ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳಿಂದ ಬಿಳಿ ಕೂದಲಿನ ಸಮಸ್ಯೆ ಸಂಪೂರ್ಣ ನಿವಾರಣೆಯಾಗುತ್ತದೆ

ಜನರು ಬಿಳಿ ಕೂದಲನ್ನು ಮರೆಮಾಡಲು ಅನೇಕ ದುಬಾರಿ ಉತ್ಪನ್ನಗಳನ್ನು ಕೂಡಾ ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಅನೇಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.

Written by - Ranjitha R K | Last Updated : Apr 6, 2022, 02:13 PM IST
  • ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತಾ?
  • ಕೆಲವು ಸುಲಭವಾದ ಮನೆಮದ್ದುಗಳನ್ನು ಅನುಸರಿಸಿ
  • ಪರಿಣಾಮವು ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ
ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳಿಂದ ಬಿಳಿ ಕೂದಲಿನ ಸಮಸ್ಯೆ ಸಂಪೂರ್ಣ  ನಿವಾರಣೆಯಾಗುತ್ತದೆ  title=
white hair sollution (File photo)

ಬೆಂಗಳೂರು  : ವೃದ್ಧರು ಮಾತ್ರವಲ್ಲದೆ 25 ರಿಂದ 30 ವರ್ಷದ ಯುವಕ, ಯುವತಿಯರು ಕೂಡಾ  ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ (White Hair Problem). ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ (Unhealthy lifestyle)ಮತ್ತು ಕಳಪೆ ಆಹಾರ ಪದ್ಧತಿ. ಜನರು ಬಿಳಿ ಕೂದಲನ್ನು ಮರೆಮಾಡಲು ಅನೇಕ ದುಬಾರಿ ಉತ್ಪನ್ನಗಳನ್ನು ಕೂಡಾ ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಅನೇಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಹೀಗಿರುವಾಗ  ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. 

ಬಿಳಿ ಕೂದಲು ಕಪ್ಪಾಗಲು ಈ 3 ವಸ್ತುಗಳನ್ನು ಬಳಸಿ :
1. ತುಳಸಿ :
ತಜ್ಞರ ಪ್ರಕಾರ, ಪವಿತ್ರ ತುಳಸಿ ಎಲೆಗಳು (Tulsi leave) ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ. ಇದರ ಪರಿಣಾಮವು ಬಿಳಿ ಕೂದಲು ಕಪ್ಪಾಗುತ್ತದೆ. 

ಕೂದಲಿಗೆ ತ್ಯುಳಸಿ ಬಳಸುವ ವಿಧಾನ : 
1. ತುಳಸಿ ಎಲೆಗಳನ್ನು ತೆಗೆದುಕೊಳ್ಳಿ.
2. ನೆಲ್ಲಿಕಾಯಿ ಅಥವಾ ಅದರ ಎಲೆಗಳ ರಸವನ್ನು ಇಟ್ಟುಕೊಳ್ಳಿ 
3. ಅಷ್ಟೇ ಪ್ರಮಾಣದಲ್ಲಿ ಗರ್ಗದ ಎಲೆಯ ರಸವನ್ನು ತೆಗೆದುಕೊಳ್ಳಿ. 
4.ಮೇಲೆ ಹೇಳಿದ ಮೂರೂ ವಸ್ತುಗಳನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ. 

ಇದನ್ನೂ ಓದಿ : ಮೊಟ್ಟೆಗಳನ್ನು ತಿನ್ನುವುದರಿಂದ ಹೆಚ್ಚಾಗಲಿದೆಯೇ ಡಯಾಬಿಟೀಸ್ ? ಬಯಲಾಗಿದೆ ಆಘಾತಕಾರಿ ಸತ್ಯ

2. ಕರಿಬೇವಿನ ಎಲೆಗಳು :
ಕರಿಬೇವಿನ ಎಲೆಗಳಲ್ಲಿ (Curry leaves) ಬಯೋ ಆಕ್ಟಿವ್ ಅಂಶಗಳು ಕಂಡುಬರುತ್ತವೆ. ಇದು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಇದು ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ನಿವಾರಿಸುತ್ತದೆ.  ಇದಕ್ಕಾಗಿ ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಅಲ್ಲದೆ, ನೀವು ಹಚ್ಚುವ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಅದನ್ನು ಪ್ರತಿ ವಾರ ಬಳಸಿ.

3. ನಿಂಬೆ :
ನಿಂಬೆಯಲ್ಲಿರುವ ಅಂಶಗಳು ಕೂದಲನ್ನು ಕಪ್ಪಾಗಿಸುವಲ್ಲಿ ಪರಿಣಾಮಕಾರಿ ಎನ್ನಲಾಗಿದೆ. 

1.ಆಯುರ್ವೇದದ ಪ್ರಕಾರ, 15 ಮಿಲಿ ನಿಂಬೆ ರಸ ಮತ್ತು 20 ಗ್ರಾಂ ನೆಲ್ಲಿಕಾಯಿ ಪುಡಿಯನ್ನು ತೆಗೆದುಕೊಳ್ಳಿ.
2. ಈಗ ಇವೆರಡನ್ನು ಬೆರೆಸಿ ಪೇಸ್ಟ್ ಮಾಡಿ, ನಂತರ ಈ ಪೇಸ್ಟ್ ಅನ್ನು ತಲೆ ಕೂದಲಿಗೆ ಹಚ್ಚಿ .
3. ಒಂದು ಗಂಟೆ ಕೂದಲಿಗೆ ಬಿಟ್ಟ ನಂತರ ಕೂದಲನ್ನು ತೊಳೆಯಿರಿ. 
 ಕೆಲ ದಿನಗಳವರೆಗೆ ಇದನ್ನೂ ಬಳಸಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.  

ಇದನ್ನೂ ಓದಿ : Milk Side Effects: ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಹಾಲು ಕುಡಿಯಬೇಡಿ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪ್ರಿಸ್ಕ್ರಿಪ್ಷನ್‌ಗಳನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News