿ ಎಣ್ಣೆಯನ್ನು ತಣ್ಣಗಾಗಲು ಬಿಡಿ. 
5. ಸುಮಾರು 24 ಗಂಟೆಗಳ ನಂತರ ಅದನ್ನು ಬಾಟಲಿಯಲ್ಲಿ ಸಂಗ್ರಹಿಸಿ.
6. ಪ್ರತಿ 3 ದಿನಗಳ ನಂತರ ಕೂದಲಿಗೆ ಹಚ್ಚಿ. 
 ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. 


2. ಕರಿಬೇವಿನ ಎಲೆಗಳು :
ಖಾದ್ಯಗಳ ರುಚಿಯನ್ನು ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಈ ಎಲೆಗಳಿಗೆ ಕೂದಲು ಕಪ್ಪಾಗಿಸುವ ಶಕ್ತಿ ಕೂಡಾ ಇದೆ.  
1. 2 ಚಮಚ ಬ್ರಾಹ್ಮಿ ಪುಡಿ ಮತ್ತು 2 ಚಮಚ ಆಮ್ಲಾ ಪುಡಿಯನ್ನು ಕರಿಬೇವಿನ ಸೊಪ್ಪಿನ ಜೊತೆ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. 
2. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 30 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ  ತಲೆ ಕೂದಲನ್ನು ನೀರಿನಿಂದ ತೊಳೆಯಿರಿ.


ಇದನ್ನೂ ಓದಿ :  Weight Loss: ಐಸ್ ಕ್ರೀಂ-ಸಿಹಿ ತಿಂದು ತೂಕ ಇಳಿಕೆ ಮಾಡಿಕೊಂಡ ಮಹಿಳೆ!


3. ಬ್ಲಾಕ್ ಟೀ :  
ಬಿಳಿ ಕೂದಲನ್ನು ಕಪ್ಪಾಗಿಸಲು ಬ್ಲಾಕ್ ಟೀಯನ್ನು ಬಳಸಲಾಗುತ್ತದೆ.  
1. ಬ್ಲಾಕ್ ಟೀ ಯನ್ನು ಬೇಯಿಸಿ ಕೂದಲಿಗೆ ಸ್ನಾನ ಮಾಡಿದ ನಂತರ ಹಚ್ಚಿ ಕೊಳ್ಳಿ. ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಬಿಳಿ ಕೂದಲು ಮತ್ತೆ ಕಪ್ಪಾಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.